ಉಪಾಧ್ಯಕ್ಷರ ಜಪ ಮಾಡುತ್ತಿರುವ ತ್ಯಾಗರ್ತಿ ಪಿ.ಡಿ.ಒ,ಯೋಧರ ಕುಟುಂಬಕ್ಕೆ ತಿರಂಗ ಧ್ವಜ ತಲುಪಿಸಲಿಲ್ಲ !?


ಸಾಗರ :ತ್ಯಾಗರ್ತಿ ಗ್ರಾಮ ಪಂಚಾಯ್ತಿಯ ಅಭಿವೃದ್ಧಿಯ ಅಧಿಕಾರಿಗಳೇ.ಉಪಾಧ್ಯಕ್ಷರ ಜಪ ಮಾಡುವುದನ್ನು ನಿಲ್ಲಿಸಿ.ಪಂಚಾಯತಿ ವ್ಯಾಪ್ತಿಯ ಜನರಿಗೆ ಬೇಕಾದ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಿಕೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ.
ಚುನಾಯಿತ ಜನಪ್ರತಿನಿಧಿಗಳ ಅವಧಿ ಕೇವಲ 5ವರ್ಷ ಆದರೆ ನಿಮ್ಮ ಅಧಿಕಾರಾವಧಿ ಇಪ್ಪತ್ತೈದರಿಂದ ಮೂವತ್ತು ವರ್ಷ ಅಂದರೆ ನಿಮಗೆ ಅರುವತ್ತು ವರ್ಷ ತುಂಬುವ ತನಕ. ಜನಪ್ರತಿನಿಧಿ  ಆಗಬೇಕಾದರೆ ವಾಮಮಾರ್ಗದಲ್ಲಿ ಹಣ ಚೆಲ್ಲಬೇಕು ಇಲ್ಲದಿದ್ದರೆ ಯಾವ ಕ್ರಿಮಿಯು ಹತ್ತಿರ ಸುಳಿಯುವುದಿಲ್ಲ.

ನೀವು ಅಧಿಕಾರದ ಕುರ್ಚಿಯಲ್ಲಿ ಇರುವತನಕ ಜನಸಾಮಾನ್ಯರಿಗೆ ಸಾಧ್ಯವಾದಷ್ಟೂ ಪ್ರಾಮಾಣಿಕವಾಗಿ ಸರ್ಕಾರದ ಯೋಜನೆಗಳನ್ನು ತಲುಪಿಸುವತ್ತ ಗಮನಹರಿಸಿ."ಸರ್ಕಾರದ ಕೆಲಸ,ದೇವರ ಕೆಲಸ" ಎಂಬುದನ್ನು ಮರೆಯಬೇಡಿ.ಪ್ರತಿಯೊಂದು ವಿಚಾರಕ್ಕೂ ಉಪಾಧ್ಯಕ್ಷ ಜಪ ಮಾಡಬೇಡಿ, ಉಪಾಧ್ಯಕ್ಷರಗಿಂತ ಮೇಲೆ ಅಧ್ಯಕ್ಷರಿದ್ದಾರೆ ಎಂಬುದನ್ನು ಮರೆಯಬೇಡಿ.
ಗ್ರಾಮ ಪಂಚಾಯತಿಗೆ ಪ್ರಥಮಪ್ರಜೆ ಅಧ್ಯಕ್ಷರಾಗಿರುತ್ತಾರೆ ಆದರೆ ನೀವು ಪ್ರತಿಯೊಂದು ವಿಚಾರಕ್ಕೂ ಉಪಾಧ್ಯಕ್ಷರನ್ನು ಕೇಳುತ್ತೀರಾ ಇದು ಎಷ್ಟರಮಟ್ಟಿಗೆ ಸರಿ ?ಏಕೆ ಉಳಿದ ಸದಸ್ಯರನ್ನು ಕೇಳಬೋದು ಅಲ್ಲವೇ ?ಆದರೆ ಆ ಕೆಲಸ ನಿಮ್ಮಿಂದ ಆಗುತ್ತಿಲ್ಲ. ನಿಮ್ಮ ವ್ಯಾಪ್ತಿಯಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂದು ಪ್ರಶ್ನಿಸಿದರೆ  ನೀವು ಉಪಾಧ್ಯಕ್ಷ ಜಪ ಮಾಡುತ್ತೀರಾ ಏಕೆ ನಿಮಗೆ ಉತ್ತರ ಕೊಡುವ ಧೈರ್ಯ ಇಲ್ಲವೇ ?

ತಾವು ಭಾರತಮಾತೆಯ ಸೇವೆಯನ್ನ ಮಾಡಿ ನಿವೃತ್ತಿ ಹೊಂದಿ ಈಗ ಅಭಿವೃದ್ಧಿ  ಅಧಿಕಾರಿಗಳಾಗಿದ್ದೀರಿ.ಭವ್ಯ ಭಾರತದ ನಾಗರಿಕರ ರಕ್ಷಣೆಗಾಗಿ ಗಡಿಯಲ್ಲಿ ಭಯೋತ್ಪಾದಕರೊಡನೆ ಹೋರಾಟ ಮಾಡುವ ಮೂಲಕ ದೇಶ ಸೇವೆ ಮಾಡಿರುವ ನಿಮಗೆ ನಮ್ಮ ಮಾಧ್ಯಮದ ವತಿಯಿಂದ "ಬಿಗ್ ಸೆಲ್ಯೂಟ್"

ಆದರೆ ನೀವು ಅಭಿವೃದ್ಧಿ ಅಧಿಕಾರಿಗಳಾದ ಮೇಲೆ ಎಲ್ಲೋ ಒಂದು ಕಡೆ ನಿಮ್ಮ ಕರ್ತವ್ಯ ನಿಷ್ಠೆ ಜಾರುತ್ತಿದೆ ಎಂಬ ಅನುಮಾನ ಸಾರ್ವಜನಿಕರ ವಲಯದಲ್ಲಿ ಕಾಡುತ್ತಿದೆ.
ಅಭಿವೃದ್ಧಿ ಅಧಿಕಾರಿಗಳೇ.! ನಿಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಒಬ್ಬ ವೀರ ಯೋಧ ಇದ್ದಾರೆ ಎಂಬ ಮಾಹಿತಿ ನಿಮಗೆ ಇಲ್ಲವೇ?ಅವರು ಭಾರತ ಮಾತೆಯ ಸೇವೆಯನ್ನ ಕಳೆದ ಇಪ್ಪತ್ತು ವರ್ಷದಿಂದ ಮಾಡುತ್ತಿದ್ದಾರೆ ಎಂಬ ವಿಚಾರ ತಿಳಿದಿಲ್ಲವೇ ?ಅವರ ಮನೆಯ ಕುಟುಂಬಕ್ಕೂ ತಿರಂಗ ಧ್ವಜವನ್ನು ತಲುಪಿಸಬೇಕು ಎಂಬ ಪರಿಜ್ಞಾನ ನಿಮಗೆ ಇಲ್ಲವೇ ?ಹಾಗಾದರೆ ನೀವು ಜಪ ಮಾಡುತ್ತಿರುವ ಉಪಾಧ್ಯಕ್ಷರು ಈ ಮಾಹಿತಿ ನಿಮಗೆ ನೀಡಲಿಲ್ಲವೇ ?

ಹೌದು ಅಭಿವೃದ್ಧಿ ಅಧಿಕಾರಿಗಳೇ ನಿಮ್ಮ ಪಂಚಾಯಿತಿ ವ್ಯಾಪ್ತಿಯ ನಾಡವಳ್ಳಿ ಗ್ರಾಮದಲ್ಲಿ ಉಮೇಶ್ ಎಂಬ ವೀರಯೋಧ ಭಾರತಮಾತೆಯ ಸೇವೆಯನ್ನು ಕಳೆದ ಇಪ್ಪತ್ತು ವರ್ಷಗಳಿಂದ ಮಾಡುತ್ತಿದ್ದಾರೆ .ಈಗ ಛತ್ತೀಸ್ಗಡದ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ .ಇವರ ಕುಟುಂಬ ನಾಡವಳ್ಳಿ ಗ್ರಾಮದಲ್ಲಿ ವಾಸಿಸುತ್ತಿದೆ.ಇವರ ಇಬ್ಬರು ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಆದರೆ ಇವರ ಕುಟುಂಬಕ್ಕೆ ಅವರ ಮನೆಯ ಮೇಲೆ ತಿರಂಗ ಧ್ವಜ ಹಾರಿಸಲು ತಾವು ಗೌರವಾರ್ಥವಾಗಿ ಅವರ ಮನೆಗೆ ತೆರಳಿ ತಿರಂಗಾ ಧ್ವಜವನ್ನು ನೀಡುವ ಮೂಲಕ ನಿಮ್ಮ ದೇಶಭಕ್ತಿಯನ್ನು ಮೆರೆಯಬಹುದಿತ್ತು.

ಉಪಾಧ್ಯಕ್ಷರ ಜಪದಲ್ಲೇ ಮುಳುಗಿರುವ ನಿಮಗೆ ಈ ನೆನಪೂ ಬರಲಿಲ್ಲ ಅಲ್ಲವೇ ?ನಿನ್ನೆಯ ದಿನ ದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೀರ ಯೋಧ ಉಮೇಶ್ ಅವರು ನಮಗೆ ಫೋನ್ ಕರೆ ಮಾಡಿ ತಮ್ಮ ಮನಸ್ಸಿನ ನೋವನ್ನು ಹಂಚಿಕೊಂಡರು.
ದೇಶಕ್ಕಾಗಿ ಹೋರಾಡುತ್ತಿರುವ ವೀರ ಯೋಧನ ಕುಟುಂಬಕ್ಕೆ ತಿರಂಗ ಧ್ವಜ ತಲುಪಿಸಲು ಸಾಧ್ಯವಾಗದ ನೀವು ಅಭಿವೃದ್ಧಿ ಅಧಿಕಾರಿಗಳಾಗಿ ಹೇಗೆ ಜನಸಾಮಾನ್ಯರಿಗೆ ಕಷ್ಟಕ್ಕೆ ಸ್ಪಂದಿಸಿತೀರಾ?

ದೇಶ ಭಕ್ತರೇ.. 
ಸಾಗರ ತಾಲ್ಲೂಕು ತ್ಯಾಗರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಡವಳ್ಳಿ ಗ್ರಾಮದವರಾದ ಉಮೇಶ್ ಎಂಬ ವೀರ ಯೋಧರು ಛತ್ತೀಸ್ ಗಡದ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರ ಕುಟುಂಬ ನಾಡವಳ್ಳಿ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ .ಇವರ ಕುಟುಂಬಕ್ಕೆ ನರೇಂದ್ರ ಮೋದಿಜಿಯವರು ಕರೆ ನೀಡಿದ "ಹರ್ ಘರ್  ತಿರಂಗಾ" ಅಭಿಯಾನದ ಧ್ವಜವನ್ನು ನೀಡದೆ ತ್ಯಾಗರ್ತಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು  ನಿರ್ಲಕ್ಷವಹಿಸಿದ್ದಾರೆ.ಒಬ್ಬ ದೇಶ ಭಕ್ತರ ಕುಟುಂಬಕ್ಕೆ ತಿರಂಗಾ ಧ್ವಜವನ್ನು ಒದಗಿಸದೇ ಇರುವ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನೀವೇನನ್ನುತ್ತೀರಿ....?

Post a Comment

0 Comments