ಹರಿಹರ:ಹರಿಹರ ತಾಲ್ಲೂಕು ಗುತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಡಾವಣೆಗಳನ್ನು ಹರಿಹರ ನಗರಸಭೆಗೆ ಸೇರ್ಪಡೆಗೊಳಿಸಿದ ನಂತರ ಚಿಂತಾಮಣಿ ಬಡಾವಣೆಯ ಜನರಿಗೆ ಅಗತ್ಯ ಮೂಲಭೂತ ಸೌಲಭ್ಯಗಳು ಮರಿಚಿಕೆಯಾಗಿಯೇ ಉಳಿದಿವೆ.
ಕಳೆದ ನಲ್ವತ್ತು ವರ್ಷಗಳಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇದ್ದ ಸಂದರ್ಭದಲ್ಲಿಯೂ ಈಗ ನಗರಸಭೆಗೆ ಸೇರಿದ ಮೇಲೂ ಇಲ್ಲಿನ ಬಡಾವಣೆಯ ಜನರಿಗೆ ಅಗತ್ಯ ಮೂಲಭೂತ ಸೌಲಭ್ಯಗಳಾದ ಬೀದಿದೀಪ, ಕುಡಿಯುವ ನೀರು, ಚರಂಡಿಗಳ ಸ್ವಚ್ಛತೆ ಒದಗಿಸುವಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಬೇಜವಾಬ್ದಾರಿತನ ತೋರುತ್ತ ಬಂದಿದ್ದಾರೆ.ಇಲ್ಲಿ ವಾಸಿಸುವ ನಿವಾಸಿಗಳು ಸಂಬಂಧಪಟ್ಟ ಇಲಾಖೆಗಳಿಗೆ ಪ್ರತಿವರ್ಷ ಕಂದಾಯವನ್ನು ಕಟ್ಟುತ್ತಲೇ ಇದ್ದಾರೆ.ಆದರೆ ಇಲಾಖೆಯ ಅಧಿಕಾರಿಗಳು ಮಾತ್ರ ಇಲ್ಲಿನ ನಿವಾಸಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತಿಲ್ಲ ಎಂದು ಜೈ ಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಎಸ್. ಗೋವಿಂದ ಅವರು ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶವನ್ನ ನಮ್ಮ ಮಾಧ್ಯಮ ಪ್ರತಿನಿಧಿಯೊಂದಿಗೆ ಹೊರಹಾಕಿದರು.
ಚಿಂತಾಮಣಿ ಬಡಾವಣೆಯಲ್ಲಿ ವಾಸಿಸುವ ಜನರು ತಮ್ಮ ಬಡಾವಣೆಗೆ ಅಗತ್ಯ ಮೂಲಭೂತ ಸೌಲಭ್ಯಕ್ಕೆ ಆಗ್ರಹಿಸಿ ನಮ್ಮ ಧ್ವನಿಗೆ ಕೈಜೋಡಿಸಿ ಎಂದು ಮನವಿ ಮಾಡಿಕೊಂಡಿದ್ದರಿಂದ ಅವರ ಧ್ವನಿಗೆ ನಾವು ಕೈಜೋಡಿಸಿ ಎಂದು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.ಕೂಡಲೇ ಚಿಂತಾಮಣಿ ಬಡಾವಣೆಯ ಜನರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಇಲ್ಲದಿದ್ದರೆ ಮುಂದಿನ ದಿನದಲ್ಲಿ ನಗರಸಭೆಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಇದೇ ಸಂದರ್ಭದಲ್ಲಿ ನೀಡಿದರು.
ನಗರಸಭಾ ಆಯುಕ್ತರಾದ ಬಸವರಾಜ್ ಐ ಅವರು ಪ್ರತಿಭಟನಾನಿರತರ ಸ್ಥಳಕ್ಕೆ ಬಂದು ಪ್ರತಿಭಟನೆಯನ್ನು ಕೈಬಿಡುವಂತೆ ಮನವಿ ಮಾಡಿಕೊಂಡರು.ಮುಂದಿನ ದಿನದಲ್ಲಿ ಚಿಂತಾಮಣಿ ಬಡಾವಣೆಯ ಜನರಿಗೆ ಅಗತ್ಯ ಮೂಲಭೂತ ಸೌಲಭ್ಯವನ್ನು ಕೊಡಿಸುವ ನಿಟ್ಟಿನಲ್ಲಿ ಈಗಾಗಲೇ ಸಂಬಂಧಿಸಿದ ಇಲಾಖೆಯ ನೌಕರರಿಗೆ ತಿಳಿಸಿದ್ದೇನೆ ಕೂಡಲೇ ಪ್ರತಿಭಟನೆಯನ್ನು ಹಿಂದೆ ಪಡೆಯಿರಿ ಎಂದರು.
ಆಯುಕ್ತರ ಮನವಿಯ ಮೇಲೆ ಜೈ ಕರ್ನಾಟಕ ಸಂಘಟನೆ ಮತ್ತು ಚಿಂತಾಮಣಿ ಬಡಾವಣೆಯ ಜನರು ತಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು ಆಯುಕ್ತರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಮನವಿ ಪತ್ರ ಸ್ವೀಕರಿಸುವ ಸಂದರ್ಭದಲ್ಲಿ A.E.E ವಿನಯ್,ನಗರಸಭಾ ಸದಸ್ಯರಾದ ಆಟೊ ಹನುಮಂತಪ್ಪ ,ನಾಮ ನಿರ್ದೇಶಿತ ಸದಸ್ಯರಾದ ರಾಘವೇಂದ್ರ ಉಪಾಧ್ಯಾಯ,ಹರಿಹರ ವಿಧಾನಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿ ಚಂದ್ರಶೇಖರ್ ಪೂಜಾರ್ ,ತಪೋವನ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ನಿರ್ದೇಶಕರಾದ ಶಶಿಕುಮಾರ್ ಮೇರವಾಡೆ,ಜೈ ಕರ್ನಾಟಕ ಸಂಘಟನೆಯ ಕಾರ್ಯದರ್ಶಿ ಸುನೀಲ್ ಕುಮಾರ್ ಸಿ.ಹೆಚ್,ವಿದ್ಯಾರ್ಥಿ ಘಟಕದ ಅಧ್ಯಕ್ಷ ಶ್ರೀನಿವಾಸ,ವಿಜಯ್ ಮತ್ತು ಚಿಂತಾಮಣಿ ಬಡಾವಣೆಯ ವರಪುರುಷಣ್ಣ, ಶೇಷಾಚಲ ನಂದಿಗಾವಿ,ಅಶೋಕಗಳಗಿ,ಕರಿಬಸಪ್ಪ, ವರುಣಿ, ರಾಜಲಕ್ಷ್ಮಿ, ಶೈಲಾ, ಹಾಗೂ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.
0 Comments