ಹರಿಹರ :ಸಾರ್ವಜನಿಕ ವಿನಾಯಕ ಸಂಘ(ರಿ) ಗಾಂಧಿ ಮೈದಾನ ಇವರು 60 ನೇ ವರ್ಷದ ಶ್ರೀ ವಿನಾಯಕ ಮಹೋತ್ಸವದ ಅಂಗವಾಗಿ ನಗರದ ಗಾಂಧಿ ಮೈದಾನದಲ್ಲಿ ಗಿಚ್ಚಿ-ಗಿಲಿಗಿಲಿ ಕಾರ್ಯಕ್ರಮವನ್ನ ಆಯೋಜನೆ ಮಾಡಿದ್ದರು.ಆದರೆ ಗಣೇಶ ಹಬ್ಬದ ಸಂದರ್ಭದಲ್ಲಿ ಸುರಿದ ಭಾರಿ ಮಳೆಯಿಂದ ಗಿಚ್ಚಿ-ಗಿಲಿಗಿಲಿ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.
ಅಂದು ಮುಂದೂಡಲಾದ ಕಾರ್ಯಕ್ರಮವನ್ನ ಇಂದು ದಸರಾ ಹಬ್ಬದ ಪ್ರಯುಕ್ತ ಇದೇ ಶನಿವಾರ(1-10-22) ಸಂಜೆ 6 ಗಂಟೆಗೆ ನಗರದ ಗಾಂಧಿ ಮೈದಾನದಲ್ಲಿ ಗಿಚ್ಚಿ-ಗಿಲಿಗಿಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಾರ್ವಜನಿಕ ವಿನಾಯಕ ಸಂಘದ ಅಧ್ಯಕ್ಷರಾದ ನಂದಿಗಾವಿ ಶ್ರೀನಿವಾಸ್ ಇವರು ನಮ್ಮ ಮಾಧ್ಯಮ ಪ್ರತಿನಿಧಿಯೊಂದಿಗೆ ಕಾರ್ಯಕ್ರಮದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ತಾಲ್ಲೂಕಿನ ಸದ್ಭಕ್ತರು ಇದೇ ಶನಿವಾರ ಸಂಜೆ ಗಾಂಧಿ ಮೈದಾನದಲ್ಲಿ ನಡೆಯಲಿರುವ ಗಿಚ್ಚಿ- ಗಿಲಿಗಿಲಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹಾಸ್ಯ ಸಂಜೆಯ ರಸದೌತಣವನ್ನು ಸವಿಯುವಂತೆ ಮನವಿ ಮಾಡಿಕೊಳ್ಳಲಾಗಿದೆ.
0 Comments