ಹರಿಹರ:ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದಾವಣಗೆರೆ.ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹರಿಹರ.ಪ್ರಾಥಮಿಕ ಆರೋಗ್ಯ ಕೇಂದ್ರ ಹೊಳೆಸಿರಿಗೆರೆ.ರಕ್ತ ನಿಧಿ ಕೇಂದ್ರ ಚಿಗಟಗೇರಿ ಜಿಲ್ಲಾಸ್ಪತ್ರೆ ದಾವಣಗೆರೆ ಗ್ರಾಮ ಪಂಚಾಯ್ತಿ ಹೊಳೆಸಿರಿಗೆರೆ.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಹೊಳೆಸಿರಿಗೆರೆ ವಲಯ ಇವರ ಸಂಯುಕ್ತಾಶ್ರಯದಲ್ಲಿ ಗ್ರಾಮದ ಸಂಘ -ಸಂಸ್ಥೆಗಳ ಸಹಯೋಗದೊಂದಿಗೆ ಹೊಳೆಸಿರಿಗೆರೆಯ ಕಲ್ಲೇಶ್ವರ ಸಮುದಾಯಭವನದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಹೊಳೆಸಿರಿಗೆರೆ ಗ್ರಾಮದ ಹಿರಿಯ ಮುಖಂಡರಾದ ನಾಗನಗೌಡ್ರು ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸ್ವಯಂಪ್ರೇರಿತವಾಗಿ ರಕ್ತವನ್ನು ದಾನ ನೀಡಿದ ಶಿಬಿರಾರ್ಥಿಗಳಿಗೆ ಹಣ್ಣು ಹಂಪಲನ್ನು ಈ ಸಂದರ್ಭದಲ್ಲಿ ವಿತರಿಸಿದರು.
ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಈ ಸಂದರ್ಭದಲ್ಲಿ ನೀಡಲಾಯಿತು.
ಈ ಕಾರ್ಯಕ್ರಮದ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ರು ಹೊಳೆಸಿರಿಗೆರೆ ಗ್ರಾಮದ ಮುಖಂಡರಾದ ಪರಮೇಶ್ವರ ಗೌಡ್ರು,ಹೊಳೆಸಿರಿಗೆರೆ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಚೇತನ್,ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಂಯೋಜಕರಾದ ವಸಂತಕುಮಾರ್,ನಿವೃತ್ತ ಯೋಧರಾದ ಪರಶುರಾಮ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು,ಆಶಾ ಕಾರ್ಯಕರ್ತೆಯರು,ಗ್ರಾಮದ ಸಂಘ ಸಂಸ್ಥೆಯ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು,ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
0 Comments