ಹರಿಹರ:ಕರ್ನಾಟಕ ಕ್ರೀಡಾ ಪ್ರಾಧಿಕಾರ ಬೆಂಗಳೂರು. ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ದಾವಣಗೆರೆ.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದಾವಣಗೆರೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 19,20,ರಂದು ನಡೆದ ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಹರಿಹರದ ಟೇಕ್ವಾಂಡೋ ಕ್ರೀಡಾಪಟುಗಳು ಭಾಗವಹಿಸಿ 7ಬಾಲಕಿಯರು 4ಬಾಲಕರು ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ( ಸಿ ಎಂ ಕಪ್ ) ಭಾಗವಹಿಸಲು ಹರಿಹರ ತಾಲ್ಲೂಕಿನಿಂದ ಆಯ್ಕೆಯಾಗಿರುತ್ತಾರೆ.
ರಾಜ್ಯ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಟೇಕ್ವಾಂಡೋ ಕ್ರೀಡಾಪಟುಗಳಿಗೆ ದಾವಣಗೆರೆ ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಅಧ್ಯಕ್ಷರು ಪ್ರವೀಣ್ ಜಿ.ವಿ, ವೈದ್ಯರಾದ ವಿಶಾಲ್ ಸಿಂಗ್, ತರಬೇತುದಾರ ಮತ್ತು ಕಾರ್ಯದರ್ಶಿ ಪ್ರಭಾಕರ್ ಅವರು ಶುಭ ಹಾರೈಸಿದ್ದಾರೆ.
ಟೇಕ್ವಾಂಡೋ ಕ್ರೀಡಾಪಟುಗಳು ರಾಜ್ಯಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಬರಲಿ ಎಂದು ನಮ್ಮ ಮಾಧ್ಯಮವು ಶುಭ ಕೋರುತ್ತೇವೆ.
0 Comments