ಬೇಡಿಕೆಗಳ ಈಡೇರಿಕೆಗಾಗಿ ಹರಿಹರ ನಗರಸಭೆಯ ನೌಕರರಿಂದ ಕಪ್ಪುಪಟ್ಟಿ ಧರಣಿ.!?


ಹರಿಹರ:ರಾಜ್ಯದಲ್ಲಿರುವ ಎಲ್ಲಾ ಮಹಾನಗರ ಪಾಲಿಕೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದಿನಿಂದ ರಾಜ್ಯದ ಮಹಾನಗರ ಪಾಲಿಕೆಗಳು/ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವೃಂದದ ಪೌರಕಾರ್ಮಿಕರು/ನೌಕರರು/ದಿನಗೂಲಿ ನೌಕರರು ಸೇರಿದಂತೆ ವಿವಿಧ ರೀತಿಯಲ್ಲಿ     ನಗರಸಭೆಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿಗಳು ತಮ್ಮ ಕರ್ತವ್ಯದ ಸಂದರ್ಭದಲ್ಲಿ ಬಲ ತೋಳಿನ ಮೇಲೆ  ಕಪ್ಪುಪಟ್ಟಿ ಧರಿಸುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ತಮ್ಮ  ಹೋರಾಟವನ್ನ ಪ್ರಾರಂಭಿಸಿದ್ದಾರೆ.

ರಾಜ್ಯ ಸಂಘದ ಆದೇಶದಂತೆ ಹರಿಹರ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಹಾಗೂ ವಿವಿಧ ವೃಂದದ ಸಿಬ್ಬಂದಿಗಳು ಹಾಗೂ ಕಾರ್ಮಿಕರು ಇಂದು ತಮ್ಮ ಕರ್ತವ್ಯದ ಸಂದರ್ಭದಲ್ಲಿ ಬಲತೋಳಿನ ಮೇಲೆ ಕಪ್ಪುಪಟ್ಟಿ ಧರಿಸುವ ಮೂಲಕ ರಾಜ್ಯ ಸಂಘದ ಹೋರಾಟಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.
ಇಂದಿನಿಂದ 1ತಿಂಗಳುಗಳ ಕಾಲ ಅಂದರೆ ಮುಂದಿನ ತಿಂಗಳು 27/10/22 ರವರೆಗೆ ಹರಿಹರ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುವ ನೌಕರರು ಹಾಗೂ ವಿವಿಧ ವೃಂದದ ಸಿಬ್ಬಂದಿಗಳು ತಮ್ಮ  ಕರ್ತವ್ಯವನ್ನು ನಿರ್ವಹಿಸುವ ಸಂದರ್ಭದಲ್ಲಿ ಬಲತೋಳಿನ ಮೇಲೆ ಕಪ್ಪು ಪಟ್ಟಿಯನ್ನು ಧರಿಸಿ ತಮ್ಮ ಹೋರಾಟವನ್ನು ನಡೆಸಲಿದ್ದಾರೆ.

Post a Comment

0 Comments