ದಾವಣಗೆರೆ: ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಪ್ರತಿವರ್ಷ ಕೊಡಮಾಡುವ ಮಾಧ್ಯಮ ಪ್ರಶಸ್ತಿಗೆ ಹಿರಿಯ ಪತ್ರಕರ್ತರು,ಹರಿಹರ ನಗರವಾಣಿ ಪತ್ರಿಕೆಯ ಸಂಪಾದಕರಾದ ಸುರೇಶ್ ಕುಣಿಬೆಳಕೆರೆ ಸೇರಿದಂತೆ ನಾಲ್ವರು ಪತ್ರಕರ್ತರು ಆಯ್ಕೆಯಾಗಿದ್ದಾರೆ.
ವಿಜಯವಾಣಿಯ ಹಿರಿಯ ವರದಿಗಾರ ಡಿ.ಎಂ. ಮಹೇಶ್, ಹರಿಹರ ನಗರವಾಣಿ ಪತ್ರಿಕೆಯ ಸಂಪಾದಕ ಸುರೇಶ್ ಕುಣಿಬೆಳಕೆರೆ, ದಾವಣಗೆರೆ ಇಮೇಜ್ ಪತ್ರಿಕೆ ಸಂಪಾದಕ ಎ. ಫಕೃದ್ದೀನ್, ಒನ್ ಇಂಡಿಯಾ ಜಿಲ್ಲಾ ಸಂಯೋಜಕ ಮಲ್ಲಿಕಾರ್ಜುನ್ ಕೈದಾಳೆ, ಟಿವಿ೯ ಸುದ್ದಿ ವಾಹಿನಿಯ ಕ್ಯಾಮೆರಾಮೆನ್ ಆರ್. ಶಾಂತಕುಮಾರ್ ಈ ಬಾರಿಯ ಮಾಧ್ಯಮ ಪ್ರಶಸ್ತಿಗೆ ಭಾಜರಾಗಿದ್ದು, ಸೆ.೨೬ರಂದು ನಡೆಯಲಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ಪ್ರಧಾನಕಾರ್ಯದರ್ಶಿ ಡಾ. ಸಿ. ವರದರಾಜ್ ಮತ್ತು ಖಜಾಂಚಿ ಮಧು ನಾಗರಾಜ್ ಕುಂದುವಾಡ ತಿಳಿಸಿದ್ದಾರೆ.
0 Comments