ಹರಿಹರ:ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಯನ್ನು ಹೆಚ್ಚಿಸಲು ಹೇಗೆ ಪ್ರೋತ್ಸಾಹಿಸಬೇಕು ಎಂಬ ಶಿಕ್ಷಣವನ್ನು ಶಿಕ್ಷಕರು ಕಲಿಕೆಯ ಹಂತದಲ್ಲೇ ನೀಡಬೇಕು ಎಂದು ಹರಿಹರ ಕ್ಷೇತ್ರ ಶಿಕ್ಷಣಾಧಿಕಾರಿ ಬಿ ಸಿ ಸಿದ್ದಪ್ಪ ಅವರು ಹೇಳಿದರು.
ನಗರದ ಎಂಕೆಇಟಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳ ವೈಜ್ಞಾನಿಕ ಮನೋಭಾವನೆ ಹೆಚ್ಚಿಸಲು ಹೇಗೆ ಪ್ರೇೂತ್ಸಾಹಿಸಬೇಕು ಎಂಬುದನ್ನು ಸೂಕ್ತ ಉದಾಹರಣೆಗಳ ಸಮೇತ ಸವಿಸ್ತಾರವಾಗಿ ವಿವರಿಸಿ ಹೇಳಿದ ಅವರು ಸೌರಶಕ್ತಿಯ ಬಳಕೆಯನ್ನು ಅತ್ಯಂತ ಕಡಿಮೆ ಸಂಪನ್ಮೂಲಗಳನ್ನು ಬಳಸಿಕೊಂಡು ಹೇಗೆ ಮಾಡಬಹುದು ಕೃತಕ ಹಕ್ಕಿಗೂಡುಗಳನ್ನು ಹೇಗೆ ತಯಾರಿಸಬಹುದು ಎಂಬಿತ್ಯಾದಿ ವೈಜ್ಞಾನಿಕ ವಿಷಯಗಳನ್ನು ಸರಳವಾಗಿ ಮನಮುಟ್ಟುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿವರಿಸಿದರು.
ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಮುಂಬರುವ ಎಲ್ಲಾ ವಿಜ್ಞಾನ ಮತ್ತು ಗಣಿತ ಚಟುವಟಿಕೆಗಳಲ್ಲಿ ಹೆಚ್ಚು ಅಭಿವೃದ್ಧಿ ಸಾಧಿಸಿ ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸುವಂತೆ ಕರೆ ನೀಡಿದರು.
ಈ ಕಾರ್ಯಕ್ರಮದ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಭೂಮೇಶ್, ಎಂಕೆಇಟಿ ಪ್ರಾಧ್ಯಾಪಕರಾದ ವಿನೋದ್ ಹೆಗ್ಗಡೆ,ಪ್ರೌಢ ಶಾಲಾ ಮುಖ್ಯಶಿಕ್ಷಕರ ಸಂಘದ ಕಾರ್ಯದರ್ಶಿ ಸಿದ್ಧರಾಮೇಶ್,ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಈಶಪ್ಪ ಬೂದಿಹಾಳ ,ಕಾರ್ಯದರ್ಶಿ ಧನ್ಯಕುಮಾರ್ ,ಉಪನ್ಯಾಸಕರಾದ ಶ್ರೀಧರ್ ಮಾಯ್ಯ,ಗೌರವಾಧ್ಯಕ್ಷರಾದ ತಿಪ್ಪಣ್ಣ ರಾಜ್ ,ವಿಜ್ಞಾನ ವಿಷಯ ಬೋಧಕರ ವೇದಿಕೆಯ ಅಧ್ಯಕ್ಷರಾದ ಜಿ ಆರ್ ಮಂಜುನಾಥ್ ,ಕಾರ್ಯದರ್ಶಿ ಸಂತೋಷ್ ,ತಾಲ್ಲೂಕು ಆರೋಗ್ಯ ಹಿರಿಯ ನಿರೀಕ್ಷಕರಾದ ಎಂ ಉಮಣ್ಣ ,ಶಿಕ್ಷಣ ಸಂಯೋಜಕರು ಮಂಜುನಾಥ್ ಎಸ್ ಹಾಗೂ ತಾಲ್ಲೂಕು ಪ್ರೌಢಶಾಲಾ ವಿಜ್ಞಾನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
0 Comments