ಹರಿಹರ:ಹರಿಹರ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ.ಪ್ರಾಥಮಿಕ ಆರೋಗ್ಯ ಕೇಂದ್ರ ಬಿಳಸನೂರು. ಸಾರ್ವಜನಿಕರ ಆಸ್ಪತ್ರೆ ಹರಿಹರ. ಐ.ಸಿ.ಬಿ.ಸಿ. ವಿಭಾಗ ದಾವಣಗೆರೆ ರಕ್ತ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ರಾಜನಹಳ್ಳಿ ಉಪಕೇಂದ್ರ ಹಾಗೂ ಗ್ರಾಮ ಪಂಚಾಯತಿ ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ "ರಕ್ತದಾನ ಮಾಡಿ ಜೀವ ಉಳಿಸಿ" ಎಂಬ ಘೋಷ ವಾಕ್ಯದಡಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಈಗಾಗಲೇ ಬಿಳಸನೂರು ಆರೋಗ್ಯ ಕೇಂದ್ರದ ಸಿಬ್ಬಂದಿಗಳು,ಆರೋಗ್ಯ ಸಹಾಯಕಿಯರು, ಆಶಾ /ಅಂಗನವಾಡಿ ಕಾರ್ಯಕರ್ತೆಯರು,ಸ್ವಯಂ ಕಾರ್ಯಕರ್ತೆಯರು ಬಿಳಸನೂರು ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಪ್ರತಿ ಮನೆ ಮನೆಗೂ ತೆರಳಿ ಆರೋಗ್ಯವಂತ ವ್ಯಕ್ತಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.
0 Comments