ಹರಿಹರ ತಾಲ್ಲೂಕು ಕರವೇ ಘಟಕದ ವತಿಯಿಂದ ಕರವೇ ರಜತ ಮಹೋತ್ಸವ ಕಾರ್ಯಕ್ರಮ:ಪ್ರೀತಮ್ ಬಾಬು.


ಹರಿಹರ:ಕರ್ನಾಟಕ ರಕ್ಷಣಾ ವೇದಿಕೆಯ ಇಪ್ಪತ್ತೈದನೇ ವರ್ಷದ ರಜತ ಮಹೋತ್ಸವ ಹಾಗೂ ಮಹಿಳಾ ಘಟಕ ಉದ್ಘಾಟನೆ ಮತ್ತು ಪದಾಧಿಕಾರಿಗಳಿಗೆ ಗುರುತಿನ ಚೀಟಿ ಕಾರ್ಯಕ್ರಮವನ್ನು  ಹರಿಹರ ತಾಲ್ಲೂಕು ಕರವೇ ಘಟಕದ ವತಿಯಿಂದ ಇದೇ ಶನಿವಾರ ಮಧ್ಯಾಹ್ನ ನಗರದ ರಚನಾ ಕ್ರೀಡಾ ಕ್ಲಬ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಾಧ್ಯಕ್ಷ ಪ್ರೀತಮ್ ಬಾಬು ನಮ್ಮ ಮಾಧ್ಯಮ ಪ್ರತಿನಿಧಿಯೊಂದಿಗೆ ಕಾರ್ಯಕ್ರಮದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಶ್ರೀ ಆದಿಜಾಂಬವ ಬೃಹನ್ಮಠದ ಕೋಡಿಹಳ್ಳಿ ಪೀಠಾಧಿಪತಿಗಳಾದ ಶ್ರೀಶ್ರೀಶ್ರೀ ಷಡಕ್ಷರಿ ಮುನಿ ದೇಶಿಕೇಂದ್ರ ಮಹಾಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮದ ಉದ್ಘಾಟನೆಯನ್ನು ಹರಿಹರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್ ರಾಮಪ್ಪನವರು ನೆರವೇರಿಸಲಿದ್ದಾರೆ. 

ರಕ್ಷಣಾ ವೇದಿಕೆಯ ಪದಾಧಿಕಾರಿಗಳಿಗೆ ಗುರುತಿನ ಚೀಟಿಯನ್ನ ಹರಿಹರದ ಮಾಜಿ ಶಾಸಕರಾದ ಎಚ್ ಎಸ್ ಶಿವಶಂಕರ್ ಮತ್ತು ಬಿಪಿ ಹರೀಶ್ ವಿತರಣೆ ಮಾಡಲಿದ್ದಾರೆ.

ಕರವೇ ತಾಲ್ಲೂಕು ಅಧ್ಯಕ್ಷ ರಮೇಶ ಮಾನೆ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಡಿಟೂರ್ ಮಹೇಶ್ವರಪ್ಪ,ಜಮ್ಮನಹಳ್ಳಿ, ನಾಗರಾಜ್, ಲೋಕೇಶ್, ಐಗೂರು ಬಸವರಾಜ್, ನಾಗರಾಜ್ ಆದಾಪೂರ, ಸುಬ್ರಹ್ಮಣ್ಯ ನಾಡಿಗರ್, ಸುರೇಶ್ ಆರ್ ಕುಣೆಬೆಳಕೆರೆ,ಕವಿತಾ ಮಲ್ಲಿಕಾರ್ಜುನ್, ನಜೀರ್,ಶ್ರೀನಿವಾಸ  ಉಪಸ್ಥಿತಲಿರಲಿದ್ದಾರೆ.

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಾಧ್ಯಕ್ಷ ಹಾಗೂ ಉಪನ್ಯಾಸಕರಾದ ಪ್ರೀತಂ ಬಾಬು ನಡೆಸಲಿದ್ದಾರೆ ಎಂದರು.

Post a Comment

0 Comments