ಶಿವಮೊಗ್ಗ:ಅಧಿಕ ಮಳೆ ಹಾಗೂ ಶೀತ ವಾತಾವರಣದಿಂದಾಗಿ ಮಲೆನಾಡಿನಲ್ಲಿ ಅಡಿಕೆಗೆ ಕೊಳೆ ರೋಗದ ಆತಂಕದ ನಡುವೆಯೇ ಈಗ ಎಲೆಚುಕ್ಕಿ* *ರೋಗದ ಬಾಧೆ ಕಾಣಿಸಿಕೊಂಡಿದೆ. ಹೀಗಾಗಿ ಮರದಲ್ಲಿ ಚಿನ್ನದ ಬೆಳೆಯ ಕನಸಿಗೆ ಇವು ಕೊಳ್ಳಿ ಇಡುತ್ತಿವೆ. ಇದರಿಂದ ಬೇಸತ್ತ ಬೆಳೆಗಾರರು ಬೀದಿಗೆ ಇಳಿದಿದ್ದಾರೆ.
ಎಲೆಚುಕ್ಕಿ ರೋಗದಿಂದ ಹಾನಿಗೀಡಾದ ಅಡಿಕೆ ಬೆಳೆಗಾರರಿಗೆ ಸೂಕ್ತ ಪರಿಹಾರ ಕೊಡುವಂತೆ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಕೆಪಿಸಿಸಿ ವಾಕ್ತರಾದ ಗೋಪಾಲ ಕೃಷ್ಣ* *ಬೇಳೂರು ಒತ್ತಾಯಿಸಿದ್ದಾರೆ.
ಕೊಳೆ ರೋಗ ಹಾಗೂ ಎಲೆಚುಕ್ಕಿ ಬಾಧೆ ಮಲೆನಾಡಿನ ಅಡಿಕೆ ಬೆಳೆಗಾರರನ್ನು ದುಃಸ್ವಪ್ನವಾಗಿ ಕಾಡುತ್ತಿವೆ*.....*ಕರೂರು ಹೋಬಳಿ. ಬಾರಂಗಿ. ತುಂಬ್ರಿ. ಬ್ಯಾಕೊಡು.ನೆಲ್ಲಿಬೀಡು , ಹಾಬಿಗೆ, ನಿಟ್ಟೂರು, ವಿವಿಧ ಗ್ರಾಮಗಳಲ್ಲಿ ಮತ್ತೊಂದು ಆತಂಕ ಎದುರಾಗಿದೆ.* *"ಬಿಳಿ ಚಿಕ್ಕಿ, ರೋಗ ಅಥವಾ ಹಿಡಿಕುಂಟೆ"* ರೋಗ - ಬಂದು ತೋಟವೇ ಸರ್ವನಾಶ ಆಗುತ್ತಿದೆ. ಅಡಿಕೆ ಎಲೆಚುಕ್ಕಿ ತೀವ್ರವಾಗಿ ಬಾಧಿಸಿದೆ. ಅಡಿಕೆ ಗರಿಗಳಿಗೆ ಸಂಪೂರ್ಣ ಚುಕ್ಕಿ ತಗುಲಿದ್ದು, ಸಸಿಗಳಲ್ಲೂ ರೋಗದ ಲಕ್ಷಣಗಳಿವೆ.*ಇದಕ್ಕೆ ಸರ್ಕಾರ ಪರಿಣಾಮಕಾರಿ ಯೋಜನೆ ಜಾರಿಗೊಳಿಸಿ,ಸಂತ್ರಸ್ತ ರೈತರಿಗೆ ಪರಿಹಾರ ನೀಡಬೇಕು.ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಸರ್ಕಾರ ರೈತರಪರ ನಿಲ್ಲದೆ* *ಹೋದರೆ ಬೃಹತ್ ಪಾದ ಯಾತ್ರೆ ಮೂಲಕ ಪ್ರತಿಭಟನೆ ಮಾಡುವುದಾಗಿ ಗೋಪಾಲ ಕೃಷ್ಣ ಬೇಳೂರು ಎಚ್ಚರಿಸಿದ್ದಾರೆ.*
0 Comments