ಹರಿಹರ :ಕಳೆದ 3ದಿನಗಳ ಹಿಂದೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಹರಗನಹಳ್ಳಿ ಚೆಕ್ ಡ್ಯಾಂನಲ್ಲಿ ಇಬ್ಬರು ಯುವಕರು ಜಲಸಮಾಧಿಯಾಗಿರುವ ಘಟನೆಯು ಇಡೀ ತಾಲ್ಲೂಕಿನಲ್ಲಿ ಜನರಲ್ಲಿ ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ.
ಹರಿಹರ ನಗರದ ಆಶ್ರಯ ಬಡಾವಣೆಯ ಪವನ್(25) ಮತ್ತು ಪ್ರಕಾಶ್(24) ಎಂಬ ಸ್ನೇಹಿತರಿಬ್ಬರೂ ಹೇಮಂತ್ ಎಂಬ ಸ್ನೇಹಿತನ ಜತೆಗೆ ಕಳೆದ 3ದಿನಗಳ ಹಿಂದೆ ಹರಗನಹಳ್ಳಿ ಚೆಕ್ ಡ್ಯಾಮ್ ನ ಕಡೆ ತೆರಳಿದ್ದರು ಎಂಬ ಮಾಹಿತಿಯ ಮೇಲೆ ಹೇಳುವುದಾದರೆ ಈ ಇಬ್ಬರ ದುರಂತ ಸಾವುಗಳು ಆಕಸ್ಮಿಕವೋ? ಅಥವಾ ಬೇರೆ ಯಾವುದಾದರೂ ಹಿನ್ನಲೆ ಇದೆಯೋ? ಎಂಬ ಅನುಮಾನ ಕಾಡುತ್ತದೆ.
ಈಗಾಗಲೇ ಇಬ್ಬರ ಮೃತದೇಹಗಳು ಸಿಕ್ಕಿದ್ದು ಒಬ್ಬ ಮೃತದೇಹದ ಜೇಬಿನಲ್ಲಿ ಮೂರು ಪೋನುಗಳು ಇದ್ದವು ಎಂಬ ಮಾಹಿತಿ ಸಾರ್ವಜನಿಕರ ವಲಯದಲ್ಲಿ ಹರಿದಾಡುತ್ತಿದೆ.
ಮೂರು ಜನ ಸ್ನೇಹಿತರಲ್ಲಿ ಇಬ್ಬರು ನೀರುಪಾಲು ಆಗಿದ್ದಾರೆ .ಈ ದೃಶ್ಯವನ್ನ ಮೂರನೆಯ ಯುವಕ ಅಂದರೆ ಹೇಮಂತ್ ನೋಡಿದ್ದಾನೆ ಆದರೆ ಪೋಷಕರಿಗೆ ಮಾಹಿತಿ ತಿಳಿಸುವಲ್ಲಿ ಹಿಂದೇಟು ಹಾಕಿದ್ದಾನೆ.
ಇಬ್ಬರು ಸ್ನೇಹಿತರು ನೀರಿನಲ್ಲಿ ಮುಳುಗಿರುವ ವಿಚಾರವನ್ನ ಪೋಷಕರಿಗೆ ಅಥವಾ ಪೋಲೀಸರಿಗೆ ಏಕೆ ತಿಳಿಸಲಿಲ್ಲ ?ಕಳೆದ ಎರಡು ದಿನದ ಹಿಂದೆ ಪೋಷಕರು ನಮ್ಮ ಮಕ್ಕಳು ಕಾಣೆಯಾಗಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ನೀಡಲು ಠಾಣೆಗೆ ಬಂದಿದ್ದಾರೆ.ಆದರೆ ಪೋಲಿಸ ಠಾಣೆಯಲ್ಲಿ ಮೊದಲು ಪೋಷಕರ ದೂರನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.ಘಟನೆ ಕುಮಾರಪಟ್ಟಣಂ ಪೊಲೀಸ್ ಠಾಣಾ ಸರಹದ್ದಿಗೆ ಸಂಬಂಧಿಸಿದ್ದು ಅಲ್ಲಿ ದೂರನ್ನು ನೀಡಿ ಎಂದು ಕಳುಹಿಸಿದ್ದಾರೆ .ಕುಮಾರಪಟ್ಟಣಂ ಪೊಲೀಸ್ ಠಾಣೆಯವರು ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಯುವಕರು ಹರಿಹರ ನಗರದ ನಿವಾಸಿಗಳಾಗಿರುವುದರಿಂದ ಹರಿಹರ ನಗರ ಪೊಲೀಸ್ ಠಾಣಾ ಸರಹದ್ದಿಗೆ ಸಂಬಂಧಿಸಿರುತ್ತದೆ ಅಲ್ಲಿ ದೂರು ನೀಡಿ ಎಂದು ಪೋಷಕರಿಗೆ ತಿಳಿಸಿ ಕಳಿಸಿದ್ದಾರೆ.ನಂತರ ಪೋಷಕರು ತಮ್ಮ ಬಡಾವಣೆಯ ಕೆಲವು ಮುಖಂಡರ ಸಹಾಯದೊಂದಿಗೆ ಪೊಲೀಸ್ ಠಾಣೆಗೆ ತೆರಳಿ ನಮ್ಮ ಮಕ್ಕಳು ಕಾಣೆಯಾಗಿದ್ದಾರೆ ಎಂಬ ದೂರನ್ನು ನೀಡಲು ಹೋದ ನಂತರವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರನ್ನು ದಾಖಲಿಸಿಕೊಂಡ ಠಾಣಾಧಿಕಾರಿಗಳು ಕಾಣೆಯಾದ ಮಕ್ಕಳ ಹುಡುಕಾಟಕ್ಕೆ ತೀವ್ರ ಶೋಧ ನಡೆಸಿದ್ದಾರೆ .ಹೇಮಂತ್ ಎಂಬ ಯುವಕನ್ನು ಕರೆಸಿ ವಿಚಾರಣೆ ನಡೆಸಿದ ನಂತರವೇ ಯುವಕರು ನೀರು ಪಾಲಾದ ವಿಚಾರ ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದುಬಂದಿರುತ್ತದೆ.ಹೇಮಂತ್ ಎಂಬ ಯುವಕನ ಮಾಹಿತಿಯನ್ನು ಆಧರಿಸಿ ತುಂಗಭದ್ರಾ ನದಿಯ ದಡದಲ್ಲಿ ಅಗ್ನಿಶಾಮಕದಳದ ಸಹಾಯದೊಂದಿಗೆ ಮೃತದೇಹಗಳ ಹುಡುಕಾಟ ನಡೆಸಿದ್ದಾರೆ .ನಿನ್ನೆ ದಿನ ಇಬ್ಬರು ಯುವಕರ ಮೃತ ದೇಹಗಳು ದೊರಕಿದ್ದು ಈಗಾಗಲೇ ಶವಸಂಸ್ಕಾರವೂ ಮುಗಿಸಿರುತ್ತಾರೆ.
ಈ ಇಬ್ಬರ ಯುವಕರ ಸಾವಿನ ಹಿಂದೆ ಹತ್ತು ಹಲವು ಅನುಮಾನಗಳು ಸಾರ್ವಜನಿಕರ ವಲಯದಲ್ಲಿ ತೀವ್ರ ಚರ್ಚೆಗೆ ಮುನ್ನುಡಿ ಹಾಡಿದೆ.
ಚೆಕ್ ಡ್ಯಾಮ್ ಕಡೆ ತೆರೆದು ಮೂರು ಜನ ಯುವಕರು,ರೀಲ್ಸ್ ಹುಚ್ಚಾಟದಿಂದ ಚೆಕ್ ಡ್ಯಾಮ್ ನಲ್ಲಿ ಪ್ರಕಾಶ್ ಎಂಬ ಯುವಕ ಕಾಲುಜಾರಿ ಮೊದಲ ಬಿದ್ದಿದ್ದಾನೆ ಅವನನ್ನು ಕಾಪಾಡಲು ಎರಡನೆ ಯುವಕ ಪವನ್ ನದಿಗೆ ಹಾರಿದ್ದಾನೆ ಈ ಇಬ್ಬರು ಯುವಕರು ಈಜು ಬಾರದ ಕಾರಣ ಜಲಸಮಾಧಿಯಾಗಿದ್ದಾರೆ ಎಂಬ ಮಾಹಿತಿ ಒಂದು ಕಡೆಯಾದರೆ.ಮತ್ತೊಂದು ಮಾಹಿತಿ ಪ್ರಕಾರ ಮೂರು ಜನ ಯುವಕರು ನದಿಗೆ ಹಾರಿದ್ದಾರೆ? ಆದರೆ ಇಬ್ಬರು ಯುವಕರಿಗೆ ಈಜು ಬಾರದ ಕಾರಣ ಜಲಸಮಾಧಿಯಾಗಿದ್ದಾರೆ? ಮತ್ತೋರ್ವ ಯುವಕ ಈಜು ಬರುತ್ತಿರುವ ಕಾರಣ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದಾರೆ.(ಇದು ಸಾರ್ವಜನಿಕರ ವಲಯದಲ್ಲಿ ಚರ್ಚೆಯಾಗುತ್ತಿರುವ ಮಾತು)
ಪ್ರಾಣಾಪಾಯದಿಂದ ಪಾರಾಗಿ ಬಂದಿರುವ ಯುವಕ ಅಥವಾ ನದಿಗೆ ಕಾಲು ಜಾರಿ ಬಿದ್ದ ದೃಶ್ಯವನ್ನು ನೋಡಿದ ಯುವಕ ಹೇಮಂತ್ ಏಕೆ ಪೋಷಕರಿಗೆ ಅಂದೆ ಮಾಹಿತಿಯನ್ನೇ ತಿಳಿಸಲಿಲ್ಲ ?ಯುವಕ ಯಾರೊಂದಿಗಾದರೂ ಈ ಘಟನೆಯ ಕುರಿತು ಮಾಹಿತಿಯನ್ನು ಹಂಚಿಕೊಂಡಿರುತ್ತಾರೆ.ಅವರೇನಾದರೂ ಯುವಕನಿಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲೂ ಮಾಹಿತಿ ಹಂಚಿಕೊಳ್ಳದಂತೆ ಒತ್ತಡ ಹೇರಿದ್ದಾರೆಯೇ ?ಹಾಗಾದರೆ ಅವರ್ಯಾರು ? ಮೃತಪಟ್ಟ ಯುವಕ ಜೇಬಿನಲ್ಲಿ 3ಫೋನುಗಳು ಇತ್ತು ಎಂಬ ಮಾಹಿತಿ ಸಾರ್ವಜನಿಕರ ವಲಯದಲ್ಲಿ ಚರ್ಚೆಯಾಗುತ್ತಿದೆ ಹಾಗಾದರೆ ಮತ್ತೊಂದು ಫೋನು ಯಾರದ್ದು ?ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ ನಂತರವೇ ಈ ಘಟನೆ ಬೆಳಕಿಗೆ ಬರಲು ಸಾಧ್ಯವಾಯಿತು ?ಕಾಲು ಜಾರಿ ಬಿದ್ದಿದ್ದೆ ಆದರೆ ಯುವಕ ಪೋಷಕರಿಗಾಗಲಿ ಅಥವಾ ಪೊಲೀಸ್ ಠಾಣೆವರೆಗೂ ಮಾಹಿತಿ ತಿಳಿಸಬಹುದಿತ್ತು ಅಲ್ಲವೇ ?ಅಂದೆ ಮೃತದೇಹಗಳನ್ನ ಹುಡುಕಾಟ ನಡೆಸಲು ಸಾಧ್ಯವಾಗುತ್ತಿತ್ತು ?ಪೋಷಕರ ದೂರಿನ ನಂತರ ಮೃತದೇಹದ ಹುಡುಕಾಟ ನಡೆಸಿ ಕೊನೆಗೂ ಮೃತದೇಹಗಳು ಜಲಸಮಾಧಿಯಾಗಿದ್ದು ಅವುಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ಮತ್ತು ಅಗ್ನಿ ಶಾಮಕ ಸಿಬ್ಬಂದಿಗಳು ಯಶಸ್ವಿಯಾದರು ಈ ಸಾವುಗಳ ಹಿಂದೆ ಹಲವು ರೀತಿಯಲ್ಲಿ ಅನುಮಾನಗಳನ್ನು ಹುಟ್ಟುಹಾಕಿದ್ದು ಈಗಾಗಲೇ ತಾಲ್ಲೂಕಿನಾದ್ಯಂತ ಹೊಸ ಚರ್ಚೆಗಳು ನಡೆಯುತ್ತಿವೆ.
ದಾವಣಗೆರೆ ಜಿಲ್ಲೆಯ ಖಡಕ್ ಐಪಿಎಸ್ ಅಧಿಕಾರಿ ಗ್ರಾಮಾಂತರ ಡಿವೈಎಸ್ಪಿ ಕನ್ನಿಕಾ ಸಿಕ್ರಿವಾಲ್ ಇವರ ಹೆಗಲ ಮೇಲೆ ಈ ಸಾವಿನ ತನಿಖೆಯ ಜವಾಬ್ದಾರಿ ಬಿದ್ದಿದೆ ಅವರು ನಿಜವಾಗಲೂ ಈ ಸಾವಿನ ಬಗ್ಗೆ ಸಮಗ್ರವಾದ ತನಿಖೆ ನಡೆಸುತ್ತಾರೆ ಪೋಷಕರಿಗೆ ನ್ಯಾಯ ಒದಗಿಸುತ್ತಾರೆ ಎಂಬ ನಂಬಿಕೆ ತಾಲ್ಲೂಕಿನ ಜನರಿಗೆ ಇದೆ. ಆ ನಿಟ್ಟಿನಲ್ಲಿ ಗ್ರಾಮಾಂತರ ಡಿವೈಎಸ್ಪಿ ಕನ್ನಿಕಾ ಸಿಕ್ರಿ ವಾಲ ಅವರು ಈಗಾಗಲೇ ಪ್ರಾಥಮಿಕ ಹಂತದ ತನಿಖೆಯಿಂದ ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದು ಮೇಲ್ನೋಟಕ್ಕೆ ಇದು ಕಾಲು ಜಾರಿಬಿದ್ದ ಸಾವಾಗಿದ್ದರೂ ಇದರ ಹಿಂದೆ ಹತ್ತು ಅನುಮಾನಗಳು ಡಿವೈಎಸ್ಪಿ ಅವರಿಗೆ ಕಂಡುಬಂದಿದೆ .ಅವರು ಸಮಗ್ರವಾದ ತನಿಖೆ ನಡೆಸುವ ಮೂಲಕ ಈ ಸಾವಿನ ಹಿಂದೆ ಅಡಗಿರುವ ರಹಸ್ಯವನ್ನ ಭೇದಿಸುತ್ತಾರೆ ಮಕ್ಕಳ ಪೋಷಕರಿಗೆ ನ್ಯಾಯ ಒದಗಿಸುತ್ತಾರೆ ಎಂಬ ಅಚಲವಾದ ನಂಬಿಕೆ ಪೋಷಕರು ಮತ್ತು ತಾಲ್ಲೂಕಿನ ಜನರು ಕಾಯುತ್ತಿದ್ದಾರೆ .
ಎರಡು ಸಾವಿನ ಸುತ್ತ ಹತ್ತು ಹಲವು ಅನುಮಾನದ ಹುತ್ತ!? ಭೇದಿಸಬೇಕಾಗಿದೆ ಪೋಲಿಸ್ ಇಲಾಖೆ ....
ಕುತೂಹಲಭರಿತ ಮಾಹಿತಿಗಳೊಂದಿಗೆ ಸುದ್ದಿ ಮುಂದಿನ ಭಾಗದಲ್ಲಿ ಮುಂದುವರಿಯುತ್ತದೆ ..........
0 Comments