ಸಾಗರ:ರಾಹುಲ್ ಗಾಂಧಿ ನೇತೃತ್ವದ ಜೋಡೋ ಐಕ್ಯತಾ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ಸಾಗರ ತಾಲ್ಲೂಕಿನ ಕಾಂಗ್ರೆಸ್ ಕಾರ್ಯಕರ್ತ ಎಂ.ಎಲ್ ರಮೇಶ್ (62) ಹಿರಿಯೂರು ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಅಪಘಾತದಿಂದ ನಿನ್ನೆ ದಿನ ಮೃತಪಟ್ಟಿದ್ದರು.
ನಿನ್ನೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ರಮೇಶ್ ಇವರನ್ನು ಹಿರಿಯೂರು ಸರ್ಕಾರಿ ಆಸ್ಪತ್ರೆಗೆ ಸಾಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ,ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಹಾಗೂ ತಾಲ್ಲೂಕು ಪಂಚಾಯತ್ ಸದಸ್ಯ ಸೋಮಶೇಖರ ಲಾವಿಗೆರೆ ಇವರು ಹೆಚ್ಚಿನ ಮುತುವರ್ಜಿ ವಹಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದರು ಅಪಘಾತದಲ್ಲಿ ತೀವ್ರ ತರದ ಪೆಟ್ಟಾದ ಕಾರಣ ಅಧಿಕ ರಕ್ತಸ್ರಾವದಿಂದ ರಸ್ತೆಯ ಮಾರ್ಗದಲ್ಲಿ ರಮೇಶ್ ಎಂಬುವರು ಮೃತಪಟ್ಟರು.
ಕಾರ್ಯಕರ್ತನ ಸಾವಿನಿಂದ ನೊಂದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ನಿನ್ನೆ ಇಡೀ ರಾತ್ರಿ ಹಿರಿಯೂರಲ್ಲಿ ತಂಗಿದ್ದು ಇಂದು ಬೆಳಿಗ್ಗೆ ಮೃತ ಶವವನ್ನು ಪೋಸ್ಟ್ ಮಾರ್ಟಮ್ ಮಾಡಿಸಿ ಆಂಬುಲೆನ್ಸ್ ಮೂಲಕ ರಮೇಶ್ ಅವರ ಸ್ವಗ್ರಾಮ ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುತ್ತಾದಿಂಬ ಗ್ರಾಮಕ್ಕೆ ತಂದು ಅವರ ಕುಟುಂಬಕ್ಕೆ ಒಪ್ಪಿಸುವ ಮೂಲಕ ಮಾನವೀಯತೆಯನ್ನು ಮೆರೆದರು.
ಕಾರ್ಯಕರ್ತರಿದ್ದರೆ ಪಕ್ಷ. ಕಾರ್ಯಕರ್ತರ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸ ಬೇಕಾದದ್ದು ಪ್ರತಿ ನಾಯಕರ ಕರ್ತವ್ಯ ಆ ಕರ್ತವ್ಯವನ್ನು ನಿಭಾಯಿಸುವ ನಿಟ್ಟಿನಲ್ಲಿ ಯಾರು ಮೈಮರೆಯಬಾರದು ಹಾಗೂ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು.ಬೇಳೂರು ಗೋಪಾಲಕೃಷ್ಣ ಅವರು ರಮೇಶ್ ಅವರ ಮೃತ ದೇಹವನ್ನು ನಿನ್ನೆ ಇಡೀ ರಾತ್ರಿ ಆಸ್ಪತ್ರೆಯಲ್ಲೇ ಇದ್ದು,ಕಾದು ಇಂದು ಬೆಳಿಗ್ಗೆ ಸರ್ಕಾರಿ ಆಸ್ಪತ್ರೆಯಿಂದ ಪೋಸ್ಟ್ ಮಾರ್ಟಮ್ ಮಾಡಿಸಿ ತಾವೇ ಖುದ್ದಾಗಿ ಸ್ವಗ್ರಾಮದ ವರೆಗೂ ತೆರಳಿ ಶವ ಸಂಸ್ಕಾರ ಮುಗಿಸುವವರೆಗೂ ಇದ್ದು ಮೃತ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ ಕೊಡಿಸುವ ತನಕ ತಮ್ಮ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದಾರೆ.
ಕಾರ್ಯಕರ್ತನ ವಿಚಾರದಲ್ಲಿ ಬೇಳೂರು ಗೋಪಾಲಕೃಷ್ಣ ಅವರು ನಡೆದುಕೊಂಡ ರೀತಿ ಇಡೀ ಜಿಲ್ಲೆಯ ಜನತೆ ಪ್ರಶಂಸೆ ವ್ಯಕ್ತಪಡಿಸಿದೆ.ಬೇಳೂರು ಗೋಪಾಲಕೃಷ್ಣ "ಮಾನವೀಯತೆಯ ಸಾಹುಕಾರ" ಎಂದು ಕೊಂಡಾಡುತ್ತಿದೆ.ಅಷ್ಟೇ ಅಲ್ಲದೆ ಮೃತ ಕುಟುಂಬಕ್ಕೆ ಅತಿ ಹೆಚ್ಚಿನ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಕೊನೆಗೂ ಹತ್ತು ಲಕ್ಷ ಪರಿಹಾರವನ್ನು ಕೊಡಿಸಿದ್ದಾರೆ .
ಕಾಂಗ್ರೆಸ್ ಪಕ್ಷದ ವತಿಯಿಂದ ಪಕ್ಷದ ಕಾರ್ಯಕರ್ತರಿಗೆ ಹತ್ತು ಲಕ್ಷ ಪರಿಹಾರ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬೇಳೂರು ಗೋಪಾಲಕೃಷ್ಣ ಹಾಗೂ ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯ ಸೋಮಶೇಖರ ಲಾವಿಗೆರೆ ಸೇರಿದಂತೆ ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಡಿ. ಕೆ ಶಿವಕುಮಾರ ಅವರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಪಕ್ಷದ ಕಾರ್ಯಕರ್ತರ ಬಗ್ಗೆ ಅತ್ಯಂತ ಕಾಳಜಿ ಹೊಂದಿರುವ ಬೇಳೂರು ಗೋಪಾಲಕೃಷ್ಣ ಅವರು ನಿನ್ನೆ ದಿನ ನಡೆದ ಅವಘಡದಿಂದ ತುಂಬಾ ನೊಂದುಕೊಂಡಿದ್ದಾರೆ ಪಕ್ಷದ ಕಾರ್ಯಕರ್ತನ ಜೀವ ತರಲಾಗದಿದ್ದರೂ ಆ ಕುಟುಂಬಕ್ಕೆ ಏನಾದರೂ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬ ನಿಟ್ಟಿನಲ್ಲಿ ಭಾರಿ ಪ್ರಯತ್ನ ಪಟ್ಟಿದ್ದಾರೆ .ಕಾರ್ಯಕರ್ತನ ಶವವನ್ನು ಇಡೀ ರಾತ್ರಿ ಕಾದಿದ್ದಾರೆ .ಬೆಳಿಗ್ಗೆ ಅಂಬ್ಯುಲೆನ್ಸ್ ಸಹಾಯದಿಂದ ಸ್ವಗ್ರಾಮದ ವರೆಗೂ ತೆರಳಿ ಕುಟುಂಬಸ್ಥರಿಗೆ ಶವವನ್ನು ಹಸ್ತಾಂತರಿಸುವ ಮೂಲಕ ಶವಸಂಸ್ಕಾರ ಮುಗಿಸುವವರೆಗೂ ಇದ್ದು ತಮ್ಮ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸುವ ಮೂಲಕ ತಾಲ್ಲೂಕಿನ ಜನರಲ್ಲಿ ಅಚ್ಚಳಿಯದಂತೆ ಅತ್ಯುತ್ತಮ ಕಾರ್ಯವನ್ನು ಮಾಡಿದ್ದಾರೆ .ಆ ಮೂಲಕ ಮತ್ತೊಮ್ಮೆ ತಾವೊಬ್ಬ ಮಾನವೀಯ ಮೌಲ್ಯವನ್ನ ಹೊಂದಿರುವಂಥ ನಾಯಕ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಈಗಾಗಲೇ ಮೃತ ರಮೇಶ್ ಅವರ ಕುಟುಂಬಕ್ಕೆ ಕೆಪಿಸಿಸಿ ರಾಜ್ಯಾಧ್ಯಕ್ಷರು ಹತ್ತು ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಣೆ ಮಾಡಿದ್ದಾರೆ.ರಾಜ್ಯಾಧ್ಯಕ್ಷರು ಮೃತ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿರುವುದಕ್ಕೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ತಾಲ್ಲೂಕು ಪಂಚಾಯತ್ ಸದಸ್ಯ ಸೋಮಶೇಖರ್ ಲಾವಿಗ್ಗೆರೆ ಸೇರಿದಂತೆ ತಾಲ್ಲೂಕಿನ ಸಮಸ್ತ ನಾಗರಿಕರು ಅಭಿನಂದನೆಯನ್ನು ಸಲ್ಲಿಸಿದ್ದಾರೆ .ಕಾಂಗ್ರೆಸ್ ಪಕ್ಷ ಕಾರ್ಯಕರ್ತರ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುತ್ತದೆ ಎಂಬುದಕ್ಕೆ ಇದು ತಾಜಾ ಉದಾಹರಣೆಯಾಗಿದೆ.
ಇಂದು ಸಂಜೆ ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುತ್ತಾದಿಂಬ ಗ್ರಾಮದಲ್ಲಿ ಮೃತ ಕಾರ್ಯಕರ್ತ ರಮೇಶ್ ಇವರ ಅಂತ್ಯಸಂಸ್ಕಾರ ನಡೆದಿದೆ .
0 Comments