ರಾಣಿಬೆನ್ನೂರು :ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ತುಂಗಭದ್ರಾ ನದಿಯ ದಡದ ಮೇಲೆ ಇರುವ ಮುದೇನೂರು, ಕೋಟೆಹಾಳ,ನಿಟ್ಟುಪಳ್ಳಿ ಐರಣಿ,ಬೆಲೂರು,ಹಾವನೂರು ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯ ಬಗ್ಗೆ ಸದನದಲ್ಲಿ ವಿರೋಧ ಪಕ್ಷದವರು ಧ್ವನಿ ಎತ್ತುತ್ತಿಲ್ಲ, ಏಕೆ ?
ಸರ್ಕಾರದಿಂದ ಅನುಮತಿ ಪಡೆದು ನಡೆಸುತ್ತಿರುವವರು ಈ ಅಕ್ರಮ ಮರಳು ಗಣಿಗಾರಿಕೆಯಲ್ಲಿ ಕೋಟ್ಯಾಂತರ₹ಭ್ರಷ್ಟಾಚಾರ ನಡೆಸುತ್ತಿದ್ದಾರೆ.ತುಂಗಭದ್ರಾ ನದಿಯ ಒಡಲನ್ನು ತಮ್ಮ ಸಂಪತ್ತು ಎಂಬುವಂತೆ ಯಥೇಚ್ಛವಾಗಿ ಬಗೆಯುತ್ತಿದ್ದಾರೆ.ಹಗಲು ರಾತ್ರಿ ಎನ್ನದೆ ಸರ್ಕಾರದ ಮರಳು ನೀತಿಯನ್ನು ಉಲ್ಲಂಘಿಸಿ ತುಂಗಭದ್ರಾ ನದಿಯ ಒಡಲಿನಿಂದ ವರ್ಷಪೂರ್ತಿ ಮರಳನ್ನು ಅಕ್ರಮವಾಗಿ ತೆಗೆಯುತ್ತಿದ್ದಾರೆ ಮತ್ತು ಸಾಗಾಣಿಕೆ ಮಾಡುತ್ತಿದ್ದಾರೆ.ಈ ಅಕ್ರಮ ಮರಳು ಗಣಿಗಾರಿಕೆಯನ್ನು ಪ್ರಶ್ನಿಸಲು ಹೊರಡುವ ಪತ್ರಕರ್ತರ ಮೇಲೆ ಜಾತಿ ನಿಂದನೆಯಂತಹ ದೂರನ್ನು ದಾಖಲಿಸುವ ಬೆದರಿಕೆ ಹಾಕುತ್ತಿದ್ದಾರೆ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿ ಕೊಂಡಿರುವ ಅವಿದ್ಯಾವಂತ ಯುವಕರನ್ನು ಬಳಸಿಕೊಂಡು ಪತ್ರಕರ್ತರ ಮೇಲೆ ಹಲ್ಲೆಯಂತಹ ಪ್ರಕರಣವನ್ನ ನಡೆಸಿ ಕುತಂತ್ರದಿಂದ ಪತ್ರಕರ್ತರ ಮೇಲೆ ಸುಳ್ಳು ಆರೋಪ ಹೊರಿಸುವ ಮೂಲಕ ಅವರ ಮೇಲೆ ಜಾತಿ ನಿಂದನೆಯಂತಹ ದೂರುಗಳು ದಾಖಲಾಗುತ್ತಿವೆ ಇದು ಸಂವಿಧಾನದ ಸ್ಪಷ್ಟ ಉಲ್ಲಂಘನೆ ಆಗಿದ್ದರೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ.
ಹೇಳಿಕೇಳಿ ಇದು ಚುನಾವಣೆಯ ವರ್ಷ ಇಂಥ ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಯಾವ ಜನಪ್ರತಿನಿಧಿಯೂ ಧ್ವನಿ ಎತ್ತುವುದಿಲ್ಲ.ತಮ್ಮ ಚುನಾವಣೆಯ ಖರ್ಚಿಗೆ ಎಲ್ಲಿ ಹರಿದುಬರುತ್ತಿರುವ ಹಣ ನಿಲ್ಲುತ್ತವೆಯೋ ಎಂಬ ಭಯ .ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಸಂಬಂಧಿಸಿದ ರಾಜ್ಯ ಮಟ್ಟದ ಚುನಾಯಿತ ಜನಪ್ರತಿನಿಧಿಗಳಿಗೆ ಮತ್ತು ಇಲಾಖೆಯ ಅಧಿಕಾರಿಗಳಿಗೆ ಗೊತ್ತಿರದ ವಿಚಾರವೇನೂ ಅಲ್ಲ .ಈ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯ ಇಂಚಿಂಚು ಮಾಹಿತಿಯೂ ಚುನಾಯಿತ ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದ ಇಲಾಖೆಯ ಮೇಲಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ಇದೆ .ಆದ್ದರಿಂದಲೇ ಈ ಅಕ್ರಮ ಮರಳು ಗಣಿಗಾರಿಕೆ ರಾಜಾರೋಷವಾಗಿ ಸರ್ಕಾರದ ಮರಳು ನೀತಿಯನ್ನು ಉಲ್ಲಂಘಿಸಿ ಹಗಲು ರಾತ್ರಿ ಎನ್ನದೆ ತುಂಗಭದ್ರಾ ನದಿಯ ಒಡಲನ್ನು ಬಗೆದು ಅಕ್ರಮವಾಗಿ ಮರಳು ಸಂಗ್ರಹಣೆ ಮಾಡುತ್ತಿದ್ದಾರೆ ಮತ್ತು ಸಾಗಾಣಿಕೆ ಮಾಡುತ್ತಿದ್ದಾರೆ.
ಈ ಅಕ್ರಮಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದವರು ಪಾದಯಾತ್ರೆ ನಡೆಸಿದ್ದೆ ಆದರೆ ಮತ್ತೊಮ್ಮೆ ಬಳ್ಳಾರಿ ಘಟನೆ ಮರುಕಳಿಸುವುದರಲ್ಲಿ ಅನುಮಾನವಿಲ್ಲ .
ಹಾವೇರಿ ಮುಖ್ಯಮಂತ್ರಿಯವರ ತವರು ಜಿಲ್ಲೆ ಅವರಿಗೆ ರಾಣೇಬೆನ್ನೂರು ಅಚ್ಚುಮೆಚ್ಚಿನ ವಿಧಾನಸಭಾ ಕ್ಷೇತ್ರ .ಮುಖ್ಯಮಂತ್ರಿಯವರ ಹೆಸರನ್ನು ಹೇಳಿಕೊಂಡು ಬೇಳೆ ಬೇಯಿಸಿಕೊಳ್ಳುವವರ ಸಂಖ್ಯೆಗೇನೂ ಕಮ್ಮಿಯಿಲ್ಲ ಮುಖ್ಯಮಂತ್ರಿಯವರ ಜೊತೆ ಹಾಗೂ ಮಾಜಿ ಮುಖ್ಯಮಂತ್ರಿಯವರ ಜೊತೆ ಇರುವಂಥ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ನಾವು ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿ ಅವರೊಂದಿಗೆ ಉತ್ತಮವಾದ ಸಂಬಂಧ ಹೊಂದಿದ್ದೇವೆ ಎಂಬುವದನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಬಿಂಬಿಸುವ ಮೂಲಕ ಅವರ ಮೇಲೆ ಒತ್ತಡ ಹಾಕುವ ತಂತ್ರಗಳನ್ನು ಮಾಡುತ್ತಿದ್ದಾರೆ .
ಹಾಲಿ -ಮಾಜಿ ಮುಖ್ಯಮಂತ್ರಿಗಳ ಜೊತೆ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಕೆಲವು ಪುಡಾರಿ ನಾಯಕರೆನಿಸಿಕೊಂಡವರೇ ಈ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ಪಾಲುದಾರರಾಗಿದ್ದಾರೆ.
ಲೋಕಾಯುಕ್ತಕ್ಕೆ ಬಲ ಬಂದಿದೆ ಹಾವೇರಿ ಲೋಕಾಯುಕ್ತರು ರಾಣೆಬೆನ್ನೂರು ತಾಲ್ಲೂಕಿನಾದ್ಯಂತ ಗುತ್ತಿಗೆ ಆಧಾರದ ಮೇಲೆ ಅನುಮತಿಯನ್ನು ಪಡೆದು ಮರಳು ಗಣಿಗಾರಿಕೆ ನಡೆಸುತ್ತಿರುವವರ ಎಲ್ಲಾ ಲೆಕ್ಕಗಳನ್ನ ಪರಿಶೀಲನೆ ಮಾಡಬೇಕು.ಮರಳಿನ ಸುತ್ತ, ಮರಳು ಗಣಿಗಾರಿಕೆಯ ಸುತ್ತ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸ ಬೇಕು,ಅನುಮತಿ ಪಡೆದ ದಿನಾಂಕದಿಂದ ಇದುವರೆಗೂ ವಿತರಿಸಲಾದ ಪಾಸುಗಳ ಮತ್ತು ತನ್ನ ಲೆಕ್ಕದಲ್ಲಿ ಮರಳು ಸಾಗಾಣಿಕೆಯಾದ ಸಿಸಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಬೇಕು.ಮರಳು ಗಣಿಗಾರಿಕೆ ನಡೆಸುವ ದಿನಾಂಕದಿಂದ ಇದುವರೆಗೂ ಸರ್ಕಾರದ ಅರ್ಥಿಕ ಬೊಕ್ಕಸಕ್ಕೆ ಸಂದಾಯವಾದ ರಾಜ ಧನದ ಮೇಲೆ ಕಣ್ಣಾಡಿಸಬೇಕು ,ಸಾರಿಗೆ ಇಲಾಖೆಯ ಪಾತ್ರ ಹಾಗೂ ಅವರು ಇದುವರೆಗೂ ದಾಖಲಿಸಿಕೊಂಡಿರುವ ದೂರುಗಳ ಸಂಖ್ಯೆ ಮತ್ತು ಆಯಕಟ್ಟಿನ ಜಾಗದ ಸಿ.ಸಿ ಕ್ಯಾಮೆರಾಗಳ ಪರಿಶೀಲನೆ,ಭೂ ಮತ್ತು ಗಣಿ ಇಲಾಖೆಯವರು ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಇದುವರೆಗೂ ದಾಖಲಿಸಿಕೊಂಡ ದೂರುಗಳ ಸಂಖ್ಯೆ ಮತ್ತು ಸ್ಥಳ ಪರಿಶೀಲನೆಗೆ ಸಂಬಂಧಿಸಿದಂತೆ ಮಾಹಿತಿ ಮತ್ತು ಫೋಟೋಗಳು ಹಾಗೂ ಸರ್ಕಾರದ ಬೊಕ್ಕಸಕ್ಕೆ ಸಂದಾಯವಾದ ರಾಜಧನದ ಲೆಕ್ಕಾಚಾರಗಳು .ಕಂದಾಯ ಇಲಾಖೆಯ ಪಾತ್ರ ಹಾಗೂ ಕಂದಾಯ ಅಧಿಕಾರಿಗಳು ತೆಗೆದುಕೊಂಡಿರುವ ಕ್ರಮ ಮತ್ತು ಭೂ ಮತ್ತು ಗಣಿ, ಸಾರಿಗೆ ಹಾಗೂ ಕಂದಾಯ ಇಲಾಖೆಗೆ ಇದುವರೆಗೂ ಬಂದಿರುವ ಫೋನ್ ಕಾಲ್ ಗಳ ಮಾಹಿತಿ ಇದರ ಜೊತೆಗೆ ಮರಳು ದಾಸ್ತಾನು ಸ್ಥಳದಿಂದ ತಡರಾತ್ರಿ ಮರಳು ಸಾಗಾಣಿಕೆ ಆಗಿರುವಂತಹ ಸಿಸಿ ಕ್ಯಾಮೆರಾ ಮಾಹಿತಿಗಳು .ಸಂಬಂಧಪಟ್ಟ ರಸ್ತೆ ಮಾರ್ಗದ ಸಿಸಿ ಕ್ಯಾಮೆರಾಗಳ ಪರಿಶೀಲನೆ .ಸಂದರ್ಭಕ್ಕನುಸಾರವಾಗಿ ಸಿಸಿ ಕ್ಯಾಮೆರಾಗಳನ್ನ ಆನ್ ಮತ್ತು ಆಪ್ ಮಾಡಿರುವ ಹಿಂದಿನ ಕಾರಣ ಹೀಗೆ ಹತ್ತು ಹಲವಾರು ವಿಧದಲ್ಲಿ ಲೋಕಾಯುಕ್ತರು ತನಿಖೆ ನಡೆಸಿದರೆ ಕೋಟ್ಯಂತರ₹ಅಕ್ರಮ ಮರಳು ಗಣಿಗಾರಿಕೆಯಲ್ಲಿ ನಡೆದಿರುವ ಅವ್ಯವಹಾರದ ಸಂಪೂರ್ಣ ಮಾಹಿತಿ ಸಿಗಲಿದೆ ಇದರಿಂದ ಹಾಲಿ- ಮಾಜಿ ಮುಖ್ಯಮಂತ್ರಿಗಳ ಜೊತೆ ನಿಂತು ಫೋಟೊ ತೆಗೆಸಿಕೊಂಡವರು ಶ್ರೀ ಕೃಷ್ಣನ ಜನ್ಮಸ್ಥಾನದಲ್ಲಿ ಕಾಲ ಕಲಿಯುವುದರಲ್ಲಿ ಅನುಮಾನವಿಲ್ಲ .
ಲೋಕಾಯುಕ್ತರು ಕೂಡಲೇ ಹಾವೇರಿ ಜಿಲ್ಲೆಯ ಭೂ ಮತ್ತು ಗಣಿ ,ಸಾರಿಗೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳನ್ನು ತೀವ್ರ ತನಿಖೆಗೆ ಒಳಪಡಿಸುವ ಅಗತ್ಯವಿದೆ .ಆ ಮೂಲಕ ರಾಣೆಬೆನ್ನೂರು ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಬೇಕು .ಜನಸಾಮಾನ್ಯರು ಲೋಕಾಯುಕ್ತ ಸಂಸ್ಥೆಯ ಮೇಲೆ ಇಟ್ಟ ನಂಬಿಕೆ ಇಮ್ಮಡಿಯಾಗಬೇಕು.ಸುಪ್ರೀಂಕೋರ್ಟ್ ಈ ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖಾ ತಂಡವೊಂದನ್ನು ರಚಿಸಬೇಕು .ಈ ಅಕ್ರಮ ಮರಳು ಗಣಿಗಾರಿಕೆ ಸಂಬಂಧಿಸಿದಂತೆ ಸಮಗ್ರ ಮಾಹಿತಿಗಳನ್ನು ಪಡೆದು ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು.ಸರ್ಕಾರದ ಆರ್ಥಿಕ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿ ವಾಮಮಾರ್ಗದಲ್ಲಿ ಭ್ರಷ್ಟಾಚಾರದ ಮೂಲಕ ಆಸ್ತಿಪಾಸ್ತಿಗಳನ್ನು ಸಂಪಾದಿಸಿದವರ ಮೇಲೆ ಯಾವುದೇ ರೀತಿಯ ಮುಲಾಜಿಲ್ಲದೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುವ ಮೂಲಕ ಎಲ್ಲ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು .ಅಂತಹ ಕಾನೂನಿನ ಅವಶ್ಯಕತೆ ತುಂಬಾ ಇದೆ .
ನಮ್ಮ ಬರಹದ ಸುದ್ದಿಗೆ ಸಂಬಂಧಿಸಿದಂತೆ ಸಂಬಂಧಿಸಿದ ಲೋಕಾಯುಕ್ತರು ಹಾಗೂ ನ್ಯಾಯಮೂರ್ತಿಗಳು ಖುದ್ದು ಪರಿಶೀಲನೆ ನಡೆಸಬೇಕು ಒಂದು ವೇಳೆ ನಮ್ಮ ಬರಹದಲ್ಲಿ ಲೋಪ ಕಂಡು ಬಂದರೆ ನಮ್ಮ ಮೇಲೆ ಕಾನೂನು ರೀತಿಯಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಿ .
ವಿರೋಧ ಪಕ್ಷದವರು ತಮ್ಮ ಜವಾಬ್ದಾರಿಯನ್ನು ಮರೆಯಬಾರದು ಹಾವೇರಿ ಜಿಲ್ಲೆಯಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಸದನದಲ್ಲಿ ದೊಡ್ಡ ಮಟ್ಟದ ಧ್ವನಿ ಎತ್ತಬೇಕು .ಮುಖ್ಯಮಂತ್ರಿಗಳ ತವರು ಜಿಲ್ಲೆಗಳಲ್ಲೇ ಅಕ್ರಮಗಳನ್ನು ತಡೆಯಲು ಸಾಧ್ಯವಾಗದಿದ್ದಾಗ ಉಳಿದ ಜಿಲ್ಲೆಗಳ ಗತಿಯೇನು ಎಂಬ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಬೇಕು .ಸದ್ಯ ವಿರೋಧ ಪಕ್ಷದವರು ಒಮ್ಮೆ ಹಾವೇರಿ ಜಿಲ್ಲೆಯತ್ತ ಪಾದಯಾತ್ರೆ ನಡೆಸುವ ಅವಶ್ಯಕತೆ ತುಂಬಾ ಇದೆ .ನಿಮ್ಮ ಪಾದ ಯಾತ್ರೆ ಬಳ್ಳಾರಿಯ ದಾಖಲೆಯನ್ನು ಮುರಿಯುವುದರಲ್ಲಿ ಅನುಮಾನವಿಲ್ಲ ಇಲ್ಲಿಯೂ ಸಹ ದೊಡ್ಡ ದೊಡ್ಡ ಕುಳಗಳು ಕಂಬಿಗಳನ್ನ ಎಣಿಸುತ್ತ ಕಾಲ ಕಳೆಯುತ್ತವೆ.ಕೂಡಲೇ ವಿರೋಧ ಪಕ್ಷದವರು ಕಾರ್ಯಪ್ರವೃತ್ತರಾಗಿ ಹಾವೇರಿ ಜಿಲ್ಲೆಯಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಸಂಬಂಧಿಸಿದಂತೆ ದೊಡ್ಡಮಟ್ಟದ ಹೋರಾಟಕ್ಕೆ ಅಣಿಯಾಗಿ .
ಲೋಕಾಯುಕ್ತ ಸಂಸ್ಥೆ ಹಾವೇರಿ ಜಿಲ್ಲೆಯ ಭೂ ಮತ್ತು ಗಣಿ, ಕಂದಾಯ ಹಾಗೂ ಸಾರಿಗೆ ಇಲಾಖೆಯನ್ನು ತನಿಖೆಗೆ ಒಳಪಡಿಸಿ ಆಗ ಉಳಿದ ಇಲಾಖೆಯ ಸಂಪೂರ್ಣ ಮಾಹಿತಿ ನಿಮಗೆ ಲಭ್ಯವಾಗಲಿದೆ .ಲೋಕಾಯುಕ್ತ ಸಂಸ್ಥೆ ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಂಡು ಕೂಡಲೇ ರಾಣೆಬೆನ್ನೂರು ತಾಲ್ಲೂಕಿನಾದ್ಯಂತ ಸರ್ಕಾರದಿಂದ ಅನುಮತಿ ಪಡೆದು ನಡೆಸುತ್ತಿರುವ ಮರಳು ಗಣಿಗಾರಿಕೆಗೆ ಮಾಲೀಕರನ್ನು ತನಿಖೆಗೆ ಒಳಪಡಿಸಿ .ಅವರ ಆಸ್ತಿಪಾಸ್ತಿಗಳ ಸಮಗ್ರ ಮಾಹಿತಿ ಪಡೆಯಿರಿ .ಒಟ್ಟಾರೆಯಾಗಿ ರಾಷ್ಟ್ರೀಯ ಸಂಪತ್ತು, ನೈಸರ್ಗಿಕ ಸಂಪತ್ತು, ನದಿ ಮೂಲವನ್ನು ಉಳಿಸಿಕೊಡಿ. ಜನ- ಜಾನುವಾರುಗಳಿಗೆ ಅನುಕೂಲ ಮಾಡಿಕೊಡಿ.
0 Comments