ಹರಿಹರ ನಗರಸಭೆಯಲ್ಲಿ ಕೋಟ್ಯಂತರ ₹ ಭ್ರಷ್ಟಾಚಾರ, ಲೋಕಾಯುಕ್ತಕ್ಕೆ ದೂರು:ವಿಜಯ್ ಕುಮಾರ್ ಗಂಭೀರ ಆರೋಪ.

ಹರಿಹರ:ಹರಿಹರ ನಗರಸಭೆಯ ಹಿಂದಿನ ಆಯುಕ್ತರ ಅವಧಿಯಲ್ಲಿ ಕೋಟ್ಯಂತರ₹ ಅವ್ಯವಹಾರ ನಡೆದಿದ್ದು ಲೋಕಾಯುಕ್ತ ತನಿಖೆಗಾಗಿ ಶೀಘ್ರದಲ್ಲೇ ದೂರು ನೀಡಲಾಗುವುದು ಎಂದು ಹರಿಹರ ನಗರಸಭೆಯ ಸದಸ್ಯರಾದ ಎ.ಬಿ.ಎಂ ವಿಜಯಕುಮಾರ್ ಅಶ್ವಿನಿ ಕೃಷ್ಣ ಹೇಳಿದರು.
ಈ ಹಿಂದಿನ ನಗರಸಭೆಯ ಆಯುಕ್ತರ ವಿರುದ್ಧ ಗಂಭೀರವಾದ ಆರೋಪವನ್ನು ಮಾಡುವ ಮೂಲಕ ಅವರ ಅವಧಿಯಲ್ಲಿ ನಗರ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಂದಂತಹ ಅನುದಾನದಲ್ಲಿ ಕೋಟ್ಯಂತರ₹ಅವ್ಯವಹಾರವನ್ನು ಅಂದಿನ ಆಯುಕ್ತರು ಮತ್ತು ಕೆಲ ಇಂಜಿನಿಯರು ಮತ್ತು ಕೆಲವು ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದ್ದಾರೆ ಈ ಕುರಿತು ಶೀಘ್ರದಲ್ಲೇ ಲೋಕಾಯುಕ್ತರಿಗೆ ದೂರು ನೀಡಲಾಗುವುದು.

ಲೋಕಾಯುಕ್ತರು ಹರಿಯರ ನಗರಸಭೆಗೆ ಸಂಬಂಧಿಸಿದಂತೆ ಸಮಗ್ರವಾದ ದಾಖಲೆಗಳನ್ನು ಪರಿಶೀಲಿಸಿದರೆ ಕೋಟ್ಯಾಂತರ₹ಭ್ರಷ್ಟಾಚಾರ ಬಯಲಿಗೆ ಬರಲಿದೆ.

ಘನತ್ಯಾಜ್ಯ ವಿಲೇವಾರಿ ಘಟಕದ ಶೆಡ್ ನಿರ್ಮಾಣ,ಅರುವತ್ತ 5ಕೋಟಿ ವೆಚ್ಚದ ಯುಜಿಡಿ ಕಾಮಗಾರಿ,ಜಲಸಿರಿ ಯೋಜನೆ ಅಪೂರ್ಣ ಹಾಗೂ ಕಳಪೆ ಕಾಮಗಾರಿ ನಡೆದಿದ್ದರೂ ಗುತ್ತಿಗೆದಾರರಿಗೆ ಪೂರ್ಣ ಹಣ ಪಾವತಿ,ಹದಿ4ಮತ್ತು ಹದಿನೈದು ನೇ ಹಣಕಾಸು ಯೋಜನೆ ಅಡಿಯಲ್ಲಿ ಕೈಗೊಂಡಿರುವ ಕಾಮಗಾರಿಗೆ ಎರೆಡೆರಡು ಬಾರಿ ಬಿಲ್ ಪಾವತಿ,ನಗರದ ಕೆಲ ವಾರ್ಡ್ ಗಳಲ್ಲಿ ಮಿನಿ ವಾಟರ್ ಪ್ಲಾಂಟ್ ನಿರ್ಮಾಣದಲ್ಲಿ ಭ್ರಷ್ಟಾಚಾರದ ವಾಸನೆ,ಬ್ಲೀಚಿಂಗ್ ಪೌಡರ್ ನಲ್ಲಿ ಅವ್ಯವಹಾರ ,ಎಕ್ಸ್ ಪ್ರೆಸ್ ವಿದ್ಯುತ್ ಲೈನ್ ಅಳವಡಿಕೆಯಲ್ಲಿ ಭ್ರಷ್ಟಾಚಾರ ಕೇವಲ 3500 ರೂಪಾಯಿಗೆ ಸಿಗಬಹುದಾದಂತ ಎಲ್ಇಡಿ ಬಲ್ಬ್ಗಳನ್ನು 7500 ರೂಪಾಯಿಗೆ ಖರೀದಿ ಮಾಡಿರುವುದು,ರಸ್ತೆ ದುರಸ್ತಿಗೆ ಡ್ರಾವಲ್ ಹಾಕದೆ ನಲ್ವತ್ತು ಲಕ್ಷ₹ಗುಳುಂ ಸ್ವಾಹ ಮಾಡಿರುವುದು,ತರಕಾರಿ ಮಾರ್ಕೆಟ್ ನಿರ್ಮಾಣ ಕಾಮಗಾರಿಯಲ್ಲಿ ಲಕ್ಷಾಂತರ₹ಹಣವನ್ನ ಪಂಗನಾಮ ಹಾಕಿರುವುದು ಸೇರಿದಂತೆ ನಗರದ ಅಭಿವೃದ್ಧಿಗೆ ಬಂದಿರುವ ಬಹುತೇಕ ಹಣವನ್ನು ತಮ್ಮ ಅಭಿವೃದ್ಧಿಗೆ ಬಳಸಿಕೊಳ್ಳುವ ಮೂಲಕ ನಗರ ಅಭಿವೃದ್ಧಿ ಕುಂಠಿತಕ್ಕೆ ನೇರ ಕಾರಣರಾಗಿದ್ದಾರೆ ಎಂಬ ಆರೋಪವನ್ನ ಎಬಿಎಂ ವಿಜಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಂಡರು.

ಹರಿಹರ ನಗರ ಅಭಿವೃದ್ಧಿಗೆ "ಲಕ್ಷ್ಮಿ ಕಟಾಕ್ಷ ಹೋಮ"ದ ಅವಶ್ಯಕತೆ ತುಂಬಾ ಇತ್ತು.ನಗರ ಅಭಿವೃದ್ಧಿ ಏಕೆ ಆಗುತ್ತಿಲ್ಲ ಎಂಬುದಕ್ಕೆ "ಲಕ್ಷ್ಮಿ ಕಟಾಕ್ಷ ಹೋಮ"ನಡೆಸದೇ ಇರುವುದು ಕಾರಣವಾಯಿತು.ಈ ಹೋಮ ಅಂದೇ ನಡೆಸಿದ್ದಿದ್ದರೆ ಕೋಟ್ಯಾಂತರ₹ಭ್ರಷ್ಟಾಚಾರ  ತಡೆಯಬಹುದಿತ್ತು.ಜನಸಾಮಾನ್ಯರ ತೆರಿಗೆಯ ಹಣ ಈ ರೀತಿಯಾಗಿ ದುರುಪಯೋಗಪಡಿಸಿಕೊಳ್ಳಲಾಗಿದೆ. ಈ ಭ್ರಷ್ಟಾಚಾರದಲ್ಲಿ ನಗರಸಭೆಯ ಅಂದಿನ ಕೆಲವು ಇಂಜಿನಿಯರ್ ಗಳು ಮತ್ತು ಇತರ ಅಧಿಕಾರಿಗಳು ಶಾಮೀಲಾಗಿದ್ದಾರೆ.ಇವರೆಲ್ಲರನ್ನೂ ಲೋಕಾಯುಕ್ತ ತನಿಖೆ ನಡೆಸಿದ್ದೇ ಆದರೆ ಶ್ರೀ ಕೃಷ್ಣನ ಜನ್ಮಸ್ಥಾನದಲ್ಲಿ ಕಾಲಕಳೆಯುವುದರಲ್ಲಿ ಅನುಮಾನವೇ ಇಲ್ಲ.

ಅಂದಿನ ನಗರಸಭೆ ಆಯುಕ್ತರಿಗೆ ಸಂಬಂಧಿಸಿದಂತೆ ನಮ್ಮ ಮಾಧ್ಯಮವು ಹಲವು ರೀತಿಯಲ್ಲಿ ಸುದ್ದಿಯನ್ನು ನಿರಂತರವಾಗಿ ಪ್ರಕಟಿಸಿತ್ತು.ಜನಸಾಮಾನ್ಯರ ತೆರಿಗೆಯ ಹಣ ಪೋಲಾಗಬಾರದು ಅವರಿಗೆ ನ್ಯಾಯಯುತವಾದ ಸೌಲಭ್ಯಗಳು ದೊರೆಯಬೇಕು ಎಂಬ ಉದ್ದೇಶದಿಂದ ಸುದ್ದಿಯನ್ನ ಪ್ರಕಟಿಸಿದ್ದೇವೆ ಆ ಮೂಲಕ ಅಂದಿನ ಆಯುಕ್ತರ ಕೆಂಗೆಣ್ಣಿಗೆ ನಮ್ಮ ಮಾಧ್ಯಮ ಗುರಿಯಾಗಿತ್ತು.ಆದರೂ ನಾವು ಯಾವುದಕ್ಕೂ ಅಂಜದೆ ಅಳುಕದೆ ನಮ್ಮ ಮಾಧ್ಯಮ ಧರ್ಮವನ್ನ ಕಾಯಾ, ವಾಚಾ, ಮನಸಾ ಪಾಲಿಸುತ್ತಾ ಭ್ರಷ್ಟ ಅಧಿಕಾರಿಗಳಿಗೆ ಸಿಂಹ ಸ್ವಪ್ನವಾಗಿ ನಮ್ಮ ಬರಹವನ್ನ ಮುಂದುವರಿಸಲಾಯಿತು.
ನಮ್ಮ ಮಾಧ್ಯಮವು ಹರಿಹರ ನಗರಸಭೆ ಆಯುಕ್ತರ ವಿರುದ್ದ ಲೋಕಾಯುಕ್ತ ತನಿಖೆ ಯಾವಾಗ ಎಂಬ ಶೀರ್ಷಿಕೆ ಅಡಿಯಲ್ಲಿ ದೊಡ್ಡ ಸುದ್ದಿಯನ್ನ ಅಂದೇ ಮಾಡಲಾಯಿತ್ತು.ಮತ್ತೊಮ್ಮೆ ಒತ್ತಿ,ಒತ್ತಿ ಹೇಳುತ್ತೇವೆ ಅಂದಿನ ಆಯುಕ್ತರ ಅವಧಿಯಲ್ಲಿ ಕೋಟ್ಯಂತರ ರೂ ಅವ್ಯವಹಾರ ನಡೆದಿದ್ದು ಸತ್ಯವೇ ಆಗಿದೆ ಕೂಡಲೇ ಲೋಕಾಯುಕ್ತರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು.ಕೂಡಲೇ ಅಂದಿನ ಆಯುಕ್ತರ ಹಾಗೂ ಆಯುಕ್ತರ ಸಂಬಂಧಿಕರ ಹೆಸರಿನಲ್ಲಿರುವ ಆಸ್ತಿ- ಪಾಸ್ತಿಗಳ ತನಿಖೆ ನಡೆಯಬೇಕು.ಜನದಟ್ಟಣೆಯ ಪ್ರದೇಶದಲ್ಲಿ ಗ್ಯಾಸ್ ಬಂಕ್ ನಿರ್ಮಾಣವಾಗಿದೆ ಇದರಲ್ಲಿಯೂ ಸಹ ಲಕ್ಷಾಂತರ₹ಭ್ರಷ್ಟಾಚಾರ ನಡೆದಿದೆ ಈ ಸಂದರ್ಭದಲ್ಲಿ ಅಂದಿನ ಯೋಜನಾಧಿಕಾರಿಗಳನ್ನು ಸಹ ತನಿಖೆಗೆ ಒಳಪಡಿಸಬೇಕು.

ಒಟ್ಟಾರೆಯಾಗಿ "ಲಕ್ಷ-ಲಕ್ಷ ಹಣದ ಮೇಲೆ ಲಕ್ಷ್ಮಿಯ ನರ್ತನ"ಕಾದಿದೆ ಶ್ರೀಕೃಷ್ಣನ ಜನ್ಮಸ್ಥಾನ.....

ಬರಹ ಮುಂದುವರಿಯುತ್ತದೆ .......

Post a Comment

0 Comments