ಸುಣ್ಣಬಣ್ಣವಿಲ್ಲದೇ ಕಂಗೊಳಿಸುತ್ತಿರುವ ಸಾಗರದ ಹೆಡ್ ಪೋಸ್ಟ್ ಆಫೀಸ್ .!!


ಸಾಗರ:ಸಾಗರ ತಾಲ್ಲೂಕಿನ ನಗರದ ಹೃದಯ ಭಾಗದಲ್ಲಿರುವ ಪೋಸ್ಟ್ ಆಫೀಸ್ (ಅಂಚೆ ಕಚೇರಿ ) ಅಂದರೆ ತಾಲ್ಲೂಕಿನ ಹೆಡ್ ಪೋಸ್ಟ್ ಆಫೀಸ್ ತಾಲ್ಲೂಕಿನ ಜನರಿಗೆ ಸ್ವಚ್ಛತೆಯ ಪಾಠವನ್ನು ಸಾರಿ ಸಾರಿ ಹೇಳುತ್ತಿದೆ .

ಕಚೇರಿಯ ನೌಕರರು ಮತ್ತು ಸಿಬ್ಬಂದಿಗಳು ಗರಿಗರಿಯಾಗಿ ಇಸ್ತ್ರೀ ಮಾಡಿದ ಬಟ್ಟೆಯನ್ನು ತೊಟ್ಟರೆ ಸಾಲದು .ತಾವು ಕಾರ್ಯನಿರ್ವಹಿಸುವ ಕಟ್ಟಡಗಳು ಅಷ್ಟೇ ಸ್ವಚ್ಛತೆಯಿಂದ ಇರಬೇಕು ಅಲ್ಲವೇ ?

ತಾವು ಕರ್ತವ್ಯ ನಿರ್ವಹಿಸುವ ಸ್ಥಳ ದೇವ ಮಂದಿರವಿದ್ದಂತೆ ಅಲ್ಲಿ ಬರುವಂಥ ನಾಗರಿಕರು ದೇವತೆಗಳಿದ್ದಂತೆಯೇ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಪೂಜಾರಿಗಳಿದ್ದಂತೆ ತಮ್ಮ ಕಟ್ಟಡವನ್ನು ಶುಭ್ರವಾಗಿಯೂ, ಸ್ವಚ್ಚವಾಗಿಯೂ ಇಟ್ಟುಕೊಳ್ಳುವ ಜವಾಬ್ದಾರಿ ಅಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳದ್ದಾಗಿರುತ್ತದೆ.
ನೋಡಿ ತಾಲ್ಲೂಕಿನ ಹೃದಯಭಾಗದಲ್ಲಿರುವ ಅಂಚೆಕಚೇರಿ ಸುಣ್ಣ ಬಣ್ಣವಿಲ್ಲದೆ ಅದೆಷ್ಟೋ ವರ್ಷಗಳು ಕಳೆದಿದ್ದು  ಕಾಣೆ .!ನಿಮ್ಮ ಮನೆಗಳನ್ನು ಇದೇ ರೀತಿಯಾಗಿ ಇಟ್ಟುಕೊಳ್ಳುತ್ತೀರಾ ?ಇಲ್ಲ ಅಲ್ಲವೇ?ಪ್ರತಿ ಯುಗಾದಿಗೂ ದೀಪಾವಳಿ ಹಬ್ಬಕ್ಕೂ ಮಾಡಿಸುತ್ತೀರಾ, ಮನೆಯನ್ನ ಚೆಂದವಾಗಿ ಕಾಣುವಂತೆ ಇಟ್ಟುಕೊಳ್ಳುತ್ತೀರಾ .ಆದರೆ ಅದೇ ನಿಮ್ಮ ಕುಟುಂಬವನ್ನು ನಿರ್ವಹಣೆ ಮಾಡುವ, ನಿಮಗೆ ಅನ್ನ ನೀಡುವ ಕಚೇರಿಯನ್ನ ಈ ರೀತಿ ಸುಣ್ಣ ಬಣ್ಣವಿಲ್ಲದೆ ನೋಡುಗರ ಕಣ್ಣಿಗೆ ಆಶ್ರಯವಾಗಿ ಕಾಣುವಂತಹ ಕಟ್ಟಡದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದೀರಾ ನಿಮಗೆ ನಾಚಿಕೆಯಾಗುವುದಿಲ್ಲವೇ ?

ಅಭಿವೃದ್ಧಿಯ ಅಧಿಕಾರಿಗಳೇ ಪ್ರವಾಸಿಗರ ಕಣ್ಮನ ತಣಿಸುತ್ತಿರುವ ನಗರದ ಹೃದಯ ಭಾಗದಲ್ಲಿರುವ ಹೆಡ್ ಪೋಸ್ಟ್ ಆಫೀಸ್ ಯಾವ ರೀತಿಯಲ್ಲಿ ಕಂಗೊಳಿಸುತ್ತಿದೆ ಎಂಬುದನ್ನ ಒಮ್ಮೆ ಕಣ್ಣಾಯಿಸಿ .ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ನಗರದ ಅಂಚೆ ಕಚೇರಿ ಇಲಾಖೆಗೆ ಕೂಡಲೇ ಸುಣ್ಣಬಣ್ಣ ಮಾಡಿಸುವತ್ತ ಗಮನ ಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಿತ್ತು ಮಾಡಿ .ಸಾಗರ ತಾಲ್ಲೂಕಿನ ಗೌರವವನ್ನ ಹೆಚ್ಚಿಸುವತ್ತ ಗಮನ ಹರಿಸಿ .

ನಾಗರಿಕರೇ !ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಗರದ ಹೃದಯ ಭಾಗದಲ್ಲಿರುವ ಮುಖ್ಯ ಅಂಚೆ ಕಚೇರಿಯ ಸುಂದರ ಛಾಯಾಚಿತ್ರಗಳು ನಿಮ್ಮ ಕಣ್ಣುಗಳು ಕುಕ್ಕುತ್ತಿವೆ ಅಲ್ಲವೇ? ಆದರೂ ಒಮ್ಮೆ ನೋಡಿ .

Post a Comment

0 Comments