ಸುಸಂಸ್ಕೃತರ ಇರುವ ಸಾಗರ ತಾಲ್ಲೂಕಿನ ಅತ್ಯಂತ ಸುಂದರವಾದ ಹಳೆಯ "ಶ್ರೀ ಟಾಕೀಸ್".ಸದ್ಯಕ್ಕೆ ಸಾಗರದಲ್ಲಿ ಇರುವುದು ಈ ಟಾಕೀಸ್ ಒಂದೆ.ಕೆಲವೊಮ್ಮೆ ಬಿಡುಗಡೆಯಾದ ಸಿನಿಮಾಗಳು ಎರಡು ವಾರ ಕಳೆದ ನಂತರ ಈ ಸಾಗರದ ಸಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತದೆ.ಕೆಲವೊಮ್ಮೆ ಯಾವುದು ಸಿನಿಮಾ ಸಿಕ್ಕಿಲ್ಲ ಅಂದ್ರೇ ತಮಿಳು,ತೆಲುಗು, ಹಿಂದಿ ಭಾಷೆಯ ಸಿನಿಮಾಗಳು ಹಾಕ್ತಾರೆ.ಅಷ್ಟರಲ್ಲಿ ಬಿಡುಗಡೆಯಾದ ಹೊಸ ಸಿನಿಮಾಗಳ ಬಗ್ಗೆ ಊರಿನ ಸಿನಿಮಾ ಪ್ರೇಮಿಗಳ ಎಲ್ಲರ ಬಾಯಲ್ಲಿ ಒಂದು ಮಾತು ಬರ್ತಾ ಇರೊತ್ತೆ. ಹೇ ಆ ಸಿನಿಮಾ ಚೆನ್ನಾಗಿದೆಯಂತೆ ಸಾಗರಕ್ಕೆ ಯಾವಾಗ ಬರೋತ್ತೊ ಗೊತ್ತಿಲ್ಲ,ಟಾಕೀಸ್ ನಲ್ಲಿ ಹೇಳ್ತಾ ಇದ್ರು ಮುಂದಿನವಾರ ಬರಬಹುದು ಅಂಥ,ಪೊಸ್ಟರ್ ಗಳು ತಂದು ಇಟ್ಟಿದ್ರು ಹಾಗೇ ಹೀಗೆ ಅಂಥ ಮಾತುಗಳು ನಡಿತಾ ಇರ್ತಾವೆ.ಒಂದಿಷ್ಟು ಹಳೆ ಸಿನಿಮಾಗಳು ಹಾಗೂ ಆಪ್ತಮಿತ್ರ,ಜೋಗಿ, ಅಣ್ಣ ತಂಗಿ ,ಯಜಮಾನ ಸಿನಿಮಾಗಳಿಗೆ ಈ ಟಾಕೀಸ್ ಹೌಸ್ ಪುಲ್ ಪ್ರದರ್ಶನ ಕಂಡಿ ಕುರ್ಚಿಗಳು ಹಾಕಿರೋ ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ.
ಸಾಗರದ ಶ್ರೀ ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಮಜಾನೇ ಬೇರೆ.ಟಾಕೀಸ್ ನಲ್ಲಿ ಫ್ಯಾನ್ ಹಾಕಿಲ್ಲ ಅಂದ್ರೇ ಕೂಗಾಟ ಬಂತು ಅಂತ ಅರ್ಥ,ಈ ಥರ ಅನುಭವ ಯಾವ ಮಲ್ಟಿಪ್ಲೆಕ್ಸ್ ಗಳಲ್ಲೂ ಸಿಗೋಲ್ಲ,ಸ್ವಲ್ಪ ಹಳೆ ಸ್ಪೀಕರ್ ಗಳು ಅನ್ನೊದು ಬಿಟ್ರೇ ಚಿಕ್ಕ ನಗರಕ್ಕೆ ಹೇಗೆ ಬೇಕೊ ಹಾಗೇ ಇದೆ.ಇವಾಗ್ಲೂ ನಾವು ಊರಿಗೆ ಬಂದಾಗ ಇಲ್ಲಿ ಸಿನಿಮಾಗಳು ನೋಡೆ ನೋಡ್ತಿವಿ.
ಇತ್ತಿಚಿನ ದಿನಗಳಲ್ಲಿ ಶಿವಣ್ಣ,ಸುದೀಪ್, ದರ್ಶನ್,ಯಶ್ ಅವರ ಸಿನಿಮಾಗಳಿಗೆ ಕೆಲವು ದಿನ ಟಾಕೀಸ್ ನ ಬಾಗಿಲಲ್ಲಿ ಅಭಿಮಾನಿ ಸಂಘಗಳೂ ಪ್ಲೇಕ್ಸ್,ತೋರಣಗಳು ಹಾಕಿ ಸಂಭ್ರಮಿಸಿದ್ದೂ ಇದೆ ಹಾಗೇ ಚಿಕ್ಕ ನಗರಗಳಲ್ಲಿ ನೀವು ನೋಡಿರುತ್ತಿರ.ಆದರೆ ದಿನದ ಎಲ್ಲಾ ಆಟಗಳು ಗಳು ಫ್ಯಾಮಿಲಿ ಸಮೇತ ಚಿತ್ರಮಂದಿರದ ಬಳಿ ನಿಂತದ್ದು ಕೆಲವೇ ಸಿನಿಮಾಗಳಿಗೆ ಅದು ಎರಡು ಮೂರು ದಿನಗಳು ಅಷ್ಟೇ.
ಸಾಗರದ ಶ್ರೀ ಟಾಕೀಸ್ ನಲ್ಲಿ "ಕಾಂತಾರ" ಸಿನಿಮಾ ಬಿಡುಗಡೆಯಾಗಿ ಒಂದು ವಾರ ಕಳೆದರೂ ದಿನೇದಿನೇ ನೋಡುಗರ ಸಂಖ್ಯೆ ಹೆಚ್ಚಾಗುತ್ತಿದೆ .ಬಿಡುಗಡೆಯಾದ ದಿನಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ವೀಕ್ಷಣೆಗೆ ಗ್ರಾಮೀಣ ಭಾಗದ ಜನರು ಬರುತ್ತಿದ್ದಾರೆ.ದಿನದ ಎಲ್ಲ ಪ್ರದರ್ಶನಗಳು ಹೌಸ್ ಫುಲ್.ಟಿಕೆಟ್ ಗಾಗಿ ಒಂದು ಗಂಟೆ ಮೊದಲು ನಿಂತಿದ್ದಾರೆ,ಕುಟುಂಬ ಸಮೇತವಾಗಿ ಚಿತ್ರ ಮಂದಿರದ ಕಡೆ ಜನ ಬರುತ್ತಿದ್ದಾರೆ,ಹತ್ತಿರದ ಹಳ್ಳಿಗಳಿಂದ ಆಟೋ ಗಾಡಿ ಮಾಡಿಸಿಕೊಂಡು ಚಿತ್ರಮಂದಿರದ ಕಡೆ ಬರುತ್ತಿದ್ದಾರೆ.ಟಿಕೆಟ್ ಕೌಂಟರ್ ಬಳಿ ಫೋಲಿಸರು.
ತುಂಬಾ ವರ್ಷಗಳ ನಂತರ ಸಾಗರದ ಶ್ರೀ ಚಿತ್ರಮಂದಿರದಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿ ಟಿಕೆಟ್ ನೀಡುತ್ತಿದ್ದಾರೆ.ಒಂದು ಅತ್ಯುತ್ತಮ ಸಿನಿಮಾಕ್ಕೆ ಪ್ರೇಕ್ಷಕರು ಕೈ ಹಿಡಿಯುತ್ತಾರೆ ಎಂಬುದಕ್ಕೆ ಕಾಂತಾರ ಸಿನೆಮಾವೇ ನೈಜ ಸಾಕ್ಷಿ.
ಇದು ನಮ್ಮ ಕನ್ನಡದ "ಕಾಂತಾರ" ಸಿನಿಮಾದ ಗೆಲವು.
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಿನಿಮಾಗಳು ಹೀಗೆ ಯಶಸ್ವಿ ಪ್ರದರ್ಶನವನ್ನು ಕಾಣಲಿ.
ಈ ಫೋಟೊ ನಮ್ಮ ಸಾಗರದ ಶ್ರೀ ಟಾಕೀಸ್ ನಲ್ಲಿ ಇಂದು ರಾತ್ರಿಯ ಕೊನೆಯ ಶೋ ನ ಟಿಕೆಟ್ ಗೇ ಜನರು ನಿಂತಿರುವುದು ...
ಸಾಗರದ ಶ್ರೀ ಚಿತ್ರಮಂದಿರ ಸುಂದರ ನೆನಪನ್ನು ಮಾಡಿಕೊಳ್ಳುತ್ತಾ ಈ ಬರಹ ಮಾಡಿದ್ದೇನೆ ...
0 Comments