ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ತದನಂತರ ಕೆನರಾ ಬ್ಯಾಂಕ್ ನಲ್ಲಿ ಸುಧೀರ್ಘವಾದ ವರ್ಣ ರಂಜಿತ ಬದುಕು ಸವೆಸಿ ನಿವೃತ್ತ ರಗಿದ್ದ ಸಾಗರ ತಾಲೂಕು ಶಿವಮೊಗ್ಗ ಜಿಲ್ಲೆಯ ಶ್ರೀ ಜಿ.ವಿ. ರಾಮಕೃಷ್ಣ ಇತ್ತೀಚೆಗೆ ಹಠಾತ್ ನಿಧನರಾದರು.
ಶಿವಮೊಗ್ಗ ಜಿಲ್ಲೆಯ ವಿವಿಧ ಊರುಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅವರು ಜಿಲ್ಲೆಯ ಹೊಳಲೂರು ಗ್ರಾಮದಲ್ಲಿ ಕೆನರಾ ಬ್ಯಾಂಕ್ ಗ್ರಾಮೋದ್ಯೋಗ ತರಬೇತಿ ಸಂಸ್ಥೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಜನಾನುರಾಗಿಯಾಗಿ ಬೆಳೆದಿದ್ದರು.
ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಘ ಇದರ ಸಂಚಾಲಕರಾಗಿ ಕೆಲವು ವರ್ಷ ದುದಿದಿದ್ದ ಅವರು ಅಂಗವಿಕಲರ ಬಗೆಗೆ ವಿಶೇಷ ಕಾಳಜಿಯನ್ನು ಹೊಂದಿದ್ದರು ಎಂದು ಆವರ ಧೀರ್ಘ ಕಾಲದ ಒಡನಾಡಿ ನಿವೃತ್ತ ಬ್ಯಾಂಕ್ ಅಧಿಕಾರಿ ಹಾಗೂ ಭಾರತೀಯ ಅಂಗವಿಕಲರ ಸಬಲೀಕರಣ ಸಂಸ್ಥೆ ಇದರ ಸ್ಥಾಪಕ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ತಮ್ಮ ಶೋಕ ಸಂದೇಶದಲ್ಲಿ ಪ್ರಕಟಿಸಿದ್ದಾರೆ.
0 Comments