ಶಿವಮೊಗ್ಗ ಜಿಲ್ಲೆಯ ಜಿಲ್ಲಾ ರಕ್ಷಣಾಧಿಕಾರಿಯಾಗಿ ಸೇವೆಸಲ್ಲಿಸಿ ಅತ್ಯಂತ ಕಡಿಮೆ ಅವದಿಯಲ್ಲಿ ಜಿಲ್ಲೆಯಲ್ಲಿನ ಅಪರಾಧಿಕ ಚಟುವಟಿಕೆಗಳನ್ನು ನಿಯಂತ್ರಿಸಿ, ಮಿತಿ ಮೀರಿದ್ದ ಗಾಂಜಾ ಮಾಪೀಯವನ್ನು ಹತೋಟಿಗೆ ತಂದು, ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿ ರೌಡಿ ಶೀಟರ್ ಅಂತ ನಾಮಪಲಕ ಹೊತ್ತು ನಂತರ ಪರಿವರ್ತನೆಯ ದಾರಿಯಲ್ಲಿದ್ದ ಸಾವಿರಕ್ಕು ಹೆಚ್ಚು ಜನರಿಗೆ ರೌಡಿ ಶೀಟರ್ ಪಟ್ಟಿಯಿಂದ ಮುಕ್ತಿ ಕೊಟ್ಟು ಸಮಾಜಮುಖಿಯಾಗಿ ಬದುಕುವ ಅವಕಾಶ ಮಾಡಿಕೊಟ್ಟು, ಶಿವಮೊಗ್ಗದಲ್ಲಿ ಶಾಂತಿ ಸುವ್ಯವಸ್ಥೆಗೆ ಮೊದಲ ಆದ್ಯತೆ ಕೊಟ್ಟು, ಯಾರ ಪ್ರಭಾವಕ್ಕು ಒಳಗಾಗದೆ, ಯಾರ ಪರ , ಯಾರ ವಿರುದ್ದ ಎಂಬುವ ಅಪವಾದಕ್ಕೆ ಬಲಿಯಾಗದ ಅಪ್ಪಟ ಪ್ರಾಮಾಣಿಕ ಮತ್ತು ಧಕ್ಷ ಅಧಿಕಾರಿಯಾಗಿದ್ದ S P ಲಕ್ಷ್ಮೀಪ್ರಸಾದ್ ರವರು ಅಸಾಯಕರು ತಮ್ಮ ಕಚೇರಿಗೆ ಬಂದಾಗ ಆತ್ಮ ಸ್ಥೈರ್ಯ ತುಂಬಿ ಇಲಾಖೆಯ ಬಗ್ಗೆ ಜನರಿಗೆ ಗೌರವ ಬರುವಂತೆ ನಡೆದು ಕೊಳ್ಳುತ್ತಿದ್ದರು, ಇವರು ನಮ್ಮ ಜಿಲ್ಲೆಯಿಂದ ವರ್ಗಾವಣೆ ಗೊಂಡಿದ್ದಾರೆ, ಇವರ ಆದರ್ಶಮಯ ವೃತ್ತಿಯು ಎಲ್ಲಾ ಅಧಿಕಾರಿಗಳಿಗೂ ಮಾದರಿ ಆಗಲಿ ಎಂದು ಹಾರೈಸಿ ನಾವುಗಳೆಲ್ಲ ಸೇರಿ ಅವರ ನಿವಾಸಕ್ಕೆ ತೆರಳಿ ಗೌರವಿಸಿ ಬಂದೆವು
ವಕೀಲ ಕೆ.ಪಿ.ಶ್ರೀಪಾಲ, ಸರ್ಜಿ ಹಾಸ್ಪಿಟಲ್ . ಡಾ..ಧನಂಜಯ ಸರ್ಜಿ, ಮೆಗ್ಗಾನ್ ವೈದ್ಯಕೀಯ ಅಧೀಕ್ಷಕರಾದ ಡಾ.ಶ್ರೀಧರ್, ಓಪನ್ ಮೈಂಡ್ ಶಾಲೆಯ ಕಿರಣ್ ಕುಮಾರ್, ಅನನ್ಯ ಪುಸ್ತಕ ಮಳಿಗೆಯ ಅನನ್ಯ ಶಿವಕುಮಾರ್, ಸರ್ಜಿ ಹಾಸ್ಪಿಟಲ್ ಪರುಶುರಾಮ್, ವಕೀಲರಾದ ಚರಣ್, ವಿಕಾಸ್, ಚಿರಂತನ್, ಸ್ವರೂಪ್ , ಸಂದೇಶ, ಸತೀಶ್, ಮತ್ತು ಸರ್ಜಿ ಪೌಂಡೇಶನ್ ಬಳಗದ ಸುರೇಶ್ ಸ್ಟ್ಯಾಲಿನ್ ಮತ್ತು ಗೆಳೆಯರು ಇದ್ದರು.
0 Comments