ಸಾಗರ:ಭೂತಾಯಿಗೆ ಪೂಜೆ ಸಲ್ಲಿಸುವ ಮೂಲಕ ಮಣ್ಣಿನ ಮಕ್ಕಳು ಭಾನುವಾರ ಭೂಮಿ ಹುಣ್ಣಿಮೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.ಸಾಗರದ ಶ್ರೀನಗರದ ದಯಾನಂದ್ ಅವರ ಕೃಷಿ ತೋಟದಲ್ಲಿ ಬೆಳೆದು ನಿಂತಿರುವ ಫಸಲಿಗೆ ಪೂಜೆ ಸಲ್ಲಿಸಿದ ಅನ್ನದಾತರು, ಬದುಕು ಹಸನಾಗಲಿರಲೆಂದು ಪ್ರಾರ್ಥಿಸಿಕೊಂಡರು.
ಸ್ಥಳೀಯವಾಗಿ ಕರೆಯುವ ಹತ್ತೊಂಬರವೆ, ಗೋವೆಕಾಯಿ, ಬೂದುಗುಂಬಳ, ಹೀರೆಕಾಯಿ ಸೊಪ್ಪನ್ನು ಬೇಯಿಸಿ ಸಿದ್ಧಪಡಿಸಿದ ಮಿಶ್ರಣವನ್ನು ಗದ್ದೆ ಹಾಗೂ ತೋಟದಲ್ಲಿ ಸಿಂಪಡಿಸಿ ಪೂಜಿಸುವ ಪದ್ಧತಿ ಬಹುತೇಕ ಎಲ್ಲ ತೋಟಿಗರ ಮನೆಯಲ್ಲಿ ಆಚರಣೆಯಲ್ಲಿದೆ. ಭೂಮಿ ಹುಣ್ಣಿಮೆಯ ದಿನ ಭೂಮಿಯನ್ನು ನೋಯಿಸಬಾರದು. ನೆಲಕ್ಕೆ ಕತ್ತಿಯನ್ನು ಊರಬಾರದು ಎಂಬ ನಂಬಿಕೆ ಇರುವುದರಿಂದ ಕೃಷಿ ಕಾಯಕಕ್ಕೆ ಬಿಡುವು ಕೊಡಲಾಗಿತ್ತು.
0 Comments