ರಾಣಿಬೆನ್ನೂರು:"ಸರ್ಕಾರದ ಕೆಲಸ ದೇವರ ಕೆಲಸ" ಹಾಗಾದರೆ ಸರ್ಕಾರ ಯಾರದ್ದೂ? ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವುದೇ ಸರ್ಕಾರ ಅಲ್ಲವೇ? ಅಂದರೆ ಪ್ರತಿ ಸರ್ಕಾರಿ ಕಚೇರಿಗಳು ಸಾರ್ವಜನಿಕರ ಸ್ವತ್ತು ಅಲ್ಲವೇ ?ಅವರ ತೆರಿಗೆ ಹಣದಿಂದಲೇ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಸಂಬಳ ನೀಡುವುದು ಅಲ್ಲವೇ ?ಅವರಿಗೆ ಸಮಯವನ್ನು ನಿಗದಿ ಪಡಿಸುವ ಅರ್ಹತೆ ನಿಮಗಿದೆಯೇ ? ಇಂಥ ಯೋಚನೆಗಳಿಗೇ ಕೊನೆ ಹಾಡಿ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವ ತನ್ನ ಕಲಿಯಿರಿ ಆಗ ನೀವು ಪಡೆದ ಶಿಕ್ಷಣ ಒಂದು ಅರ್ಥ ಬರುತ್ತದೆ.
ನಾಡಿನ ದೊರೆ ಜನಸಾಮಾನ್ಯರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇವರೇ ನಿಮ್ಮ ಸ್ವಂತ ಜಿಲ್ಲೆಯ ಅಚ್ಚುಮೆಚ್ಚಿನ ವಿಧಾನಸಭಾ ಕ್ಷೇತ್ರವಾದ ರಾಣೇಬೆನ್ನೂರ ನಗರಸಭೆಯಲ್ಲಿ ಸಾರ್ವಜನಿಕರು ಅಧಿಕಾರಿಗಳನ್ನು ಭೇಟಿ ಮಾಡಲು ಮಧ್ಯಾಹ್ನ 3ಗಂಟೆ ಇಂದ 5ಗಂಟೆಗೆ ಸಮಯ ನಿಗದಿ ಮಾಡಿದ್ದಾರೆ.ಇದು ಏಕೆ? ಮಹಾಪ್ರಭುಗಳೇ .!
ನಗರಸಭೆಯಿಂದ ನಡೆಯುತ್ತಿರುವುದೇ ಜನಸಾಮಾನ್ಯರ ತೆರಿಗೆ ಹಣದಿಂದ ನಗರಸಭೆಯಲ್ಲಿರುವ ಪ್ರತಿವೊಂದು ವಸ್ತುಗಳ ಸಾರ್ವಜನಿಕರ ಸಾರ್ವಜನಿಕರ ಸ್ವತ್ತುಗಳು.ತಮ್ಮ ಕೆಲಸ ಕಾರ್ಯ ನಿರ್ಮಿತ್ತ ನಗರಸಭೆಗೆ ಸಾರ್ವಜನಿಕರ ಬರುವಿಕೆಗೆ ಮುಕ್ತ ಅವಕಾಶವಿರುತ್ತದೆ .ತಮ್ಮ ಕುಂದು ಕೊರತೆಗಳನ್ನು ಹಾಗೂ ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಅಧಿಕಾರಿಗಳನ್ನು ಪ್ರಶ್ನಿಸುವ ಅಧಿಕಾರ ಸಾರ್ವಜಿನಿಕರಿಗೆ ಇದೆ ಅಂತಹ ಸಾರ್ವಜಿನಿಕ ಮಹಾಪ್ರಭುಗಳಿಗೆ ಸಮಯ ನಿಗದಿಪಡಿಸುವ ಅಧಿಕಾರ ಯಾರು ಕೊಟ್ಟರು .ಸರ್ಕಾರವೇನಾದರೂ ಸುತ್ತೋಲೆ ಹೊರಡಿಸಿದೆಯೇ? ಆ ಆದೇಶ ಕಾಪಿ ನಿಮ್ಮಲ್ಲಿದೆ ?ಒಂದು ವೇಳೆ ನಗರದ ಅಭಿವೃದ್ಧಿಯ ವಿಚಾರವನ್ನು ಚರ್ಚಿಸುವ ಹಾಗೂ ಸಭೆಯನ್ನು ಆಯೋಜನೆ ಮಾಡುವ ಅವಶ್ಯಕತೆ ಇದ್ದರೆ ಅದು ಮಧ್ಯಾಹ್ನದ ನಂತರ ಇಟ್ಟುಕೊಳ್ಳಬಹುದು ಅಲ್ಲವೇ ?ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲು ಬೆಳಿಗ್ಗೆಯ ಸಮಯವನ್ನು ಏಕೆ ನೀವು ನಿಗದಿ ಮಾಡಬಾರದು .?ಬೆಳಿಗ್ಗೆ ಹತ್ತು ಗಂಟೆಯಿಂದ ಮಧ್ಯಾಹ್ನ 2ಗಂಟೆವರೆಗೆ ಸಾರ್ವಜನಿಕರ ಭೇಟಿಗೆ ಮುಕ್ತ ಅವಕಾಶ ಎಂಬ ನಾಮಫಲಕ ನೀವೆ ಹಾಕಿ ಸ್ವಾಮಿ .ಅದು ಬಿಟ್ಟು ಅಧಿಕಾರಿಗಳನ್ನು ಭೇಟಿ ಮಾಡಲು ಸಾರ್ವಜನಿಕರಿಗೆ ಮಧ್ಯಾಹ್ನ 3ಗಂಟೆಯ ನಂತರ ಅವಕಾಶ ಇದು ಎಷ್ಟರ ಮಟ್ಟಿಗೆ ಸರಿ ?
ರೈತರು ಕೂಲಿ,ಬಡ ಮಧ್ಯಮ ವರ್ಗದ ಕೂಲಿ ಕಾರ್ಮಿಕರು ಅಂಗವಿಕಲರು ವೃದ್ಧರು ಹೀಗೆ ದೇಶದ ಪ್ರಜೆಗಳು ತಮ್ಮ ಕೆಲಸ ಕಾರ್ಯಗಳ ನಿಮಿತ್ತ ಕಚೇರಿಗೆ ಬರುತ್ತಾರೆ ಅವರನ್ನು ಭೇಟಿ ಮಾಡುವ ಸೌಜನ್ಯ ಮತ್ತು ಸಮಯವನ್ನ ಕಚೇರಿಯ ಸಮಯವಾದ ಬೆಳಿಗ್ಗೆ ಹತ್ತು ಗಂಟೆಯಿಂದ ಮಧ್ಯಾಹ್ನ 2ಗಂಟೆವರೆಗೆ ನಿಗದಿಪಡಿಸಿ ಅವರೊಂದಿಗೆ ಸೌಜನ್ಯದಿಂದ ವರ್ತಿಸಿ ಇದ್ದರೆ ಚೆನ್ನಾಗಿರುತ್ತದೆ ಅಲ್ಲವೇ ?ನಮ್ಮ ವರ್ತನೆಗಳು ಇನ್ನೊಬ್ಬರ ಮನಸ್ಸನ್ನು ನೋವು ಮಾಡುವಂತಿರಬಾರದು.ನಮ್ಮ ಕಲಿಕೆಯ ಹಂತದಲ್ಲಿ ನಯ, ವಿನಯ ಮಾನವೀಯತೆಯ ಮೌಲ್ಯಗಳನ್ನು ಮರೆಯಬಾರದು .ಅಧಿಕಾರದ ಮದದಲ್ಲಿ ತೇಲಬಾರದು.ಯಾವುದೂ ಶಾಶ್ವತವಲ್ಲ ಇರುವಷ್ಟು ದಿನ 4ಜನರಿಗೆ ಒಳ್ಳೆಯವರಾಗಿ ಬಾಳಬೇಕು ಆಗ ನಾವು ಕಲಿತ ಶಿಕ್ಷಣ ಮತ್ತು ನಮಗೆ ಕಲಿಸಿದ ಗುರುಗಳಿಗೆ ನೀಡುವ ಗೌರವವಾಗಿರುತ್ತದೆ .
ರಾಣೇಬೆನ್ನೂರು ನಗರಸಭೆಯ ಆಯುಕ್ತರೇ ನಿಮ್ಮನ್ನು ಭೇಟಿ ಮಾಡಲು ಬರುವ ಸಾರ್ವಜನಿಕರಿಗೆ ಸಮಯ ನಿಗದಿ ಸಂಬಂಧ ಪಟ್ಟಂತೆ ನಾಮಫಲಕ ಒಂದಲ್ಲ ಹಾಕಿದ್ದೀರಾ ಸಾಧ್ಯವಾದರೆ ಸರ್ಕಾರದ ಆದೇಶವಿದೆ ಆದರೆ ಆ ಸಮಯವನ್ನು ಬೆಳಿಗ್ಗೆ ಹತ್ತು ಗಂಟೆಯಿಂದ ಮಧ್ಯಾಹ್ನ 2ಗಂಟೆಗೆ ಬದಲಾಯಿಸಿ ನಂತರದ ಸಮಯದಲ್ಲಿ ನಿಮ್ಮ ಕಚೇರಿಯ ಅಧಿಕಾರಿಗಳ ಯೊಂದಿಗೆ ನಗರ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆಗಳು ಮತ್ತು ಸಮಾಲೋಚನೆಗಳನ್ನು ನಡೆಸಿ ಇದರಿಂದ ಸಾರ್ವಜನಿಕರ ಸಮಯವೂ ಉಳಿತಾಯವಾಗುತ್ತದೆ.ಅವರ ಅಲೆದಾಟ ತಪ್ಪುತ್ತದೆ.ಅವರು ಯಾವ ಉದ್ದೇಶಕ್ಕೆ ನಿಮ್ಮನ್ನು ಭೇಟಿ ಮಾಡಿರುತ್ತಾರೋ ಆ ಉದ್ದೇಶಕ್ಕೆ ಪರಿಹಾರ ಕಂಡುಕೊಳ್ಳಲು ಮುಂದೆ ದಾರಿಯಾಗುತ್ತದೆ. ಮುಂದೆ ಬೇಕಾಗುವಂಥ ದಾಖಲೆಗಳನ್ನು ಸಮರ್ಪಕವಾಗಿ ಒದಗಿಸಲು ಅವರಿಗೆ ಹಳೆಯ ಸಿಕ್ಕಂತಾಗುತ್ತದೆ .ಅಲ್ಲದೆ ಕೆಲಸ ಮುಗಿಸಿಕೊಂಡ ನಂತರ ಅವರ ಹೊಲ' ಗದ್ದೆ, ಮನೆ ಕೆಲಸ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ ಇದರಿಂದ ಅವಳ ಕುಟುಂಬ ನಿರ್ವಹಣೆ ಸಾಧ್ಯವಾಗುತ್ತದೆ ಇಲ್ಲದಿದ್ದರೆ ಇಡೀ ದಿನ ಅವರೊಂದು ಕೆಲಸಕ್ಕಾಗಿ ನಿಮ್ಮ ಕಚೇರಿಯಲ್ಲೇ ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ದಯವಿಟ್ಟು ಬಡವರ ಕಷ್ಟವನ್ನು ಅರ್ಥ ಮಾಡಿಕೊಳ್ಳಿ.ಅವರಿದ್ದರೆ ನಾವು ನಮ್ಮಿಂದ ಅವರೆಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ .
ನಾಡಿನ ದೊರೆ ಬಸವರಾಜ್ ಬೊಮ್ಮಾಯಿ ಅವರೇ ಸಾರ್ವಜನಿಕರು ಅಧಿಕಾರಿಗಳನ್ನು ಭೇಟಿ ಆಗುವ ಸಮಯ ನಿಗದಿಪಡಿಸುವ ಅಧಿಕಾರವನ್ನು ಅಧಿಕಾರಿಗಳಿಗೆ ನೀಡಬೇಡಿ .ಏಕೆಂದರೆ ಅವರಿಗೆ ಆ ಯೋಗ್ಯತೆ ಇರುವುದಿಲ್ಲ.ಸಾರ್ವಜನಿಕರ ತೆರಿಗೆಯ ಹಣದಿಂದಲೇ ಸಂಬಳ ಪಡೆಯುವ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಹಾಗೂ ರಾಜ್ಯದ ಅಭಿವೃದ್ದಿಗೆ ಶ್ರಮಿಸುವಂತೆ ತಾಕೀತು ಮಾಡಿ.ರಾಣೆಬೆನ್ನೂರ ನಗರಸಭೆಯಲ್ಲಿ ಸಾರ್ವಜನಿಕರು ಅಧಿಕಾರಿಗಳನ್ನು ಭೇಟಿ ಮಾಡಲು ಮಧ್ಯಾಹ್ನ 3ಗಂಟೆಯಿಂದ 5ಗಂಟೆಯ ಎಂದು ನಿಗದಿ ಮಾಡಿದ್ದಾರೆ .ಇದರಿಂದ ನಗರ ಪ್ರದೇಶದ ಜನರಿಗೆ ತೊಂದರೆಯಾಗುತ್ತಿದೆ ಅದರಲ್ಲೂ ಬಡ ಹಾಗೂ ಮಧ್ಯಮ ವರ್ಗದ ಕೂಲಿ ಕಾರ್ಮಿಕರಿಗೆ 1ದಿನದ ಕೂಲಿ ತಪ್ಪು ಹೋಗುತ್ತದೆ. ಇದರಿಂದ ಅದೆಷ್ಟೋ ಕುಟುಂಬಗಳು ಒಂದೊತ್ತಿನ ಊಟ ದಲ್ಲೇ ಕಾಲ ಕಳೆಯಬೇಕಾಗುತ್ತದೆ.ಕೂಡಲೇ ಇಂತಹ ಆಲೋಚನೆಗಳಿಗೆ ಕಡಿವಾಣ ಹಾಕಿ ಜನಸಾಮಾನ್ಯರು ಅಧಿಕಾರಿಗಳನ್ನು ಭೇಟಿ ಮಾಡಲು ಮುಕ್ತ ಅವಕಾಶವನ್ನು ಕಲ್ಪಿಸಿ ಕೊಡಿ .ಜನರಿಂದ ಜನರಿಗಾಗಿ ಜನರಿಗೋಸ್ಕರ ಇರುವ ಸರ್ಕಾರ ಎಂಬುದನ್ನು ಮರೆಯಬೇಡಿ .
ರಾಣೇಬೆನ್ನೂರು ನಗರಸಭೆಯ ಆಯುಕ್ತರಾಗಿ ನಿನ್ನೆ ದಿನ ನಿಮ್ಮ ಜವಾನನನ್ನು ಕರೆದು ಸಾರ್ವಜನಿಕರನ್ನ ಒಳ ಬಿಟ್ಟಿದ್ದೇಕೆ ಕೂಗಾಡಿದ ರೀತಿ ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುವಂತಿರಲಿಲ್ಲ .ಕೂಡಲೇ ನಿಮ್ಮ ವರ್ತನೆಯಲ್ಲಿ ಬದಲಾವಣೆ ತಂದುಕೊಳ್ಳಿ.ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವತ್ತ ಗಮನಹರಿಸಿ .ಮಧ್ಯಾಹ್ನದ ನಂತರ ನಿಮ್ಮ ಸಿಬ್ಬಂದಿಗಳೊಂದಿಗೆ ನಗರ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆಗಳನ್ನು ನಡೆಸಿ .ಇದರಿಂದ ಕಚೇರಿಗೆ ಬರುವ ಸಾರ್ವಜನಿಕರ ಸಮಯ ಹಣ ಉಳಿತಾಯವಾಗುತ್ತದೆ ಹಾಗೂ ಅವರ ಕುಟುಂಬ ನಿರ್ವಹಣೆಗೆ ಸಹಕಾರಿಯಾಗುತ್ತದೆ .ಕೂಡಲೇ ನೀವು ನಿಗದಿಪಡಿಸಿದ ಸಮಯವನ್ನು ಬದಲಾವಣೆ ಮಾಡಿ .
ರಾಣೇಬೆನ್ನೂರು ತಾಲ್ಲೂಕಿನ ಪ್ರಜ್ಞಾವಂತ ಹೋರಾಟಗಾರರೇ ರಾಣೆಬೆನ್ನೂರು ನಗರ ಸಭೆಯಲ್ಲಿ ಸಾರ್ವಜನಿಕರು ಅಧಿಕಾರಿಗಳನ್ನು ಭೇಟಿ ಮಾಡಲು ಮಧ್ಯಾಹ್ನ 3ಗಂಟೆಯ ನಂತರ ಎಂದು ನಾಮಫಲಕ ಹಾಕಿದ್ದಾರೆ ದಯವಿಟ್ಟು ಇದರ ಬಗ್ಗೆ ನೀವು ಧ್ವನಿ ಎತ್ತಬೇಕಾಗಿದೆ .ನಿಮ್ಮ ಧ್ವನಿ ವಿಧಾನಸೌಧದ ಬಾಗಿಲು ಪಡೆಯುವಂತಿರಬೇಕು.ಒಮ್ಮೆ ನಗರಸಭೆಗೆ ಭೇಟಿ ನೀಡಿ, ಕಣ್ಣಾಡಿಸಿ ಸತ್ಯ ನಿಮಗೆ ತಿಳಿಯುತ್ತದೆ.
0 Comments