ಪೋಡಿ ಮುಕ್ತ ರಾಜ್ಯವನ್ನಾಗಿ ಮಾಡಲು ರಾಜ್ಯ ರೈತ ಸಂಘದಿಂದ ಮನವಿ.!!


ಕರ್ನಾಟಕ ರಾಜ್ಯಾದ್ಯಂತ ರೈತರ ಜಮೀನನ್ನು ಸರ್ಕಾರ ಮರು ಸರ್ವೆ ಮಾಡಬೇಕು ರೈತರ ಜಮೀನು ಪೋಡಿ ಮುಕ್ತ ರಾಜ್ಯವನ್ನಾಗಿ ಮಾಡಿ ಹಳೆ ನಕಾಶದಲ್ಲಿ ಇರುವ ದಾರಿ ಕೆರೆ ಕಟ್ಟೆ ಪಾಳು ಜಾಗ ಬಿಳ್ಳು ಜಾಗ  ಸರ್ಕಾರಿ ಭೂಮಿ ಇತರೇ ಹೆಚ್ಚುವರಿ ಇದ್ದ ಜಮೀನನ್ನು ಹಾಗೂ ರೈತರ ಜಮೀನು ಹೆಚ್ಚು ಕಮ್ಮಿ ಆದಲ್ಲಿ ನಕಾಶಕ್ಕೆ ಸರಿ ಮಾಡಿ ಇದ್ದ ಜಮೀನನ್ನು ರೈತರಿಗೆ ಸರ್ಕಾರದಿಂದ ಅಳತೆ ಮಾಡಿ ಮರು ಸರ್ವೆ ಮಾಡಿ ರಾಜ್ಯಾದ್ಯಂತ ಹೊಸ ನಕಾಶ ಸೃಷ್ಟಿಸಿ ರೈತರಿಗೆ ಮುಂದೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಹೊಸ ನಕಾಶವನ್ನು ಮಾಡಬೇಕೆಂದು 

ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ರುದ್ರಪ್ಪ ಕೋಳೂರ ಇವರ ನೇತೃತ್ವದಲ್ಲಿ ಖಂಡಿಸಿ 

ಕುಕನೂರು ತಾಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ   ಶಿರಸ್ತೇದಾರ ಮಹ್ಮದ ಮುಸ್ತಾಫ ಇವರ ಮೂಲಕ 
ಮಾನ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರೈತ ಸಂಘಟನೆಯಿಂದ ಖಂಡಿಸಿ ಈ ಮನವಿಯನ್ನು ಸಲ್ಲಿಸಲಾಯಿತು. 
ಈ ವೇಳೆಯಲ್ಲಿ ಮನವಿಯನ್ನು ಸ್ವೀಕರಿಸಿ ಶಿರಸ್ತೇದಾರ ಮಹ್ಮದ ಮುಸ್ತಾಫ ಇವರು ನಿಮ್ಮ ಮನವಿಯನ್ನು ಮಾನ್ಯ ಜಿಲ್ಲಾಧಿಕಾರಿಗಳು ಕೊಪ್ಪಳ ರವರಿಗೆ ಸೂಕ್ತ ಕ್ರಮಕ್ಕಾಗಿ ಕಳುಹಿಸಿ ಕೊಡುತೆವೆ ಎಂದು ಇವರು ಹೇಳಿದರು.


ಹೌದು ರೈತರು ಈ ಜಮೀನನ್ನು  ಕಷ್ಟ ಬಂದಾಗ ಇನ್ನೊಬ್ಬ ರೈತರಿಗೆ ಮಾರಾಟ ಮಾಡುವುದಕ್ಕೂ ಬರುವುದಿಲ್ಲ ಈ ಜಮೀನು ಸರ್ಕಾರದ ಅಧಿಕಾರಿಗಳಿಗೂ ಅಳೆತೆ ಮಾಡುವುದಕ್ಕೂ ಬರುವುದಿಲ್ಲ ರೈತರು ಅಧಿಕಾರಿಗಳ ಜೋತೆಗೆ ತಮ್ಮ ಜಮೀನನ್ನು ಅಳೆತೆ ಮಾಡಿಸಲು ಹೊದರೆ ಸರ್ಕಾರದ ಅಧಿಕಾರಿಗಳಿಗೆ ಅಳತೆ ಸಿಗುವುದಿಲ್ಲ ರೈತರು ತಮ್ಮ ಬೆಳೆಯನ್ನು ಜಿಪಿಎಸ್ ಮಾಡುವುದಕ್ಕೂ ಬರುವುದಿಲ್ಲ ಈ ಸಮಸ್ಯೆ  
ರೈತರಿಗೆ ಅಷ್ಟೇ ಅಲ್ಲಾ ಸರ್ಕಾರದ ಅಧಿಕಾರಿಗಳಿಗೂ ತೊಂದರೆ ಆಗಿದೆ ಈ ಸಮಸ್ಯೆ ಆಗಿರುವುದು ಎರುಡು ಸಾವಿರ ಇಸಿವಿಯಲ್ಲಿ  ಕಂಪ್ಯೂಟರ್  ಆನ್ಲೈನ್ ಯಾವಗ ಜಾರಿಗೆ ಬಂತು ಅಲ್ಲಿಯಿಂದ ಇಲ್ಲಿವರಿಗೂ ರೈತರಿಗೆ ಈ ಸಮಸ್ಯೆ ಸುರುವಾಗಿದೆ. ಎಂದು ಕೊಪ್ಪಳ ಜಿಲ್ಲೆ ರೈತ ಸಂಘದ  ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ ಇವರು ಮಾತನಾಡಿ ಮನವಿ ಸಲ್ಲಿಸಿದರು

ಈ ಸಂದರ್ಭದಲ್ಲಿ  ರೈತ ಸಂಘದ ಪದಾಧಿಕಾರಿಗಳದಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಳಕಪ್ಪ ಕ್ಯಾದಿಗುಂಪಿ.ಕುಕನೂರು ತಾಲೂಕ ಅಧ್ಯಕ್ಷ ಹನಮಂತಪ್ಪ ಮುತ್ತಾಳ. ಶಂಕ್ರಪ್ಪ ಹೊಕ್ಕಳದ.ಮಹಾದೇವಪ್ಪ ಕುರಿ ಪತ್ರೆಪ್ಪ ವೀರಾಪುರ. ಹಲವಾರು ರೈತ ಮುಖಂಡರು ಪಾಲ್ಗೊಂಡಿದ್ದರು

Post a Comment

0 Comments