ಹರಿಹರ: ಉತ್ತರ-ದಕ್ಷಿಣದ ಜನರ ಸಂಪರ್ಕವನ್ನು ಕಲ್ಪಿಸುವ ಮಧ್ಯ ಕರ್ನಾಟಕ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕು ಐತಿಹಾಸಿಕವಾಗಿ, ರಾಜಕೀಯವಾಗಿ ತನ್ನದೆಯಾದ ವಿಶಿಷ್ಟ ಸ್ಥಾನ-ಮಾನವನ್ನು ಹೊಂದಿರುವಂತಹ ತಾಲೂಕುಗಳಲ್ಲಿ ಒಂದು.
ಐತಿಹಾಸಿಕ ಹಿನ್ನೆಲೆ ಇರುವ ಹರಿಹರದಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ಲಕ್ಷ್ಮಿ ಕಟಾಕ್ಷ ಹೋಮ ನಡೆಸಿದ ಪರಿಣಾಮ ಇಂದು ನಗರಸಭೆಯಲ್ಲಿ ಲಕ್ಷ- ಲಕ್ಷ ಹಣದ ಮೇಲೆ ಲಕ್ಷ್ಮಿಯ ನರ್ತನವಾಗಿದೆ.
ನಗರ ಸಭೆಯಲ್ಲಿ ಲಕ್ಷ್ಮಿಯ ನರ್ತನವಾಗಿರುವ ಕಾರಣ ಬಿಜೆಪಿಯ ನಗರಸಭೆಯ ಚುನಾಯಿತ ಸದಸ್ಯರು ಕಳೆದ ಒಂದು ತಿಂಗಳ ಹಿಂದೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂಬ ವಿಚಾರವನ್ನು ಮಾಧ್ಯಮಗೋಷ್ಠಿ ನಡೆಸುವ ಮೂಲಕ ತಾಲೂಕಿನ ಜನರ ಮುಂದೆ ಬಿಚ್ಚಿಟ್ಟಿದ್ದರು.
14 ಪ್ರಮುಖ ಅಂಶಗಳನ್ನು ಮುಂದಿಟ್ಟುಕೊಂಡು ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಇದುವರೆಗೂ ಬಿಜೆಪಿಯ ಚುನಾಯಿತ ಸದಸ್ಯರು ಲೋಕಾಯುಕ್ತಕ್ಕೆ ದೂರು ನೀಡಿಲ್ಲ ,ಏಕೆ ? ಎಂಬ ಪ್ರಶ್ನೆಯನ್ನ ಸಾರ್ವಜನಿಕರು ಅಂದು ಮಾಧ್ಯಮಗೋಷ್ಠಿ ನಡೆಸಿದ ನಗರಸಭೆಯ ಚುನಾಯಿತ ಸದಸ್ಯರಿಗೆ ಕೇಳುತ್ತಿದ್ದಾರೆ.
ನಗರ ಸಭೆಯ ಚುನಾಯಿತ ಜನಪ್ರತಿನಿಧಿಗಳೇ.! ತಾಲೂಕಿನ ಜನರ ಪ್ರಶ್ನೆಗೆ ಉತ್ತರಿಸಬಲ್ಲಿರಾ? ಲಕ್ಷ ಲಕ್ಷ ಹಣದ ಮೇಲೆ ಲಕ್ಷ್ಮಿಯನರ್ತನವಾಗಿದೆ ಇದರಿಂದ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರವಾಗಿದೆ.ನಗರದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಇದ್ದರ ಬಗ್ಗೆ ಸಮಗ್ರವಾದ ತನಿಖೆಯಾಗಬೇಕು ಅಲ್ಲವೇ? ನಿಮ್ಮ ಉದ್ದೇಶವು ಅದೇ ಆಗಿದೆ ಅಲ್ಲವೇ? ಹಾಗಿದ್ದ ಮೇಲೆ ಲೋಕಾಯುಕ್ತಕ್ಕೆ ದೂರು ದಾಖಲಿಸುವಲ್ಲಿ ಏಕೆ ವಿಳಂಬ? ಉದ್ದೇಶ ಒಳ್ಳೆಯದೇ ಆಗಿರಬೇಕಾದರೆ ದೂರು ದಾಖಲಿಷ್ಟ ವಿಚಾರದಲ್ಲಿ ವಿಳಂಬವಾಗಬಾರದು ಅಲ್ಲವೇ?
ನೀವು ಮಾಧ್ಯಮಗೋಷ್ಠಿ ನಡೆಸಿದ ನಂತರ ನಿಮಗೆ ಕೆಲವೊಂದು ದಾಖಲೆಗಳನ್ನು ನೀಡುವ ವಿಚಾರದಲ್ಲಿ ನಗರ ಸಭೆಯ ಕೆಲ ಇಂಜಿನಿಯರ್ ಗಳು,ನೌಕರರು ವಿಳಂಬ ತಂತ್ರ ಅನುಸರಿಸಿದ್ದರು ಅಲ್ಲವೇ? ಈ ವಿಳಂಬ ತಂತ್ರದ ಹಿಂದಿನ ತಂತ್ರ ನಿಮಗೆ ಅಂದೆ ಅರ್ಥವಾಯಿತು ಅಲ್ಲವೇ? ಅಂದರೆ ಹರಿಹರ ನಗರ ಸಭೆಯಲ್ಲಿ ಲಕ್ಷ-ಲಕ್ಷ ಹಣದ ಮೇಲೆ "ಲಕ್ಷ್ಮಿ"ಯ ನರ್ತನವಾಗಿಲ್ಲ.ಕೋಟಿ-ಕೋಟಿ ಹಣದ ಮೇಲೆ ನರ್ತನವಾಗಿದೆ. ಕೂಡಲೇ ಹಿಂದಿನ ಆಯುಕ್ತರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿ. ನಗರ ವ್ಯಾಪ್ತಿಯ ಜನರು ನಿಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಿ. ನರೇಂದ್ರ ಮೋದಿ ಅವರ ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಕೈಜೋಡಿಸಿ.
ನಿಮ್ಮ ಹೋರಾಟ ಸಾಮಾನ್ಯ ವ್ಯಕ್ತಿಯ ಜೊತೆಯಲ್ಲ. ಈ ಭೂಮಿ ಮೇಲೆ ಹುಟ್ಟಿರುವ ಪ್ರತಿ ನಾಗರಿಕರ ಜೇಬಿನಲ್ಲಿರಬೇಕಾದ "ಲಕ್ಷ್ಮಿ"ಯ ಜೊತೆ ಎಂಬುವುದನ್ನು ಮರೆಯಬೇಡಿ. ಅಷ್ಟು ಸುಲಭಕ್ಕೆ "ಲಕ್ಷ್ಮಿ" ಸಿಗುವುದಿಲ್ಲ, ಅವರು ಚಂಚಲೆ. ಸಮಗ್ರ ತನಿಖೆಯಾದಾಗ ಮಾತ್ರ ಖಜಾನೆಯಲ್ಲಿರುವ"ಲಕ್ಷ್ಮಿ" ಹೊರಬರಲು ಸಾಧ್ಯ.
ನೀವು ಲೋಕಾಯುಕ್ತಕ್ಕೆ ದೂರು ನೀಡುವವರೆಗೂ ನಮ್ಮ ಬರಹದ ಹೋರಾಟ ಮುಂದುವರಿಯುತ್ತಲೇ ಇರುತ್ತದೆ.
ನಮ್ಮೆಲ್ಲ ಓದುಗರ ಮಿತ್ರರೇ ಲಕ್ಷ,ಲಕ್ಷ ಹಣದ ಮೇಲೆ "ಲಕ್ಷ್ಮಿ" ನರ್ತನ.ಮುಂದಿನ ಸಂಚಿಕೆಯಲ್ಲಿ ಕೋಟಿ,ಕೋಟಿ ಹಣದ ಮೇಲೆ "ಲಕ್ಷ್ಮಿ"ಯ ನರ್ತನ. ಕುಬೇರನ ಸಾಮ್ರಾಜ್ಯವನ್ನೇ ಖಾಲಿ ಮಾಡಿದ ಆ ದೇವಿಯ ದರ್ಶನ ನಿಮ್ಮ ಮುಂದೆ.......
0 Comments