ಮಂದಾರ ನ್ಯೂಸ್ ಹರಿಹರ: ಹರಿಹರ ನಗರ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಓರ್ವ ನನ್ನು ಕಳ್ಳತನ ಮಾಡಿದ ಬಂಗಾರದ ಆಭರಣಗಳ ಸಮೇತ ವ್ಯಕ್ತಿಯನ್ನು ಹರಿಹರದ ಪೊಲೀಸ್ ಇಲಾಖೆಯವರು ಬಂಧಿಸಿದ್ದಾರೆ.
37 ವರ್ಷದ ಮುಸ್ಲಿಂ ಜನಾಂಗದ ದಾದಾಪೀರ್ @ ದಾದು ತಂದೆ ಶಂಷುದ್ದೀನ್, ಹಮೀದ್ ನಗರ, ಆಂಜನೇಯ ಬಡಾವಣೆ ,ನಿಟ್ಟುವಳ್ಳಿ ಹಾಲಿವಾಸ ಮೂರನೇ ಮೇನ್, 12ನೇ ಕ್ರಾಸ್ ವಿನೋಬನಗರ ದಾವಣಗೆರೆ ಈತನನ್ನು ದತ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿ ಆರೋಪಿಯಿಂದ ಸದರಿ ಪ್ರಕರಣಗಳಲ್ಲಿ ಕಳ್ಳತನವಾಗಿದ್ದ ಒಟ್ಟು 1043 ಗ್ರಾಂ ತೂಕದ,4,52,500/- ರೂ ಬೆಲೆಯ ಬಂಗಾರದ ಆಭರಣಗಳು ಹಾಗೂ ಒಟ್ಟು 897 ಗ್ರಾಂ ತೂಕದ 48000/- ಬೆಲೆಯ ಬೆಳ್ಳಿಯ ಆಭರಣಗಳನ್ನು ಹರಿಹರದ ಪೊಲೀಸ್ ಇಲಾಖೆಯವರು ಅಮಾನತ್ತು ಪಡಿಸಿಕೊಂಡಿರುತ್ತಾರೆ. ಆರೋಪಿಯ ಮೇಲೆ ಹರಿಹರ ನಗರ ಪೊಲೀಸ್ ಠಾಣಾ ಗುನ್ನೆ ನಂ 215/2022,229/2022,224/2022, ಒಟ್ಟು ಮೂರು ಮನೆ ಕಳ್ಳತನ ಪ್ರಕರಣಗಳಲ್ಲಿ ಆರೋಪಿಯು ಭಾಗಿಯಾಗಿರುತ್ತಾನೆ.
ಮೇಲ್ಕಂಡ ಪ್ರಕರಣಗಳ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಮಾನ್ಯ ಶ್ರೀ ಸಿ .ಬಿ. ರಿಷ್ಯಂತ್, ಪೋಲಿಸ್ ಅಧೀಕ್ಷಕರು ಶ್ರೀ. ಆರ್ .ಬಿ ಬಸರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ದಾವಣಗೆರೆ ಜಿಲ್ಲೆ ಹಾಗೂ ದಾವಣಗೆರೆ ಗ್ರಾಮಾಂತರ ಉಪ-ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರವರಾದ ಶ್ರೀಮತಿ ಕನ್ನಿಕಾ ಸಿಕ್ರಿವಾಲ್ ರವರ ಮಾರ್ಗದರ್ಶನದಲ್ಲಿ ಹರಿಹರ ವೃತ್ತ ನಿರೀಕ್ಷಕರಾದ ಶ್ರೀ ಸತೀಶ್ ಕುಮಾರ್.ಯು ರವರ ನೇತೃತ್ವದಲ್ಲಿ ಪಿ.ಎಸ್ .ಐ ರವರುಗಳಾದ ಶ್ರೀ ಶಂಕರ್ ಗೌಡ ಪಾಟೇಲ್, ಶ್ರೀ ಅಬ್ದುಲ್ ಖಾದರ್ ಜಿಲಾನಿ, ಶ್ರೀ ಚಿದನಂದಪ್ಪ, ಪ್ರೊ ಪಿ ಎಸ್ ಐ ಮಹಾದೇವ್ ಸಿದ್ದಪ್ಪ ಬತ್ತೆ, ಬೆರಳು ಮುದ್ರೆ ಘಟಕದ ಪಿ ಎಸ್ ಐ ಶ್ರೀ ಮಂಜುನಾಥ ಎಸ್ ಕಲ್ಲೆದೇವರ, ಸಿಬ್ಬಂದಿಯವರಾದ ಶ್ರೀ ಮಂಜುನಾಥ ಬಿ.ವಿ, ಶ್ರೀ ನಾಗರಾಜ್ ಸಿ.ಎಂ, ಶ್ರೀ ದೇವರಾಜ್ ಸುರ್ವೆ, ಶ್ರೀ ಮಂಜುನಾಥ. ಎಸ್ ಕ್ಯಾತಮ್ಮನವರ್, ಹನುಮಂತಪ್ಪ ಎಸ್ ಗೋಪನಾಳ, ದ್ವಾರಕೀಶ್, ಮೊಹಮ್ಮದ್ ಯೂಸುಫ್ ಅತ್ತಾರ್, ನಾಜಿಮ್ ,ಹರಿಹರ ವೃತ್ತ ಕಚೇರಿಯ ಶ್ರೀ ಮಹಮ್ಮದ್ ಇಲಿಯಾಸ್, ಶ್ರೀ ನಾಗರಾಜ್ ಹಾಗೂ ಜೀಪ್ ಚಾಲಕ ಶ್ರೀ ಮುರಳಿಧರ್, ಶ್ರೀ ಮಂಜುನಾಥ, ಜಿಲ್ಲಾ ತಾಂತ್ರಿಕ ವಿಭಾಗದ ಶ್ರೀ ರಾಘವೇಂದ್ರ, ಶ್ರೀ ಶಾಂತರಾಜ ರವರನ್ನೊಳಗೊಂಡ ತಂಡವು ಮೇಲ್ಕಂಡ ಮೂರು ಪ್ರಕರಣಗಳಲ್ಲಿ ಪತ್ತೆ ಕಾರ್ಯ ನಡೆಸಿ ಒಟ್ಟು 1043 ಗ್ರಾಂ ತೂಕದ 4,52,500/-ರೂ ಬೆಲೆಯ ಬಂಗಾರದ ಆಭರಣಗಳು ಹಾಗೂ ಒಟ್ಟು 897 ಗ್ರಾಂ ತೂಕದ 48000/- ಬೆಲೆಯ ಬೆಳ್ಳಿಯ ಆಭರಣಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.ಹರಿಹರಹರ ಪೊಲೀಸರ ಈ ಮಿಂಚಿನ ಕಾರ್ಯಕ್ಕೆ ದಾವಣಗೆರೆ ಜಿಲ್ಲೆಯ ಮಾನ್ಯ ಪೊಲೀಸ್ ಅಧೀಕ್ಷಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
0 Comments