ದಾವಣಗೇರಿ ಜಿಲ್ಲೆಯ ಹರಿಹರ ನಗರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಇಂದು ಲಂಚ ಸ್ವೀಕರಿಸುವಾಗ ಲೋಕಾಯುಕ್ತರು ಸಿದ್ದಪ್ಪನನ್ನು ರೆಡ್ ಹ್ಯಾಂಡಾಗಿ ಬಲೆಗೆ ಕೆಡೆವಿದ್ದಾರೆ.
ಐವತ್ತು ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಸಿದ್ದಪ್ಪ ಈ ಹಿಂದೆ ಮುಂಗಡವಾಗಿ 10000 ಎಂಎ ಪಡೆದಿದ್ದರು. ಎಂದು ಹದಿನೈದು ಸಾವಿರ ಲಂಚ ಪ್ರಸಾದ ಪಡೆಯುತ್ತಿರುವ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಹರಿಹರ ವಿದ್ಯಾಯಿನಿ ಶಾಲೆಯ ಮುಖ್ಯಸ್ಥ ರಘುನಾಥ್ ಅವರಿಂದ ಲಂಚ ಸ್ವೀಕರಿಸುವಾಗ ದಾಳಿ ನಡೆದಿದ್ದು , ಸಿಬಿ ಎಸ್ ಸಿ ಶಾಲೆ ಪರವಾನಿಗೆ ನವೀಕರಣಕ್ಕಾಗಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿಸಿಬಿಸಿ ಸಿದ್ದಪ್ಪ ಬಿದ್ನಪ್ಪ.
ದಾವಣಗೇರಿ ಲೋಕಾಯುಕ್ತ ಎಸ್ಪಿ ಎಂ.ಎಸ್ ಕೌಲಾಪುರೆ ನೇತೃತ್ವದಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ ಶ್ರೀ ರಾಮಕೃಷ್ಣ ಕೆ ಜಿ. ಡಿ ವೈ ಎಸ್ ಪಿ ಆಂಜನೇಯ ಎನ್ ಹೆಚ್.ಹಾಗೂ ರಾಷ್ಟ್ರಪತಿ ಹೆಚ್ ಎಸ್ ಅವರಿಂದ ದಾಳಿ ನಡೆದಿದ್ದು ಬಿಇಓ ಸಿದ್ದಪ್ಪ ಅವರನ್ನು ಲೋಕಾಯುಕ್ತರು ತಮ್ಮ ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತರಾ ದಾಳಿಯ ಸಂದರ್ಭದಲ್ಲಿ ಸಿಬ್ಬಂದಿಗಳಾದ ಸಿ ಎಚ್ ಸಿ. ಎನ್ ಆರ್ ಚಂದ್ರಶೇಖರ್, ಆಂಜನೇಯ ವಿ ಎಚ್, ಸಿಪಿಸಿ ಧನರಾಜ್ ಎನ್, ಮುಜಿದ್ ಖಾನ್, ಎ.ಪಿ.ಸಿ ಬಸವರಾಜ್ ಸಿ ಎಸ್, ಮೋಹನ್ ಕುಮಾರ್ ಪಿ ರವರೊಂದಿಗೆ ಯಶಸ್ವಿ ಟ್ರ್ಯಾಪ್ ಕಾರ್ಯಾಚರಣೆ ನಡೆಸಿ ಟ್ರ್ಯಾಪ್ ಮಾಡಿ ದಸ್ತಗಿರಿ ಮಾಡಲಾಗಿದೆ. ತನಿಖೆಯು ಮುಂದುವರಿದಿದೆ.
ರಾಮನ ತೀರ್ಥ ಶಾಲಾ ಮುಖ್ಯ ಉಪಾಧ್ಯಾಯೊಬ್ಬರು ಶಾಲಾ ದಾಖಲಾತಿ ಒಂದನ್ನ ನಕಲಾಗಿ ಒಬ್ಬರಿಗೆ ನೀಡಿರುವುದು ಇದಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿರುವುದು ಕ್ಷೇತ್ರ ಶಿಕ್ಷಣಧಿಕಾರಿಗಳಿಗೆ ತಿಳಿದಿರುವಂಥದ್ದು. ಇದರ ಬಗ್ಗೆಯೂ ಮಾನ್ಯ ಲೋಕಾಯುಕ್ತರು ತನಿಖೆ ನಡೆಸಿದರೆ ಇನ್ನಷ್ಟು ಹಗರಣ ಬಯಲಿಗೆ ಬರುವುದರ ಜೊತೆಗೆ ಇನ್ನು ಕೆಲವು ತಿಮಿಂಗಳಗಳು ಬಲೆಗೆ ಬೀಳುವುದರಲ್ಲಿ ಅನುಮಾನವಿಲ್ಲ.
ಇಂದಿನ ಲೋಕಾಯುಕ್ತರ ದಾಳಿ ತಾಲೂಕಿನಲ್ಲಿ ಹೊಸ ಚಂಚಲನ ಉಂಟುಮಾಡಿದ್ದು ಮುಂದಿನ ದಿನದಲ್ಲಿ ಇನ್ನಷ್ಟು ಅಧಿಕಾರಿಗಳು ಸಿದ್ದರಾಗಿ. ಈಗಾಗಲೇ ಲೋಕಾಯುಕ್ತರು ಕೆಲವು ಇಲಾಖೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು ಯಾವ ಸಮಯದಲ್ಲಾದರೂ ಸಾರ್ವಜನಿಕರ ಸಹಕಾರದೊಂದಿಗೆ ದಾಳಿ ನಡೆಯುವುದರಲ್ಲಿ ಅನುಮಾನವಿಲ್ಲ.
ಒಟ್ಟಾರೆಯಾಗಿ ಇಂದಿನ ಲೋಕಾಯುಕ್ತರ ದಾಳಿ ತಾಲೂಕಿನ ಭ್ರಷ್ಟ ಅಧಿಕಾರಿಗಳಲ್ಲಿ ನಡುಕ ಹುಟ್ಟಿರುವುದಂತೂ ನೂರಕ್ಕೆ ನೂರು ಸತ್ಯ. ಮುಂದೈತಿ ಮಾರಿ ಹಬ್ಬ.......
0 Comments