ಸಾಗರ ಪೊಲೀಸ್ ಠಾಣೆಯಲ್ಲಿ ಸೀಮಂತ ಸಂಭ್ರಮ.!!


*ತನ್ನ ಸ್ವಂತ ಸಹೋದರರಂತೆ ಸೀಮಂತ ಮಾಡಿದ ಕ್ಷಣದಲ್ಲಿ WPC ಕಣ್ಣಾಲೆಯಲ್ಲಿ ನೀರು ತುಂಬಿದ ಭಾವುಕ ಕ್ಷಣ...!*

*ಸದಾ ಒತ್ತಡದಿಂದಲೇ ಕೆಲಸ ನಿರ್ವಹಿಸುವ ಪೊಲೀಸರು ಶುಕ್ರವಾರ ಮಹಿಳಾ ಪೇದೆಯೊಬ್ಬರಿಗೆ ಠಾಣೆಯಲ್ಲಿ ಸೀಮಂತ ಮಾಡಿಸುವ ಮೂಲಕ ಹೃದಯವಂತಿಕೆ ಮೆರೆದಿದ್ದಾರೆ. ಪೊಲೀಸರೆಂದರೆ ದಿನದ 24 ಗಂಟೆಯೂ ಕೆಲಸ ಮಾಡುವವರು.ಇಂತವರಿಗೆ* *ಸಮಯವೇ ಇರುವುದಿಲ್ಲ. ಇದರ ನಡುವೆಯೂ ಮಹಿಳಾ ಪೇದೆಗೆ ಠಾಣೆಯಲ್ಲೇ ಸೀಮಂತ ಮಾಡಿದ* *ಅಪರೂಪದ ಪ್ರಸಂಗವೊಂದು ಸಾಗರದಲ್ಲಿ ನಡೆದಿದೆ. ಹಾಗಿದ್ರೆ ಈ ಸೀಮಂತ ಶಾಸ್ತ್ರ ನಡೆದಿದ್ದು ಯಾವ ಠಾಣೆಯಲ್ಲಿ ಅಂತೀರಾ... ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್*

*ಮಹಿಳಾ ಪೊಲೀಸ್ ಪೇದೆಗೆ ಅಲ್ಲಿನ ಸಿಬ್ಬಂದಿಗಳು ಸೀಮಂತ ಮಾಡಿ ಸಂಭ್ರಮಿಸಿದರು. ಅದೇ ರೀತಿ ಶಿವಮೊಗ್ಗ ಜಿಲ್ಲೆಯ ಸಾಗರ ಪೇಟೆ ಪೊಲೀಸ್ ಠಾಣೆಯ* *ಪೊಲೀಸರು ತಮ್ಮ ಠಾಣೆಯ ಕೈಮ್ ಮಹಿಳಾ ಪೊಲೀಸ್ ಸಿಬ್ಬಂದಿ ಹೆರಿಗೆ ರಜೆ ಪಡೆದು ಮನೆಗೆ ತೆರಳಲು ಅವರು ಮುಂದಾಗಿದ್ದರು.ಈ ಹಿನ್ನಲೆಯಲ್ಲಿ ಅವರ ಸಹೋದ್ಯೋಗಿಗಳು ಪೊಲೀಸ್ ಠಾಣೆಯಲ್ಲೇ ಸೀಮಂತ ಕಾರ್ಯಕ್ರಮ ಹಮ್ಮಿಕೊಂಡು ತಮ್ಮ ತಮ್ಮ ಮನೆಗಳಲ್ಲಿ ಕುಟುಂಬ ವರ್ಗದವರು ಗರ್ಭಿಣಿ* *ಸ್ತ್ರೀಯರಿಗೆ ಸೀಮಂತ ಮಾಡುವಂತೆಯೇ ಈ ಸೀಮಂತ* *ಕಾರ್ಯಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದರು.ಸಾಗರ ಪೇಟೆ ಠಾಣೆಯಲ್ಲಿ ಮಹಿಳಾ ಕ್ರೈಮ್* *ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಲ್ಪಾ ರವರಿಗೆ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್* *ಸೀತಾರಾಂ ಮತ್ತು ಅವರ ಸಿಬ್ಬಂದಿಗಳು ತಮ್ಮ ಸ್ವಂತ ಸಹೋದರಿ ಯರಿಗೆ ಮಾಡುವ ರೀತಿಯಲ್ಲಿ ಸೀಮಂತ* *ಕಾರ್ಯ ಮಾಡಿ ಸಂಭ್ರಮಪಟ್ಟರು. ಶಿಲ್ಪಾರವರಿಗೆ* *ಅರಿಶಿಣ ಕುಂಕಮ ಕೊಟ್ಟು, ಮಡಿಲಕ್ಕಿ ತುಂಬಿ, ಹಣ್ಣನ್ನು ನೀಡಿ. ಸೀಮಂತ ಮಾಡಿ. ಹೆರಿಗೆ ಸುಖಕರವಾಗಲಿ ಎಂದು ಎಲ್ಲರೂ ಧೈರ್ಯ ನೀಡಿ. ಹರಸಿ ಬೀಳ್ಕೊಟ್ಟರು.* *"ತಾನು ಕರ್ತವ್ಯ ನಿರ್ವಹಿ ಸುತ್ತಿದ್ದ ಠಾಣೆಯಲ್ಲಿ ಇಷ್ಟೊಂದು ಸಂಭ್ರಮದಿಂದ ತನ್ನ ಸ್ವಂತ ಸಹೋದರರಂತೆ ಸೀಮಂತ ಮಾಡಿದ ಕ್ಷಣದಲ್ಲಿ ಶಿಲ್ಪಾ ರವರ ಕಣ್ಣಾಲೆಯಲ್ಲಿ ನೀರು ತುಂಬಿ ಭಾವುಕರಾದ ಕ್ಷಣ ಕಂಡು ಬಂದಿತು....!"* *ಒಟ್ಟಾರೆಯಾಗಿ ಸದಾ ಕ್ರೈಂ, ತನಿಖೆ, ವಿಚಾರಣೆ ಇಂತಹ ವಿವಾದದಲ್ಲಿ ಬ್ಯುಸಿಯಾಗಿ* *ರುತ್ತಿದ್ದ ಪೊಲೀಸ್ ಸಿಬ್ಬಂದಿ ತಮಗೆ ಸೀಮಂತ ಮಾಡಿ* *ರುವುದರಿಂದ ಮಹಿಳಾ ಸಿಬ್ಬಂದಿಗಳು ಪುಲ್ ಖುಷಿಯಾಗಿದ್ದು,* *ಪೊಲೀಸ್ ಠಾಣೆ ಅವರಿಗೆ ಸಂತಸ ಉಂಟು ಮಾಡಿರುವುದಂತೂ ಮಾತ್ರ ಸುಳ್ಳಲ್ಲ......!*
*ಸಾಗರ ಪೇಟೆ ಪೊಲೀಸ್ ಠಾಣೆಯ ಅಧಿಕಾರಿ ಮತ್ತು* *ಸಿಬ್ಬಂದಿಗಳ  ಕಾರ್ಯ ನಾಗರೀಕರ ಪ್ರಶಂಸೆಗೆ ಕಾರಣ ವಾಯಿತು.ಈ ಸುಸಂದರ್ಭದಲ್ಲಿ*
*CPI ಸೀತಾರಾಮ್ ASI ಪರಶುರಾಮ್.ಸಿಬ್ಬಂದಿಗಳಾದ ರತ್ನಾಕರ,ಗಣಪತಿ ರಾವ್,ಶಂಕರ್.ಪ್ರವೀಣ್. ಮೋಹನ್,ಸವಿತಾ.ಶ್ರೀಧರ್,ನಾಗರಾಜ್ ನಾಯ್ಕ, ಶೋಬಾ,ಸುಧಾಕರ್.ಯೋಗೇಶ್,ಕೃಷ್ಣಮೂರ್ತಿ.ವಿಶ್ವನಾಥ್.ಮಾಲತೇಶ್.ಹಾಗೂ ಇನ್ನಿತರರು ಇಂತಹ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದರು.*

Post a Comment

0 Comments