2023 ರಾಣೇಬೆನ್ನೂರು ಮತದಾರರ ಮುಖದಲ್ಲಿ ಸಂತೋಷ.!

ಮಂದಾರ ನ್ಯೂಸ್ : ರಾಣೇಬೆನ್ನೂರು : ತಂದೆಯವರು ನಮ್ಮನ್ನಗಳಿ 30 ವಸಂತಗಳು ಕಳೆದು ಹೋದವು, ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ  ತಂದೆಯವರ ಮಾರ್ಗದರ್ಶನ ಅವಶ್ಯವಾಗಿತ್ತು ಆದರೆ ಅವರ ಮಾರ್ಗದರ್ಶನ ಇಲ್ಲದೆ ಅವರ ನೆನಪಿನಲ್ಲಿ ರಾಜಕೀಯ ತಂತ್ರಗಳನ್ನು ಕಲಿಯಬೇಕಾಯಿತು ಎಂದು ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಮುಂದಿನ ಪ್ರಬಲ ಅಭ್ಯರ್ಥಿ ಸಂತೋಷ್ ಕುಮಾರ್ ಐ ಪಾಟೀಲ್ ಅವರು ನಮ್ಮ ಮಂದಾರ ನ್ಯೂಸ್ ಸುದ್ದಿ ವಾಹಿನಿಯೊಂದಿಗೆ ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.

ಇಂಗ್ಲಿಷ್ ಮಾಧ್ಯಮದ ಓದಿದ ನಾನು,ಕೆಲಸ ಮಾಡಲೆಂದು   ಹೋಗಿದ್ದೆ,ಆದರೆ  ದೊಡ್ಡ ಮಟ್ಟದಲ್ಲಿ ಜಮೀನು ಇರುವ ಕಾರಣ ನನ್ನ ತಂದೆ ಸಮಾನರಾದ ಚಿಕ್ಕಪ್ಪನವರು ನನ್ನನ್ನೂ ಬಿಟ್ಟು ಇರಲು ಸಾಧ್ಯವಾಗದೆ, ನನ್ನನ್ನು ಮರಳಿ ಮನೆಗೆ ಕರೆತಂದರು, ಜಮೀನು ನೋಡಿಕೊಂಡು ಹೋಗಲು ಯಾರು ಇಲ್ಲಾ ಎಂದರು. ರೈತನ ಮಗನಾಗಿ ವ್ಯವಸಾಯದ ಜೊತೆ ಜೊತೆಗೆ  ಸಮಾಜ ಸೇವೆಯನ್ನ ಮುಂದುವರೆಸಿಕೊಂಡು ಬಂದೆ ಇದರ ಜೊತೆಗೆ ಸ್ವಂತ ಬಿಜಿನೆಸ್ ಶುರು ಮಾಡಿದೆ, ಅನಿರೀಕ್ಷಿತವಾಗಿ ರಾಜಕೀಯವನ್ನು ಪ್ರವೇಶಿಸಿದ ನಾನು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ನಿಂತು ಗೆಲ್ಲುತ್ತೇನೆ ಅಂದುಕೊಂಡಿರಲಿಲ್ಲ,ನನ್ನ  ತಂದೆ-ತಾಯಿಯವರ ಮತ್ತು ಚಿಕ್ಕಪ್ಪ, ಸ್ನೇಹಿತರು, ಗಳಿಂದ ಹಾಗೂ ಕ್ಷೇತ್ರದ ಜನತೆ ನನಗೆ ಆಶೀರ್ವದಿಸಿದ ಫಲವೇ ಇಂದು ನಾನು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗುವ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು "ನವಯುಗ" ನನ್ನ ಕನಸಿನ ಕೂಸು.
ಚಿಕ್ಕ ವಯಸ್ಸಿನಲ್ಲೇ ರಾಜಕೀಯ ಪ್ರವೇಶಿಸಿದ ನನಗೆ ರಾಜಕೀಯ ಗುರುಗಳಾದ ಜಿ ಶಿವಣ್ಣನವರು ಮತ್ತು ಸಿ.ಎಂ ಉದಾಸಿಯವರ ದರ್ಶನ ಹಾಗೂ ಸಲಹೆ- ಸೂಚನೆಗಳು ದೊರೆತವು. ಅವರನ್ನು ನಾನು ಎಂದಿಗೂ ಮರೆಯುವಂತಿಲ್ಲ. ಅವರು ರಾಜಕೀಯದಲ್ಲಿ ದೊಡ್ಡ ಮೇಧಾವಿಗಳು ಅವರು ಅಚ್ಚುಕಟ್ಟಾಗಿ ಜನಸೇವೆ ಮಾಡಿದರು, ಆ ಮಾರ್ಗದರ್ಶನ  ಹಾಗೂ ಹಾಕಿಕೊಟ್ಟ ದಾರಿಗಳನ್ನು ನಾನು ಯಾವ ಕಾರಣಕ್ಕೂ ಮರೆಯುವುದಿಲ್ಲ ಎಂದು ತಮ್ಮ ರಾಜಕೀಯ ಪ್ರವೇಶದ ಆ ದಿನಗಳನ್ನು ನೆನಪಿಸಿಕೊಂಡರು.

ನವಯುಗ ಒಂದು ಬಸ್ಸು ಇದಂತೆ ಅದರಲ್ಲಿ ಇರುವ ಪ್ರಯಾಣಿಕರು ಕನಸುಗಳನ್ನ ಕಟ್ಟಿಕೊಂಡು ಪ್ರಯಾಣ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ,

"ನಾನು ಆಕಾಂಕ್ಷೆಯಲ್ಲ, ಅಭ್ಯರ್ಥಿ ಎಂದು ಈ ಹಿಂದೆ ಖಡ ಖಂಡಿತವಾಗಿ ಘೋಷಣೆ ಮಾಡಿದ್ದೇನೆ. ಕ್ಷೇತ್ರದ ಪ್ರತಿ ಗ್ರಾಮಗಳಲ್ಲೂ ನನ್ನ ಗಟ್ಟಿ ಧ್ವನಿ ಕ್ಷೇತ್ರದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿದೆ.

ನಾನು ಎಂದಿಗೂ,ಆಶ್ವಾಸನೆ ಕೊಟ್ಟಿಲ್ಲ, ಸ್ಥಳದಲ್ಲಿಯೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಮಾಡಿದ್ದೇನೆ ಜನರ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಸಂತೋಷಕುಮಾರ ಪಾಟೀಲ ಏನು ಮಾಡಲು ಸಾಧ್ಯ ಎಂದು ನಿರ್ಲಕ್ಷ್ಯಿಸಿದವರು ಇಂದು ನಮ್ಮ ನವಯುಗದ ಕಾರ್ಯ ಚಟುವಟಿಕೆಗಳನ್ನು ನಿಬ್ಬೆರಗಾಗಿ ನೋಡುವಂತೆ ನಮ್ಮ ಕಾರ್ಯ ಚಟುವಟಿಕೆಗಳು ಸಾಗುತ್ತಿದ್ದಾವೆ ವಿರೋಧಿಗಳು ಮೂಕ ವಿಸ್ಪಿತರಾಗಿ ನೋಡುತ್ತಿದ್ದಾರೆ.

ಜನವರಿ 23, ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು  ರಾಣೆಬೆನ್ನೂರ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ 80 ಅಂಶಗಳ ಪ್ರಣಾಳಿಕೆ ಬಿಡುಗಡೆ ಮಾಡುವೆ, ಕಾರ್ಯಕ್ರಮದಲ್ಲಿ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಜನತೆಯೇ ಊಟ ಉಪಚಾರದ ವ್ಯವಸ್ಥೆಯನ್ನು ಮಾಡಿಕೊಂಡು ಬರುವ ಮೂಲಕ ವಿಶಿಷ್ಟ ರೀತಿಯಲ್ಲಿ ಜನತೆ ಬೆಂಬಲ ಸೂಚಿಸಲಿದ್ದಾರೆ‌.

ರಾಜ್ಯದಲ್ಲೇ ಪ್ರಥಮ ಎನ್ನುವಂತೆ ಮಾತೇಯರು ಬಂದು-ಭಗಿನಿಯರು ನನ್ನ ಕ್ಷೇತ್ರದ ಅಕ್ಕಾ-ತಂಗಿಯರು ನನಗೆ ಆಶೀರ್ವಾದ ಮಾಡಲು ರೊಟ್ಟಿ ಬುತ್ತಿ ಸಮೇತ ಆಗಮಿಸಲು ಈಗಾಗಲೇ ತುದಿಗಾಲಲ್ಲಿ ನಿಂತಿದ್ದಾರೆ ಎಂದು ರಾಣೇಬೆನ್ನೂರು ಮತದಾರರ ಮುಖದಲ್ಲಿ 2023ರಲ್ಲಿ ಸಂತೋಷವನ್ನು ಹಂಚುವ ನವಯುಗದ ಸಾರಥಿ ಅಭಿಪ್ರಾಯವನ್ನ ಹಂಚಿಕೊಂಡರು.

2023ರ ನಂತರ ಜನತೆಯ ಬೇಡಿಕೆಗಳು ಈಡೇರಲಿವೆ. ಆಡಳಿತ ಯಂತ್ರ ಜನತೆಯ ಬಳಿ ಬರಲಿದೆ ಎಂದು 2023 ರಲ್ಲಿ ರಾಣೇಬೆನ್ನೂರು ಮತದಾರರ ಮುಖದಲ್ಲಿ ಸಂತೋಷ ಅರಳಿಸುವವರು ಮಾತನಾಡಿದರು.

Post a Comment

0 Comments