ಹರಾಜಾತ್ರಾ ಮಹೋತ್ಸವ 2023.


ಹರಿಹರ:ಪಂಚಮಸಾಲಿ ಗುರುಪೀಠದ ಆವರಣದಲ್ಲಿ ನಾಳೆ ಮತ್ತು ನಾಡಿದ್ದು ಎರಡು ದಿನಗಳ ಕಾಲ ನಡೆಯುವ ಹರ ಜಾತ್ರಾ ಮಹೋತ್ಸವದ ಕಾರ್ಯಕ್ರಮದ ಅಂಗವಾಗಿ ಜನ ಜಾಗೃತಿ ಸಮಾವೇಶ ,ಜ್ಞಾನ ಯೋಗಿ ಸಿದ್ದೇಶ್ವರ ಶ್ರೀ ಗಳಿಗೆ ನುಡಿ ನಮನ ,ರೈತ ರತ್ನ ಸಮಾವೇಶ ಹಾಗೂ ಸಾಂಸ್ಕೃತಿಕ ಸಂಭ್ರಮ ಸಮಾರಂಭವನ್ನು ಈ ಬಾರಿ ಅತ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಗುವುದು ಎಂದು ವೀರಶೈವ ಪಂಚಮಸಾಲಿ ಗುರುಪೀಠದ ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು ಹೇಳಿದರು.
ನಗರದ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪಂಚಮಸಾಲಿ ಗುರುಪೀಠದ ಶ್ರೀಗಳು ಕಾರ್ಯಕ್ರಮದ ಕುರಿತು ಮಾಹಿತಿಯನ್ನ ಹಂಚಿಕೊಂಡರು. 

ನಾಳೆ ಬೆಳಿಗ್ಗೆ ಹರಿಹರ ನಗರದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನ ನೆರವೇರಿಸಿ ರಾಜ್ಯದ ವಿವಿಧ ಕಲಾತಂಡಗಳೊಂದಿಗೆ ಸಹಸ್ರಾರು ಸಂಖ್ಯೆಯ ಮಾತೆಯೊಂದಿಗೆ ಕುಂಭಮೇಳ ಹಾಗೂ ರೊಟ್ಟಿ ಬುತ್ತಿ ಮೆರವಣಿಗೆ ನಂತರ 11 ಗಂಟೆಗೆ ವೇದಿಕೆ ಸಮಾರಂಭ ನಡೆಯಲಿದೆ ಎಂದರು.
ಈ ಬಾರಿ ಹರ ಜಾತ್ರೆಯ ಸಮಯದಲ್ಲಿ ವಿಶೇಷವಾಗಿ ಸಮಸ್ತ ವೀರಶೈವ ಲಿಂಗಾಯತ ಒಳ ಪಂಗಡಗಳಿಗೆ ಕೇಂದ್ರದಲ್ಲಿ ಓಬಿಸಿ ಹಾಗೂ ಪಂಚಮಸಾಲಿ ಸಮುದಾಯಕ್ಕೆ 2a ಮೀಸಲಾತಿ ಹಾಕ್ಕೋತ್ತಾಯಕ್ಕಾಗಿ ಬೃಹತ್ ಜನಜಾಗೃತಿ ಸಮಾವೇಶ ನಡೆಸಲಾಗುವುದು. ಇದೇ ದಿನ ಮಧ್ಯಾಹ್ನ ರೈತ ರತ್ನ ಸಮಾವೇಶದ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಮಾರಂಭವನ್ನು ಉದ್ಘಾಟನೆ ಮಾಡಲಿದ್ದಾರೆ.

ಬೆಳಗಾವಿ ಅಧಿವೇಶನ ಸಮಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಡಿ ಘೋಷಣೆ ಮಾಡಿದ್ದರಿಂದ ಅದರಲ್ಲಿ ಪಂಚಮಸಾಲಿ ಸಮುದಾಯಕ್ಕೆ ಏನೆಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂಬುದರ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಸ್ಪಷ್ಟತೆಯನ್ನು ತಿಳಿಸಲಿದ್ದಾರೆ.
ಈ ಜಾಗೃತಿ ಸಮಾವೇಶದ ಸಂದರ್ಭದಲ್ಲಿ ಮುಖ್ಯಮಂತ್ರಿಗಳೊಂದಿಗೆ ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪನವರು, ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಲಾ ಜೋಷಿ, ಪ್ರಗತಿಪರ ರೈತ ಜಯಲಕ್ಷ್ಮೀ ವೀರಗಂಟಿ ಮತ್ತು ನಾಡಿನಾದ್ಯಂತ ಇರುವ ಐವತ್ತಕ್ಕೂ ಹೆಚ್ಚು ಮಠದ ಸ್ವಾಮೀಜಿಗಳ ಜೊತೆಗೆ ರಾಜ್ಯ ಮತ್ತು ಕೇಂದ್ರದ ಅನೇಕ ವಿವಿಧ ಪಕ್ಷದ ನಾಯಕರು ಪಾಲ್ಗೊಳ್ಳಲಿದ್ದಾರೆ.

15ನೇ ತಾರೀಕು ಭಾನುವಾರ ಮಕರ ಸಂಕ್ರಮಣದ ದಿನ ಬೆಳಗ್ಗೆ 11 ಗಂಟೆಗೆ ವಿಜಯಪುರ ಜ್ಞಾನ ಯೋಗಾಶ್ರಮದ ಲಿಂಗೈಕ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರಿಗೆ ಜ್ಞಾನಯೋಗಿ ನುಡಿ ನಮನ ಸಮಾರಂಭದ ಉದ್ಘಾಟನೆಯನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದ ದಿವ್ಯಚಾನಿತ್ಯವನ್ನು ತರಳಬಾಳು ಬೃಹನ್ಮಠದ ಜಗದ್ಗುರು ಡಾಕ್ಟರ್ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ವಿಜಯಪುರ ಜ್ಞಾನ ಯೋಗಾಶ್ರಮದ ಅಧ್ಯಕ್ಷರು ಬಸವಲಿಂಗ ಮಹಾಸ್ವಾಮಿಗಳು ಖ್ಯಾತ ಚಲನಚಿತ್ರ ನಟ ಡಾಲಿ ಧನಂಜಯ್ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಸೇರಿದಂತೆ ಇತರ ಗಣ್ಯಮಾನ್ಯರು ಪಾಲ್ಗೊಳ್ಳುವರು. ಮಧ್ಯಾಹ್ನ 3 ಗಂಟೆಗೆ ಪಂಚಮ ಪೀಠರೋಹಣ ಸಮಾರಂಭ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಲಿದ್ದಾರೆ. ಕಾರ್ಯಕ್ರಮದ  ದಿವ್ಯ ಸಾನಿಧ್ಯವನ್ನು ಬಾಲ್ಕಿ ಹಿರೇಮಠ ಸಂಸ್ಥಾನದ ಡಾ. ಶ್ರೀ ಬಸವಲಿಂಗ ಪಟ್ಟದೇವರು, ಇಳಕಲ್ ಚಿತ್ತರಗಿ ವಿಜಯ ಮಾಂತೇಶ್ವರ ಸಂಸ್ಥಾನದ ಶ್ರೀ ಗುರು ಮಹಾಂತ ಮಹಾ ಶಿವಯೋಗಿಗಳು ಪಂಚವಾಣಿ ಪತ್ರಿಕೆ ಅನಾವರಣ ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಮಾಡಲಿದ್ದು ಅನೇಕ ಗಣ್ಯ ಮಾನ್ಯರು ಈ ಕಾರ್ಯಕ್ರಮ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.
ಎರಡು ದಿನಗಳ ಕಾಲ ನಡೆಯುವ ಸಮಾರಂಭಕ್ಕೆ ಸುಮಾರು 2 ಲಕ್ಷಕ್ಕೂ ಅಧಿಕ ಪಂಚಮಸಾಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಬಂದಂತ ಎಲ್ಲಾ ಭಕ್ತರಿಗೂ ಊಟ ಉಪಚಾರದ ವ್ಯವಸ್ಥೆಯನ್ನು ಮಾಡಲಾಗಿದೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿಕೊಳ್ಳುವ ವಿವಿಧ ಮಠದ ಸ್ವಾಮೀಜಿಗಳು ಉಳಿದುಕೊಳ್ಳಲು ತಾಲ್ಲೂಕಿನ ವಿವಿಧ ಮಠಗಳಲ್ಲಿ ವ್ಯವಸ್ಥೆಯನ್ನ ಕಲ್ಪಿಸಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಈ ಬಾರಿಯ ಹರ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಪಾಟೀಲ್ ಹರ ಜಾತ್ರಾ ಮಹೋತ್ಸವದಲ್ಲಿ ಪುನೀತ್ ರಾಜಕುಮಾರ್ ಸವಿ ನೆನಪಿಗಾಗಿ ದಾವಣಗೆರೆ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಉಚಿತ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲಾಗುವುದು ಮತ್ತು ಸಂಜೆ ಆರು ಗಂಟೆಯಿಂದ ರಾತ್ರಿ 9:00 ವರೆಗೆ ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಗುರುಪೀಠದ ಧರ್ಮದರ್ಶಿ ಬಿ ಸಿ ಉಮಾಪತಿ,  ಹರಿಹರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಬಲ ಅಭ್ಯರ್ಥಿ ಚಂದ್ರಶೇಖರ್ ಪೂಜಾರ್, ವಸಂತ ಉಲ್ಲತ್ತಿ ,ರಶ್ಮಿ ಕುಂಟೋಜಿ, ವಾಣಿ ಶಿವಣ್ಣ, ಮಲ್ಲಿನಾಥ್ ಸುಷ್ಮಾ ಪಾಟೀಲ್, ಉಚ್ಚಂಗಿದುರ್ಗ ಬಸವರಾಜ್, ಭಾತಿ ರವಿಕುಮಾರ್, ಮಂಜುನಾಥ್, ಚಂದ್ರು ಪಾಟೀಲ್, ನಿರಂಜನ್ ದಿಟೂರ್ ಮತ್ತಿತರರು ಉಪಸ್ಥಿತರಿದ್ದರು.

Post a Comment

0 Comments