ದೊಡ್ಡಬಾತಿ ತಪೋವನದಲ್ಲಿ ನಾಳೆ 74 ನೇ ಗಣರಾಜ್ಯೋತ್ಸವ ಆಚರಣೆ.


ದಾವಣಗೆರೆ.ಜ.೨೬; ಶ್ರೀ ಶಕ್ತಿ ಅಸೋಸಿಯೇಷನ್ (ರಿ) ತಪೋವನ
ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ.ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ನರ್ಸಿಂಗ್‌ ಕಾಲೇಜು ವತಿಯಿಂದ ದೊಡ್ಡಬಾತಿಯ ತಪೋವನದಲ್ಲಿ 74ನೇ ಗಣರಾಜ್ಯೋತ್ಸವ ದಿನಾಚರಣೆ ನಡೆಯಲಿದೆ.ತಪೋವನ ಸಮೂಹ ಸಂಸ್ಥೆಗಳ ಛೇರ್ಮನ್ ಡಾ.ಶಶಿಕುಮಾರ್ ಮೆಹರ್ವಾಡೆ ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ತೀರ್ಥಹಳ್ಳಿಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಬೌದ್ಧಿಕ ಪ್ರಮುಖರಾದ ರಾಮಚಂದ್ರ ಹೊರಣಿ ಬೈಲು,ದಾವಣಗೆರೆ ಜಿಲ್ಲಾ ಪ್ರಚಾರಕರಾದ
ಹರೀಶ್ ಆಗಮಿಸಲಿದ್ದಾರೆ.ಆಯುರ್ವೇದ ಕಾಲೇಜು ಪ್ರಾಂಶುಪಾಲರಾದ ಡಾ.ಶ್ರೀಕಾಂತ್ ಬಿ.ಜಿ, ಯೋಗ & ಪ್ರಕೃತಿ ಚಿಕಿತ್ಸಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಮನಾ ಭಟ್ ಉಪಸ್ಥಿತರಿರುವರು.

Post a Comment

0 Comments