ಹನಗವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಕವಿತಾ ಮಹೇಶ್ವರ ಅವಿರೋಧ ಆಯ್ಕೆ.!!


ಹರಿಹರ.ಜ.5: ಹರಿಹರ ತಾಲ್ಲೂಕು ಹನಗವಾಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಹರಗನಹಳ್ಳಿ ಗ್ರಾಮದ ಕವಿತಾ w/o ಮಹೇಶ್ವರಪ್ಪ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
13 ಸದಸ್ಯ ಬಲವನ್ನು ಹೊಂದಿರುವ ಹನಗವಾಡಿ ಗ್ರಾಮ ಪಂಚಾಯಿತಿಯಲ್ಲಿ ಕವಿತಾ w/o ಮಹೇಶ್ವರಪ್ಪ ಇವರು ಮಾತ್ರ ಅಧ್ಯಕ್ಷೆ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.ಬೇರೆ ಯಾರು ಸದಸ್ಯರು ನಾಮಪತ್ರ ಸಲ್ಲಿಸಿದ ಕಾರಣ ಇವರನ್ನು ಹನಗವಾಡಿ ಗ್ರಾಮ ಪಂಚಾಯತಿಯ ಅಧ್ಯಕ್ಷರನ್ನಾಗಿ ಚುನಾವಣೆ ಅಧಿಕಾರಿಗಳಾಗಿ ಆಗಮಿಸಿದ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣಪ್ಪ ಇವರು ಘೋಷಿಸಿದರು. 

ಕವಿತಾ ಮಹೇಶ್ವರಪ್ಪ ಇವರು ಹನಗವಾಡಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗುವ ಮೂಲಕ ಹೊಸ ಇತಿಹಾಸವನ್ನ ಬರೆದರು. ಇದುವರೆಗೂ ಹನಗವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹರಗನಹಳ್ಳಿ ಗ್ರಾಮದ ಯಾವೊಬ್ಬ ಚುನಾಯಿತ ಸದಸ್ಯರು ಇದುವರೆಗೂ ಪಂಚಾಯತಿಯ ಅಧ್ಯಕ್ಷ ಗಾದಿಯನ್ನು ಅಲಂಕರಿಸಿರಲಿಲ್ಲ. ಕವಿತಾ ಮಹೇಶ್ವರಪ್ಪ ಅವರು ಗ್ರಾಮ ಪಂಚಾಯಿತಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ಹರಗನಹಳ್ಳಿ ಗ್ರಾಮದ ಸದಸ್ಯೆ ಒಬ್ಬರು ಗ್ರಾಮ ಪಂಚಾಯತಿಯ ಅಧ್ಯಕ್ಷರಾಗುವ ಮೂಲಕ ಹಲವು ವರ್ಷಗಳ ನಂತರ ಹರಗನಹಳ್ಳಿ ಗ್ರಾಮದ ಜನರ ಕನಸನ್ನು ನನಸು ಮಾಡಿದ್ದಾರೆ. ಹರಗನಹಳ್ಳಿ ಗ್ರಾಮದ ಚುನಾಯಿತ ಸದಸ್ಯರೊಬ್ಬರು ಅಧ್ಯಕ್ಷರ ಕುರ್ಚಿಯ ಮೇಲೆ ಕುಳಿತುಕೊಳ್ಳಲು ಗ್ರಾಮ ಪಂಚಾಯತಿಯ ಉಪಾಧ್ಯಕ್ಷ ಎಸ್.ಎಮ್. ರೇವಣಸಿದ್ದಪ್ಪ, ಮಾಜಿ ಅಧ್ಯಕ್ಷೆ ಲಕ್ಕವ್ವ ಸೇರಿದಂತೆ ಪಂಚಾಯ್ತಿಯ ಎಂಟು ಜನ ಸದಸ್ಯರ ಸಹಕಾರವೇ ಕಾರಣ ಎಂದು ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷೆ ಕವಿತಾ ಮಹೇಶ್ವರಪ್ಪ ಇವರು ನಮ್ಮ ಮಾಧ್ಯಮ ಪ್ರತಿನಿಧಿಯೊಂದಿಗೆ ಸಂತಸವನ್ನು ಹಂಚಿಕೊಂಡರು.
ಇಂದು ನಡೆದ ಗ್ರಾಮ ಪಂಚಾಯತಿ ಅಧ್ಯಕ್ಷರ ಚುನಾವಣೆಯ ಚುನಾವಣಾ ಅಧಿಕಾರಿಯಾಗಿ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣಪ್ಪ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರೇಣುಕಾಬಾಯಿ, ಸೇರಿದಂತೆ ಗ್ರಾಮ ಪಂಚಾಯತಿಯ ಸಿಬ್ಬಂದಿಗಳು ಹಾಗೂ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರು ಉಪಸ್ಥಿತರಿದ್ದರು.

Post a Comment

0 Comments