ಹರಿಹರ: ಹರಿಹರ ನಗರದ ಹೊರವಲಯದಲ್ಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ನಾಳೆ ನಡೆಯಲಿರುವ ಹರಾ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ.
ಜಾತ್ರೆಯನ್ನ ಯಶಸ್ವಿಗೊಳಿಸಲು ಎಲ್ಲಾ ರೀತಿಯ ಸಿದ್ಧತೆಗಳು ಬರದಿಂದ ಸಾಗುತ್ತಿದೆ. ಪಂಚಮಸಾಲಿ ಗುರುಪೀಠದ ಪೀಠಾಧಿಪತಿ ಶ್ರೀ ವಚನಾನಂದ ಸ್ವಾಮೀಜಿಗಳು ಜಾತ್ರಾ ಸಿದ್ಧತೆಯನ್ನ ತಾವೇ ಖುದ್ದಾಗಿ ಪರಿಶೀಲಿಸಿದರು. ಅಡುಗೆ ಮಾಡುವ ಬಾಣಸಿಗರನ್ನು ಮಾತನಾಡಿಸಿದಾ ಶ್ರೀಗಳು , ಕೆಲ ಹೊತ್ತು ತಾವು ಅಡುಗೆ ಕಾರ್ಯದಲ್ಲಿ ಕೈಜೋಡಿಸಿದರು.
ಮಠದ ಆವರಣದಲ್ಲಿ ಪೆಂಡಾಲ್ ಹಾಕಲಾಗಿದೆ. 40-60 ಅಡಿ ವೇದಿಕೆ ಮೇಲೆ 40 ಗಣ್ಯರಿಗೆ ಸ್ಥಾನ ಕಲ್ಪಿಸಲಾಗಿದೆ. ಕಾರ್ಯಕ್ರಮ ವೀಕ್ಷಿಸಲು 10,000 ಆಸನಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
0 Comments