ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನ ನಿಭಾಯಿಸುವಾಗ ಯಾವುದೇ ಪ್ರಭಾವಕ್ಕೆ ಒಳಗಾಗಬಾರದು. ಸುದ್ದಿಗಳನ್ನು ಬಿತ್ತರಿಸುವ ಸಂದರ್ಭದಲ್ಲಿ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಯಾವುದೇ ಬೇಧ- ಭಾವವಿಲ್ಲದೆ ಸುದ್ದಿಗಳನ್ನು ಪ್ರಸಾರ ಮಾಡಬೇಕು.
ಅಕ್ರಮ ಮರಳು ಗಣಿಗಾರಿಕೆ ಇಡೀ ಹಾವೇರಿ ಜಿಲ್ಲೆಯಾದ್ಯಂತ ಯಾರ ಭಯವಿಲ್ಲದೆ ರಾಜಾರೋಷವಾಗಿ ನಡೆಯುತ್ತಿದೆ.ಇದು ನಿನ್ನೆ ಮೊನ್ನೆಯ ಸಮಸ್ಯೆ ಅಲ್ಲ ಹಲವು ದಶಕಗಳ ಸಮಸ್ಯೆಯಾಗಿ ಉಳಿದಿದೆ.
ದೊಡ್ಡಮಟ್ಟದ ಹೆಸರನ್ನು ಸಂಪಾದಿಸಿದ ಮಾಧ್ಯಮಗಳು ಸುದ್ದಿಯನ್ನ ಬಿತ್ತರಿಸುವ ಸಂದರ್ಭ ಬಂದಾಗ ನಿರಂತರವಾಗಿ ಯಾವುದೇ ಪ್ರಭಾವಕ್ಕೆ ಒಳಗಾಗದೆ, ಯಾವುದೇ ಒತ್ತಡಕ್ಕೆ ಮಣಿಯದೆ ಸುದ್ದಿಯನ್ನ ಮೊಟಕುಗೊಳಿಸದೆ, ರಾಜಾರೋಶವಾಗಿ ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ತಮ್ಮ ಜವಾಬ್ದಾರಿಯನ್ನ ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸಬೇಕು. ಕೇವಲ ಚುನಾವಣೆಯ ವರ್ಷ ಬಂದಾಗ, ಇನ್ನೊಬ್ಬರ ಜನಪ್ರಿಯತೆಯನ್ನ ಸಹಿಸಿಕೊಳ್ಳಲಾಗದಂತ ಪರಿಸ್ಥಿತಿ ಬಂದಾಗ, ಯಾವುದೋ ಪಕ್ಷದ ಗುಲಾಮರಂತೆ ಆ ವ್ಯಕ್ತಿಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಸುದ್ದಿಯನ್ನ ಬಿತ್ತರಿಸುವುದು ಮಾಧ್ಯಮದ ಜವಾಬ್ದಾರಿಯಲ್ಲ.
ಈ ರೀತಿ ಚುನಾವಣೆಯ ವರ್ಷದ ಸಂದರ್ಭದಲ್ಲಿ ಮಾತ್ರ ಮಾಧ್ಯಮದವರಿಗೆ ಅಕ್ರಮ ಚಟುವಟಿಕೆಯ ಬಗ್ಗೆ ಸುದ್ದಿಯನ್ನ ಬಿತ್ತರಿಸುವ ನೆನಪಾಗುತ್ತದೆ. ಉಳಿದ ಸಮಯದಲ್ಲಿ ಇವರ ಜವಾಬ್ದಾರಿಯೇಕೆ ಮರೆತು ಹೋಗಿರುತ್ತದೆ.
ಕಳೆದ ಬಾರಿ ಕೆ .ಆರ್ .ಎಸ್ ಪಕ್ಷ ಅಕ್ರಮ ಮರಳು ಗಣಿಗಾರಿಕೆ ಸಂಬಂಧಿಸಿ ದಂತೆ ರಾಣೇಬೆನ್ನೂರಿನಲ್ಲಿ ದೊಡ್ಡಮಟ್ಟದ ಧ್ವನಿ ಎತ್ತಿ ಹೋರಾಟ ನಡೆಸಿತ್ತು. ಆ ಪಕ್ಷದ ಕಾರ್ಯಕರ್ತರ ಮೇಲೆ ಸುಳ್ಳು ದೂರುಗಳನ್ನು ದಾಖಲಿಸಿದ್ದರು.ಆಗ ದೊಡ್ಡ ಮಟ್ಟದ ಹೆಸರು ಸಂಪಾದಿಸಿದ ಮಾಧ್ಯಮದವರಿಗೆ ಇದು ಕಾಣಲಿಲ್ಲವೇ ? ಅಂದೆ ಮಾಧ್ಯಮದವರು ತಮ್ಮ ಜವಾಬ್ದಾರಿಯನ್ನ ನಿಭಾಯಿಸಬಹುದು ಅಲ್ಲವೇ? ಅಂದೆ ಈ ಅಕ್ರಮದ ಬಗ್ಗೆ ತಮ್ಮ ಮಾಧ್ಯಮದ ಮೂಲಕ ದೊಡ್ಡ ಮಟ್ಟದ ಧ್ವನಿ ಎತ್ತಬಹುದಿತ್ತು ಅಲ್ಲವೇ? ಅಕ್ರಮ ಮರಳುಗಳಿಗಾರಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಅಂದು ಇಲ್ಲದ ತಮ್ಮ ಮಾಧ್ಯಮದ ಹೋರಾಟ ಈ ಚುನಾವಣೆ ವರ್ಷದಲ್ಲಿ ಏಕೆ?
ಹಾವೇರಿ ಜಿಲ್ಲಾದ್ಯಂತ ಹಲವು ದಶಕಗಳಿಂದ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಲೇ ಇದೆ. ಕೇವಲ ಸಂತೋಷ ಪಾಟೀಲ ಒಬ್ಬರೇ ಮಾಧ್ಯಮದವರಿಗೆ ಕಣ್ಣಿಗೆ ಕಾಣುತ್ತಿದ್ದಾರೆ. ಅದು ಈ ಚುನಾವಣೆ ವರ್ಷದಲ್ಲಿ. ಹೇಗಿದೆ ನೋಡಿ ಮಾಧ್ಯಮದ ಜವಾಬ್ದಾರಿ..
ಒಬ್ಬ ವ್ಯಕ್ತಿಯನ್ನ ನೇರವಾಗಿ ಎದುರಿಸಲು ಸಾಧ್ಯವಾಗದವರು ಇಂತಹ ಕುತಂತ್ರದ ಮಾರ್ಗದಿಂದ ವ್ಯಕ್ತಿಯ ಜನಪ್ರಿಯತೆಗೆ ಧಕ್ಕೆ ತರುವ ನಿಟ್ಟಿನಲ್ಲಿ ಮತ್ತು ಆ ವ್ಯಕ್ತಿಯನ್ನ ಹತ್ತಿಕ್ಕುವ ಪ್ರಯತ್ನದ ಒಂದು ಭಾಗವಾಗಿ ಮಾಧ್ಯಮವನ್ನು ಬಳಸಿಕೊಂಡಿರಬಹುದು ಅಲ್ಲವೇ?
ಈಗಾಗಲೇ ಸಂತೋಷ್ ಪಾಟೀಲ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಎಲ್ಲಾ ರೀತಿಯ ತಯಾರಿಯನ್ನ ಮಾಡಿಕೊಂಡಿದ್ದಾರೆ. ಚುನಾವಣೆಗೆ ಸ್ಪರ್ಧಿಸುವ ನಿಟ್ಟಿನಲ್ಲಿ" ನನ್ನ ನಿರ್ಧಾರ ಆಚಲ, ಚುನಾವಣೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ" ಎಂಬ ನಿರ್ಧಾರವನ್ನ ಮಾಡಿದ್ದಾರೆ. ಇದು ಅವರ ಕೆಲವು ವಿರೋಧಿಗಳಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೇಗಾದರೂ ಸಂತೋಷ್ ಪಾಟೀಲ ನಡೆಸುವಂತಹ ವ್ಯವಹಾರದಲ್ಲಿ ತಪ್ಪುಗಳನ್ನ ಹುಡುಕಿ ಅದರಲ್ಲೇ ಅವರನ್ನು ಸಿಲುಕಿಸುವಂತೆ ಮಾಡಿ, ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡುವ ತಂತ್ರದ ಒಂದು ಭಾಗವಾಗಿ ಮೇಲ್ನೋಟಕ್ಕೆ ಕಂಡು ಬರುತ್ತದೆ.
ಸಂತೋಷ್ ಪಾಟೀಲ ಅವರು ದಿನಾಂಕ 23.1.23 ರಂದು ರಾಣೆಬೆನ್ನೂರಿನಲ್ಲಿ ಒಂದು ಐತಿಹಾಸಿಕ ಸಮಾವೇಶವನ್ನು ಅಲ್ಲಿನ ಜನರು ಮಾಡಲು ಹೊರಟಿದ್ದಾರೆ ಇಂತಹ ಸಂದರ್ಭದಲ್ಲಿ ಅವರ ಆತ್ಮಸ್ಥೈರ್ಯ ಕುಗ್ಗಿಸುವ ನಿಟ್ಟಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ವಿಚಾರವನ್ನು ಮುಂದಿಟ್ಟುಕೊಂಡು ಅವರನ್ನ ಹೆಣೆಯುವ ಪ್ರಯತ್ನವನ್ನ ಅವರ ಕೆಲ ವಿರೋಧಿಗಳು ತೆರೆ ಮರೆಯಲ್ಲಿ ನಡೆಸುತ್ತಿದ್ದಾರೆ ಎಂಬ ವಿಚಾರವನ್ನು ರಾಣೇಬೆನ್ನೂರು ತಾಲೂಕಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಎಲ್ಲೋ ಒಂದು ಕಡೆ ಸಂತೋಷ್ ಕುಮಾರ್ ಪಾಟೀಲ ಇವರನ್ನು ಹೆಣೆಯುವ ಪ್ರಯತ್ನದಲ್ಲಿ ಸದ್ದಿಲ್ಲದಂತೆ ಅವರಿಗೆ ಉಚಿತ ಪ್ರಚಾರ ಸಿಕ್ಕಿತೇ ಎಂಬ ಅನುಮಾನ ಕಾಡುತ್ತಿದೆ.
ಅಕ್ರಮ ಮರಳು ಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ ರಾಣೆಬೆನ್ನೂರು ತಾಲ್ಲೂಕಿನಾದ್ಯಂತ ಅಕ್ರಮ ಮರಳುಗಳಿಗಾರಿಕೆ ನಿಲ್ಲಬೇಕು. ಅಧಿಕೃತ ಮರಳು ಗುತ್ತಿಗೆ ಪಡೆದವರು ಅನಧಿಕೃತವಾಗಿ ಸರ್ಕಾರದ ಮರಳು ನೀತಿಯನ್ನು ಉಲ್ಲಂಘಿಸಿ ಅಕ್ರಮವಾಗಿ ತುಂಗಭದ್ರ ನದಿಯನ್ನು ಬಗೆಯುತ್ತಿದ್ದಾರೆ. ಇನ್ನು ಅನೇಕ ಗ್ರಾಮಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ರಾಜಾರೋಶವಾಗಿ ನಡೆಯುತ್ತಿದೆ. ಈ ಎಲ್ಲಾ ವಿಚಾರಗಳು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ತಿಳಿದಿದೆ. ಕೂಡಲೇ ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂಬುದು ನಮ್ಮ ಮಾಧ್ಯಮದ ಆಶಯ.
0 Comments