ಒಂದರಿಂದ ದ್ವಿತೀಯ ಪಿಯುಸಿ ವರಗೆ ಉಚಿತ ಶಿಕ್ಷಣ: ಹೆಚ್. ಡಿ ಕುಮಾರಸ್ವಾಮಿ.


ಹರಿಹರ: ಹೆಚ್ ಡಿ ಕೆ ನೇತೃತ್ವದ ಪಂಚ ರತ್ನ ರಥ ಯಾತ್ರೆಯು ಹರಿಹರ ವಿಧಾನಸಭಾ ಕ್ಷೇತ್ರದ ಕೊಂಡಜ್ಜಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಹರ್ಷೋದ್ಧಾರದಿಂದ ಜೈಕಾರಕ ತೊಡಗಿದರ.

ಎಚ್ ಡಿ ಕುಮಾರಸ್ವಾಮಿ ಅವರನ್ನು ಕೊಂಡೆಜ್ಜಿ ಗ್ರಾಮದಲ್ಲಿ ಹರಿಹರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಚ್ಎಸ್ ಶಿವಶಂಕರ್ ಅವರು ಅದ್ದೂರಿಯಾಗಿ ಸ್ವಾಗತ ಕೋರುವ ಮೂಲಕ ಬರಮಾಡಿಕೊಂಡರು.
ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಪಂಚರತ್ನ ರಥಯಾತ್ರೆ ಇನ್ನು ಎರಡು ದಿನಗಳ ಕಾಲ ಹರಿಹರ ವಿಧಾನಸಭಾ ಕ್ಷೇತ್ರ ಅತ್ಯಂತ ಸಂಚರಿಸಲಿದ್ದು ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾಮಗಳಿಗೂ ತೆರಳಲಿದೆ.

ಕೊಂಡಜ್ಜಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿ ಮಾತನಾಡಿದ ಎಚ್ಡಿಕೆ 2018 ರಲ್ಲಿ ನಾನು ಮುಖ್ಯಮಂತ್ರಿ ಆಗಿರುವಂತಹ ಸಂದರ್ಭದಲ್ಲಿ ರೈತರ 25000 ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದೆ. ರೈತರ ಸಾಲ ಮನ್ನಾ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಜೊತೆ ಮೈತ್ರಿ ಮಾಡಿಕೊಳ್ಳಲಾಯಿತು. ಆದರೆ ಕಾಂಗ್ರೆಸ್ ಪಕ್ಷ ರೈತರ ಸಾಲ ಮನ್ನಾ ವಿಚಾರದಲ್ಲಿ ನಮಗೆ ಸಹಕಾರ ನೀಡಲಿಲ್ಲ. ಆದರೂ ಹಠ ಬಿಡದೆ ರೈತರ ಸಾಲ ಮನ್ನಾ ಮಾಡಿದೆ.

ಕೊಂಡಜ್ಜಿ ಗ್ರಾಮವೊಂದರಲ್ಲಿ 85 ಲಕ್ಷ ರೂಪಾಯಿ ಸಾಲ ಮನ್ನಾ ಮಾಡಿದ್ದೇನೆ. ಬಿಜೆಪಿ ಸರ್ಕಾರ ಬಂದ ಮೇಲೆ ಎರಡು ಲಕ್ಷ ಕುಟುಂಬಗಳಿಗೆ ಸಾಲ ಮನ್ನಾ ಆಗಲಿಲ್ಲ. ಸುಮಾರು ಏಳು ಸಾವಿರ ಕೋಟಿ ರೂಪಾಯಿಯನ್ನು ಬಿಜೆಪಿ ಸರ್ಕಾರ ಬೇರೆ ಕಡೆ ವರ್ಗಾಯಿಸಿಕೊಂಡಿತ್ತು. 2 ಲಕ್ಷ ಕುಟುಂಬಗಳಿಗೆ ಬಿಜೆಪಿ ಸರ್ಕಾರ ಅನ್ಯಾಯ ಮಾಡಿತ್ತು.

ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ವಿಧಿವಾ ತಾಯಂದಿರ ಮಾಸಾಸನವನ್ನು 800 ಗಳಿಂದ 2000 ಗಳಿಗೆ ಹೆಚ್ಚಳ ಮಾಡುತ್ತೇನೆ.

60 ವರ್ಷ ಮೇಲ್ಪಟ್ಟ ಹಿರಿಯರಿಗೆ ಮಾಸಿಕ 5000 ಮಾಸಾಸನ ಕೊಡುವೆ.

ವಿಕಲಚೇತನರಿಗೆ ಮಾಸಿಕ 1,200 ಮಾಸಾಸನ ಇದ್ದು ಅದನ್ನು 2,500 ಕ್ಕೆ ಹೆಚ್ಚಿಸುತ್ತೇವೆ. ಮಹಿಳಾ ಸ್ವಸಹಾಯ ಸಂಘಗಳ ಸಾಲವನ್ನು  ಮನ್ನಾ ಮಾಡುತ್ತೇನೆ ಎಂದರು.

ಅಧಿಕಾರಕ್ಕೆ ಬಂದ 24 ಗಂಟೆ ಒಳಗೆ ಈ ಸಾಲ ಮನ್ನಾ ಮಾಡೇ ತೀರುತ್ತೇನೆ.

ತೆಲಂಗಾಣ ಮಾದರಿಯ "ರೈತ ಬಂದು" ಕಾರ್ಯಕ್ರಮವನ್ನು ರಾಜ್ಯದಲ್ಲಿ ಜಾರಿಗೆ ತರುತ್ತೇವೆ.

10 ಎಕರೆ ಜಮೀನು ಹೊಂದಿದ ರೈತರಿಗೆ 10 ಲಕ್ಷ ರೂಪಾಯಿಗಳವರೆಗೆ ಸಾಲ ನೀಡಲಾಗುವುದು.
ಬಿತ್ತನೆ ಬೀಜ ,ರಸಗೊಬ್ಬರಕ್ಕಾಗಿ ರೈತರು ಖಾಸಗಿ ಜನರತ್ತ ಕೈ ಚಾಚ ಬಾರದು ಎಂಬುದು ನಮ್ಮ ಪಕ್ಷದ ಅಜೆಂಡ.

5 ಲಕ್ಷ ರೂಪಾಯಿ ಮೊತ್ತದ ಉಚಿತ ಮನೆಯನ್ನ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ನಿರ್ಮಿಸಿ ಕೊಡಲಾಗುವುದು.

ಒಂದರಿಂದ ದ್ವಿತೀಯ ಪಿಯುಸಿ ವರೆಗೆ ಹೈಟೆಕ್ ಉಚಿತ ಶಿಕ್ಷಣವನ್ನ ನೀಡಲಾಗುವುದು.

ರೈತರ ಪಂಪ್ಸೆಟ್ಗಳಿಗೆ ದಿನನಿತ್ಯ 24 ಗಂಟೆ ಉಚಿತ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂಬ ಭರವಸೆಯನ್ನ ಕ್ಷೇತ್ರದ ಮತದಾರರಿಗೆ ಕುಮಾರಸ್ವಾಮಿಯವರು ನೀಡಿದರು.

ಪಂಚರತ್ನ ಯೋಜನೆಗಳನ್ನು ಜಾರಿ ಮಾಡುವುದು ನನ್ನ ಮೊದಲ ಆದ್ಯತೆಯಾಗಿದೆ. ಅವುಗಳ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಈ ಬಾರಿ ಸಂಪೂರ್ಣ ಬಹುಮತದೊಂದಿಗೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವಂತೆ ನೀವೆಲ್ಲರೂ ಆಶೀರ್ವದಿಸಬೇಕು ಎಂದರು.

ಕುಮಾರಸ್ವಾಮಿ ಅವರ ನೇತೃತ್ವದ ಪಂಚ ರತ್ನ ರಥ ಯಾತ್ರೆಯು ತೆರೆದ ವಾಹನದಲ್ಲಿ ಕೊಂಡೆಜ್ಜಿ ಗ್ರಾಮದಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಬೃಹತ್ ಗಾತ್ರದ ವೀಳ್ಯದೆಲೆಯ ಹಾರವನ್ನು ಕುಮಾರಸ್ವಾಮಿ ಹಾಗೂ ಹರಿಹರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಚ್ಎಸ್ ಶಿವಶಂಕರ್ ಅವರಿಗೆ ಕಾರ್ಯಕರ್ತರು ಹಾಕಿದರು. ಮೆರವಣಿಗೆಯ ಉದ್ದಗಲಕ್ಕೂ ಹೂವಿನ ಅಭಿಷೇಕ ಮಾಡಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಕಾರ್ಯಕರ್ತರು ಆಗಮಿಸಿದರು.

ಪ್ರಕಾಶ್ ಮಂದಾರ
ಸಂಪಾದಕರು.

Post a Comment

0 Comments