ಕುಡಿಯುವ ನೀರಿನಲ್ಲಿ ಆರೋಗ್ಯ ಅಡಗಿದೆ:ವಿ.ವಿಜಯ್ ಕುಮಾರ್ ನಾಗನಾಳ. ಹರಿಹರ ತಾಲೂಕಿನ 9ನೇ ಶುದ್ಧ ನೀರಿನ ಘಟಕ ನಿರ್ಮಾಣ ಕಾರ್ಯಕ್ಕೆ ಚಾಲನೆ.


ಮಂದಾರ ನ್ಯೂಸ್,ಹರಿಹರ: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಫ್ಲೋರೈಡ್ ಹಾಗೂ ಆರ್ಸೆನಿಕ್ ಅಂಶ ಹೆಚ್ಚಿರುವುದನ್ನು ಗಮನಿಸಿ ಹಾಗೂ ಕಿಡ್ನಿ ಸ್ಟೋನ್, ಮೂಳೆ ಸವೆತ ಚರ್ಮ ರೋಗ ಕಾಲುಗಂಟು ಹೀಗೆ ಪ್ರತಿಶತ 80% ಖಾಯಿಲೆಗಳು ನಾವು ಬಳಸುವ ನೀರಿಂದ ಬರುವುದನ್ನು ಸಮೀಕ್ಷೆ ಮೂಲಕ ಮಾಹಿತಿ ಪಡೆದು ಪೂಜ್ಯ ಡಾ.ಡಿ ವೀರೇಂದ್ರ ಹೆಗ್ಡೆ ಅವರು ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರು 4/ 10/ 2019 ರಂದು ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿ ಪ್ರಥಮ ಶುದ್ಧಗಂಗ ಘಟಕವನ್ನು ಲೋಕಾರ್ಪಣೆ ಮಾಡಿದರು. ಪ್ರಸ್ತುತ ಕರ್ನಾಟಕದಲ್ಲಿ 419 ಶುದ್ಧಗಂಗ ಘಟಕಗಳನ್ನು ಪ್ರಾರಂಭಿಸಿ ಅತಿ ಕಡಿಮೆ ದರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಶುದ್ಧ ನೀರು ವಿತರಣೆ ಮಾಡಲಾಗುತ್ತಿದೆ ಎಂದರು.

ಕುಡಿಯುವ ನೀರಿನಲ್ಲಿ ಮನುಷ್ಯನ ಆರೋಗ್ಯ ಅಡಗಿದೆ. ಆದ್ದರಿಂದ ಶುದ್ಧವಾದ ನೀರನ್ನು ಕುಡಿಯ ಬೇಕಾಗಿರುವುದು ಇಂದಿನ ಪರಿಸ್ಥಿತಿಯಲ್ಲಿ ಅನಿವಾರ್ಯ. ಆದರೆ ದುಬಾರಿ ಹಣ ವ್ಯಯ ಮಾಡಿ ಶುದ್ಧೀಕರಿಸಿದ ನೀರನ್ನು ಕುಡಿಯಲಾಗದೆ ಅನೇಕ ಕಾಯಿಲೆಗಳಿಗೆ ಜನಸಾಮಾನ್ಯರು ಒಳಗಾಗಬೇಕಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದಾವಣಗೆರೆ ಜಿಲ್ಲಾ ನಿರ್ದೇಶಕರಾದ ವಿ. ವಿಜಯಕುಮಾರ್ ನಾಗನಾಳ ಅಭಿಪ್ರಾಯಪಟ್ಟರು.

ಹರಿಹರ ನಗರದ ತೆಗ್ಗಿನಕೇರಿ ಭಾಗದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಹಾಗೂ ನಗರಸಭೆ ಹರಿಹರ ಇವರ ಸಹಭಾಗಿತ್ವದಲ್ಲಿ ನಿರ್ಮಾಣವಾಗುತ್ತಿರುವ ಶುದ್ದಗಂಗಾ ಘಟಕದ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಹರಿಹರ ತಾಲೂಕು ಯೋಜನಾಧಿಕಾರಿ ಗಣಪತಿ ಮಾಳಂಜಿಯವರು ಮಾತನಾಡುತ್ತಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶುದ್ಧಗಂಗಾ ವಿಭಾಗದ ವತಿಯಿಂದ ಧರ್ಮಸ್ಥಳ ಧರ್ಮಾಧಿಕಾರಿ ಪೂಜ್ಯ ಶ್ರೀ ವೀರೇಂದ್ರ ಹೆಗ್ಡೆ ಅವರ ಆಶಯದಂತೆ ಜನಸಾಮಾನ್ಯರಿಗೆ 1 ಲೀಟರ್ಗೆ 15 ಪೈಸೆ ದರದಲ್ಲಿ ಕುಡಿಯುವ ನೀರು ದೊರೆಯಲಿದೆ. ಈ ಭಾಗದಲ್ಲಿ ಶುದ್ಧಗಂಗಾ ಘಟಕ ಆರಂಭಿಸಲು ನಗರ ಸಭೆಯ ಸದಸ್ಯ ಸಿದ್ದೇಶ್ ಮತ್ತು ಪೌರಾಯುಕ್ತರಾದ ಬಸವರಾಜ್ ಐಗೂರ ಇವರಲ್ಲಿ ನಗರ ಪ್ರದೇಶದ ಜನರ ಕಾಳಜಿ ಅಡಗಿದೆ ಆದ್ದರಿಂದಲೇ ಇಂತಹ ಮಹತ್ವದ ಯೋಜನೆಗೆ ಕೈಜೋಡಿಸಿದ್ದಾರೆ ಎಂದರು.

ಈ ಸರಳ ಕಾರ್ಯಕ್ರಮದ ಸಮಾರಂಭದಲ್ಲಿ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಗಣ್ಯರು, ವಲಯ ಮೇಲ್ವಿಚಾರಕರು,ಶುದ್ಧಗಂಗಾ ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿಯರು ಪಾಲ್ಗೊಂಡಿದ್ದರು.


Post a Comment

0 Comments