ಹರಿಹರ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಪೂರ್ವ ವಲಯ ವ್ಯಾಪ್ತಿಯ ಪಿಎಸ್ಐ (ಸಿವಿಲ್ )ರವರನ್ನು ವರ್ಗಾವಣೆ ಮಾಡಿ ದಾವಣಗೆರೆ ಪೂರ್ವ ವಲಯ ಉಪ ಪೊಲೀಸ್ ಮಹಾ ನಿರೀಕ್ಷಕ ಡಾ. ಕೆ ತ್ಯಾಗರಾಜನ್ ಶನಿವಾರ ಆದೇಶ ಹೊರಡಿಸಿದ್ದಾರೆ.
ಹರಿಹರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಯಾಗಿ ಹಿಂದೆ ಕರ್ತವ್ಯ ನಿರ್ವಹಿಸಿದ ಬಿಎಸ್ ಅರವಿಂದ್ ಅವರನ್ನು ಭರಮಸಾಗರಕ್ಕೆ ವರ್ಗಾವಣೆ ಮಾಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪಿಎಸ್ಐ 2 ಅಬ್ದುಲ್ ಖಾದರ್ ಜಿಲಾನಿ ಇವರನ್ನು ಸಹ ತುರುವನೂರು ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಹರಿಹರ ಗ್ರಾಮಾಂತರ ನೂತನ ಪಿಎಸ್ಐ ಯಾಗಿ ಟಿ ರಾಜು ಅವರನ್ನು ನೇಮಕ ಮಾಡಲಾಗಿದ್ದು ಇವರು ಈ ಹಿಂದೆ ಚಿತ್ರದುರ್ಗದ ಸಂಚಾರಿ ಪೊಲೀಸ್ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ಮಲೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳೆದ ಒಂದುವರೆ ವರ್ಷದಿಂದ ಪ್ರಾಣಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ರವಿಕುಮಾರ ಅವರನ್ನು ಕಾಗಿನೆಲೆ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಮುಂಬರುವ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಪೂರ್ವ ವಲಯ ಉಪ ಪೋಲಿಸ್ ಮಹಾ ನಿರೀಕ್ಷಕ ಡಾ.ಕೆ ತ್ಯಾಗರಾಜನ್ ಅವರು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
0 Comments