ಬಂಧಿತ ಆರೋಪಿತರಿಂದ ಸುಮಾರು 269.5 ಗ್ರಾಂ ಬಂಗಾರದ ಆಭರಣಗಳು, ಕೃತ್ಯಕ್ಕೆ ಬಳಿಸಿದ ಎರಡು ಬೈಕ್ ಗಳನ್ನು ವಶಪಡಿಸಿಕೊಂಡಿರುತ್ತಾರೆ.ಅಂದಾಜು ಮೊತ್ತ 11,17,500 ಬೆಲೆಯ ಬೈಕ್ ಮತ್ತು ಬಂಗಾರದ ಆಭರಣಗಳನ್ನು ಜಪ್ತಿ ಮಾಡಿರುತ್ತಾರೆ.
ಹರಿಹರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹರಿಹರ ನಗರದಲ್ಲಿ ಕಳೆದ ಮೂರು ತಿಂಗಳ ಹಿಂದೆ ಜೆಸಿ ಬಡಾವಣೆ ,ಎರಡು ತಿಂಗಳ ಹಿಂದೆ ಲೋಹರ್ ಮೊಹಲ್ಲಾದಲ್ಲಿ ಹಾಗೂ ಕಳೆದ ಹತ್ತು ದಿನಗಳ ಹಿಂದೆ ದೊಡ್ಡ ಬೀದಿಯಲ್ಲಿ ಮತ್ತು ರಾಣೇಬೆನ್ನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗೌಳಿಗಲ್ಲಿ ಗೂಡ್ ಶೆಡ್ ರಸ್ತೆಯಲ್ಲಿ ಅದೇ ರೀತಿ 4 ತಿಂಗಳ ಹಿಂದೆ ಮನೆ ಕಳ್ಳತನ ಮಾಡಿದ್ದ ನಾಲ್ಕು ಜನ ಆರೋಪಿತರನ್ನು ಹರಿಹರ ನಗರ ಪೋಲೀಸರು ದಿನಾಂಕ 10. 2. 2023 ರಂದು ದಸ್ತಗಿರಿ ಮಾಡಿರುತ್ತಾರೆ. ಬಂಧಿತ ಆರೋಪಿತರಿಂದ ಬರೋಬ್ಬರಿ 11,17,500 ಬೆಲೆ ಬಾಳುವ ಆವರಣಗಳನ್ನ ವಶಪಡಿಸಿಕೊಳ್ಳುವ ಮೂಲಕ ತಮ್ಮ ಇಲಾಖೆಯ ಮೇಲಧಿಕಾರಿಗಳ ಪ್ರಸಂಶೆಗೆ ಹರಿಹರ ನಗರ ಠಾಣ ಪೊಲೀಸ್ ಇಲಾಖೆ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳು ಪಾತ್ರರಾದರು.
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಆರೋಪಿತರನ್ನು ಪತ್ತೆ ಮಾಡಲಿಕ್ಕಾಗಿ ದಾವಣಗೆರೆ ಜಿಲ್ಲಾ ಮಾನ್ಯ ಪೋಲಿಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ರಾಮಗೊಂಡ ಬಿ ಬಸರಗಿ , ಗ್ರಾಮಾಂತರ ಉಪ ವಿಭಾಗದ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಕನ್ನಿಕಾ ಸಿಕ್ರಿವಾಲಾ ಇವರ ಮಾರ್ಗದರ್ಶನದಲ್ಲಿ ಹರಿಹರ ನಗರ ಪೊಲೀಸ್ ಠಾಣಾಧಿಕಾರಿ ಪಿ ಎಸ್ ಐ-1 ಶ್ರೀ ದೇವಾನಂದ ಎಸ್, ಪಿ ಎಸ್ ಐ ಶಂಕರ್ ಗೌಡ ಪಾಟೀಲ್, ಪಿಎಸ್ಐ ಶ್ರೀ ಚಿದಾನಂದಪ್ಪ ಎಸ್.ಬಿ , ಪಿ ಎಸ್ ಐ ಶ್ರೀ ಮಂಜುನಾಥ ಕಲ್ಲೇದೇವರು ಇವರ ಸಾರಥ್ಯದಲ್ಲಿ ಪೊಲೀಸ್ ಸಿಬ್ಬಂದಿವರಾದ ಮಂಜುನಾಥ್ ಕ್ಯಾತಮ್ಮನವರ, ರಿಜ್ವಾನ್ ನಾಸೂರ್, ಮಂಜುನಾಥ್ ಬಿವಿ. ದಿಲೀಪ್ ಕೆ ಸಿ, ದೇವರಾಜ್ ಸೂರ್ವೆ, ನಾಗರಾಜ್ ಸಿ ಎಂ, ಹನುಮಂತ ಗೋಪನಾಳ, ಸಿದ್ಧರಾಜು ಎಸ್ ಬಿ, ಮಂಜುನಾಥ್ ಬಿ, ಬೀರಲಿಂಗೇಶ ಗುಡಿಯವರ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ರಾಘವೇಂದ್ರ, ಕಾಂತರಾಜ, ನಾಗರಾಜ ಕುಂಬಾರ, ಅಖ್ತರ್ ಎಸ್.ಎಂ, ವೀರೇಶ್ ವಿ,ಅಡಿವೆಪ್ಪನವರ್ ಮಾರುತಿ ಇವರನ್ನೊಳಗೊಂಡ ತಂಡವು ಆರೋಪಿತರನ್ನು ಪತ್ತೆ ಮಾಡಿ ಮಾಲುಗಳನ್ನು ಅಮಾನತ್ತು ಪಡಿಸಿಕೊಳ್ಳುವಲ್ಲಿ ಯಶಸ್ವಿ ಕಾರ್ಯಾಚರಣೆಯಲ್ಲಿ ತಮ್ಮ ದಕ್ಷತೆಯನ್ನ ಮೆರೆಯುವ ಮೂಲಕ ತಮ್ಮ ಇಲಾಖೆಯ ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವುದರ ಜೊತೆಗೆ ಬಹುಮಾನವನ್ನು ಪಡೆದಿದ್ದಾರೆ.
0 Comments