ಬೆಂಗಳೂರು:-ರಾಜ್ಯದ ಪತ್ರಕರ್ತರು 2023/24 ಸಾಲಿನ ಬಜೆಟ್ ನಲ್ಲಿ ಉಚಿತ ಬಸ್ ಪಾಸ್,ಮಾಶಾಸನದಲ್ಲಿ ಏರಿಕೆ, ಜಾಹಿರಾತು ನೀಡುವ ವಿಚಾರದಲ್ಲಿ ರಾಜ್ಯದ ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ,ಪ್ರಾದೇಶಿಕ ಪತ್ರಿಕೆಗಳಿಗೆ ಹಾಗೂ ರಾಜ್ಯ ಮಟ್ಟದ ಪತ್ರಿಕೆಗಳಿಗೆ ಸಮಾನ ರೀತಿಯಲ್ಲಿ ಅಮೂಲಾಗ್ರ ಬದಲಾವಣೆಯ ಜಾಹಿರಾತಿನ ನೀತಿಗಳನ್ನು ತರಬಹುದೆಂಬ ನಿರೀಕ್ಷೆಯಲ್ಲಿ ಇದ್ದ ಮಾಧ್ಯಮ ಲೋಕಕ್ಕೆ ತೀವ್ರ ನಿರಾಸೆಯನ್ನುಂಟು ಮಾಡಿದೆ. ಮುಖ್ಯಮಂತ್ರಿಗಳು ಸರಳ ಸಜ್ಜನಿಕೆಯ ಜೊತೆಗೆ ಉತ್ತರ ಕರ್ನಾಟಕ ರವರಾಗಿದ್ದು ಸುಳ್ಳು ಹೇಳಲಾರರು ಎಂಬ ನಂಬಿಕೆಯಲ್ಲಿದ್ದ ಬಹುತೇಕ ಪತ್ರಕರ್ತರಿಗೆ ಭ್ರಮ ನಿರಸನವಾಗಿದೆ. 2022 ರಲ್ಲಿ ಕಲುಬುರುಗಿ ಯಲ್ಲಿ ನಡೆದ kuwj ಯ 36 ರಾಜ್ಯ ಸಮ್ಮೇಳನದಲ್ಲಿ ಬಹುತೇಕ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ನಂಬಿಸಿ ನಂಬಿಕೆ ದ್ರೋಹ ವೆಸಗಿದ್ದರು. ಮುಂದುವರೆದ ಭಾಗವಾಗಿ ಇತ್ತೀಚೆಗೆ ಫೆಬ್ರವರಿ 2023 ರ ವಿಜಯಪುರದಲ್ಲಿ kuwj ಯಿಂದ ನಡೆದ 37 ನೇ ರಾಜ್ಯ ಸಮ್ಮೇಳನದಲ್ಲಿ ಗ್ರಾಮಾಂತರ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಹಾಗೂ ಇನ್ನೀತರ ಸೌಲಭ್ಯಗಳನ್ನು ಈ ಬಜೆಟ್ ನಲ್ಲಿ ಒದಗಿಸುತ್ತೇನೆ ಎಂದು ಸಮ್ಮೇಳನದಲ್ಲಿ ನಾಡಿನ ಪತ್ರಕರ್ತರಿಂದ ಚಪ್ಪಾಳೆ ಗಿಟ್ಟಿಸಿಕೊಂಡು ಇಂದು ಪ್ರತಿಯೊಬ್ಬ ಪತ್ರಕರ್ತರಿಗೆ ಕಮಲದ ಹೂವನ್ನೇ ಕಿವಿಗೆ ಮುಡಿಸಿ ತಮ್ಮ ನಿಜವಾದ ಮುಖವಾಡವನ್ನು ಅನಾವರಣ ಗೊಳಿಸಿದ್ದಾರೆ. ಸಮಾರು ವರ್ಷಗಳಿಂದ ಪತ್ರಕರ್ತರ ಸಮಾವೇಶಗಳಲ್ಲಿ ಭರಪೂರ ಅಶ್ವಾಸನೆ ಕೊಡುತ್ತಾ ಚಪ್ಪಾಳೆ ಗಿಟ್ಟಿಸಿಕೊಂಡು ಮತ್ತದೇ ರಾಗ ಅದೇ ಹಾಡು ರಿವೈಂಡ್ ಮಾಡುತ್ತಾ ಸಾಗಿದ್ದನ್ನು ಪತ್ರಕರ್ತರರಾದ ನಾವುಗಳು ಇನ್ನೆಷ್ಟು ದಿನ ಸಹಿಸಲು ಸಾಧ್ಯ ಎಂಬ ಪ್ರಶ್ನೆಯನ್ನು ನಮ್ಮಲ್ಲಿ ನಾವು ಪ್ರಶ್ನೆ ಹಾಕಿ ಕೊಳ್ಳುವುದರ ಜೊತೆಗೆ ಇನ್ನೂ ಮುಂದಾದರೂ ಸಾಂಘಿಕ ಹಾಗೂ ಕಾನೂನು ಹೋರಾಟದ ಮುಖಾಂತರ ನಾಡಿನ ಎಲ್ಲಾ ಪತ್ರಕರ್ತರು ಒಂದಾಗಬೇಕು. ಪತ್ರಕರ್ತರ ಜೀವನದ ಜೊತೆ ಚೆಲ್ಲಾಟ ವಾಡುತ್ತಾ ಸುಳ್ಳು ಅಶ್ವಾಸನೆ ಕೊಡುವ ರಾಜಕಾರಣಿಗಳಿಂದ ದೂರವಿರಬೇಕು.ಪತ್ರಕರ್ತರ ಹಕ್ಕು ಉಲ್ಲಂಘನೆಯಾಗುತ್ತಿರುವ ಈ ಸಂದರ್ಭದಲ್ಲಿ ಮಾನವ ಹಕ್ಕು ಆಯೋಗಕ್ಕೆ ವಾರ್ತಾ ಇಲಾಖೆಯ ವಿರುದ್ದ ದೂರು ಸಲ್ಲಿಸಲಿದ್ದೇನೆ.ಇನ್ನು ಸಮಾಜದಲ್ಲಿ ಹೆಚ್ಚಿನ ಹಲ್ಲೆಗಳು ತೊಂದರೆಗಳು ಪತ್ರಕರ್ತರಿಗೆ ಆಗುತ್ತಿದೆಯಾದರೂ ಸರ್ಕಾರ ಇಂದಿನವರೆಗೆ ಪತ್ರಕರ್ತರ ರಕ್ಷಣಾ ಕಾಯ್ದೆ ಜಾರಿಗೊಳಿಸದಿರುವುದು ದುರದೃಷ್ಟಕರ. ಅವರು ನೀಡುವ ಎಂಜಲು ಕಾಸಿನ ಹಣಕ್ಕೆ ನಮ್ಮ ಪತ್ರಕರ್ತರ ಜೀವನ ಬಲಿ ಕೊಡಬಾರದೆಂದು ವಿನಂತಿಸುತ್ತಾ, ಪತ್ರಕರ್ತರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲಾರದಂತ ಬಸವರಾಜ್ ಬೊಮ್ಮಾಯಿಯವರ ನಡೆಗೆ ನಮ್ಮ ಕಾನಿಪ ಧ್ವನಿ ವತಿಯಿಂದ ತೀವ್ರವಾಗಿ ಖಂಡಿಸುವುದರ ಜೊತೆಗೆ ಕಾನೂನು ಹೋರಾಟ ತೀವ್ರ ಗೊಳಿಸಲು ಮುಂದಾಗಿದ್ದೇವೆ..ಇದನ್ನು ರಾಜ್ಯಾಧ್ಯಂತ ವಿರುವ ನಮ್ಮ ಕಾನಿಪ ಧ್ವನಿ ಯ ಘಟಕಗಳು ಖಂಡಿಸಬೇಕು. ಬಂಗ್ಲೆ ಮಲ್ಲಿಕಾರ್ಜುನ, ರಾಜ್ಯಾಧ್ಯಕ್ಷರು, ಕಾನಿಪ ಧ್ವನಿ ಸಂಘಟನೆ.
0 Comments