ತಪೋವನದಲ್ಲಿ ಮೊದಲನೇ ಘಟಿಕೋತ್ಸವ ಸಮಾರಂಭಕ್ಕೆ,ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅಧ್ಯಕ್ಷತೆ:ಡಾ.ವಿ.ಎಂ.ಶಶಿಕುಮಾರ್.

ದಾವಣಗೆರೆ : ಇಲ್ಲಿಗೆ ಸಮೀಪದ ದೊಡ್ಡಬಾತಿಯ ತಪೋವನ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಮೊದಲನೇ ಘಟಿಕೋತ್ಸವ ಸಮಾರಂಭದ ಮುಖೇನ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಪದವಿ ಪ್ರದಾನ ಮಾಡಿ ಪ್ರೋತ್ಸಾಹಿಸುವ ಜೊತೆಗೆ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸಕ್ಕೆ ಮುನ್ನುಡಿ ಬರೆಯಲಾಗಿದೆ.
ಇದೇ ಫೆ.೪ ರಂದು ಮಧ್ಯಾಹ್ನ ೨ ಗಂಟೆಗೆ ದೊಡ್ಡಬಾತಿ ತಪೋವನ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯರಾದ ಡಾ. ಜಿ.ಎಂ. ಸಿದ್ದೇಶ್ವರ ಉಪಸ್ಥಿತರಿರುವರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರೋ. ಎಸ್.ವಿ. ಹಲಸೆ ಮುಖ್ಯ ಅತಿಥಿಗಳಾಗಿ ಘಟಿಕೋತ್ಸವದ ಭಾಷಣ ನೆರವೇರಿಸುವರು.
ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಮಾಜಿ ಡೀನ್ ಡಾ. ಶ್ರೀನಿವಾಸ್ ಬನ್ನಿಗೋಳ ಮತ್ತು ತಪೋವನ ಛೇರ್ಮನ್ನರಾದ ಡಾ. ವಿ.ಎಂ. ಶಶಿಕುಮಾರ್ ಗೌರವಾನ್ವಿತ ಉಪಸ್ಥಿತರಿರುವರು. ಪ್ರಾಂಶುಪಾಲರು ಡಾ. ಬಿ.ಜಿ. ಶ್ರೀಕಾಂತ್ ಸೇರಿದಂತೆ ಸಿಬ್ಬಂದಿ ವರ್ಗದವರು ಪಾಲ್ಗೊಳ್ಳುವರು.
ತಪೋವನದಲ್ಲಿ ನಾನಾ ಕಾಯಿಲೆಗಳಿಗೆ ಔಷಧ ರಹಿತ ಚಿಕಿತ್ಸೆ : ಮನುಷ್ಯನ ಜೀವನದಲ್ಲಿ ಆರೋಗ್ಯ ಚೆನ್ನಾಗಿದ್ದರೆ ಸರ್ವಸ್ವವೇ ಅಂಗೈಯಲ್ಲಿ ಸಿಕ್ಕಿದಂತೆ. ಹಾಗಾಗಿ ಹಿರಿಯರ ಮಾತಿನಂತೆ ಆರೋಗ್ಯವೇ ಭಾಗ್ಯ.
ಕೆಲವೊಮ್ಮೆ ಒತ್ತಡ ಬದುಕು, ಅನಾರೋಗ್ಯಕರ ಆಹಾರ ಪದ್ಧತಿ, ಪರಿಸರ ವಾತಾವರಣದಲ್ಲಾಗುವ ಏರು-ಪೇರುಗಳು ನಾನಾ ದೈಹಿಕ, ಮಾನಸಿಕವಾಗಿ ವಿವಿಧ ಕಾಯಿಲೆಗಳು ಉಲ್ಭಣಸಲಿವೆ. ಅವುಗಳ ನಿವಾರಣೆಗಾಗಿ ಹಿಂದೆ ಹಿರಿಯರು ಪ್ರಕೃತಿ ಮಡಿಲಲ್ಲಿ ಸಿಗುವ ಔಷಧೀಯ ಸಸ್ಯಗಳ ಮೂಲಕ ಗುಣಪಡಿಸುವ ಶಕ್ತಿ ಹೊಂದಿದ್ದರು. ಆರ್ಯುವೇದ ಹಾಗೂ ಪ್ರಕೃತಿ ಚಿಕಿತ್ಸೆ ಕಾಯಿಲೆಗಳ ಗುಣಮುಖಕಕ್ಕೆ ದಿವ್ಯ ಔಷಧವಾಗಿದೆ.
ಅಂತೆಯೇ ದಾವಣಗೆರೆ ಸಮೀಪದ ದೊಡ್ಡಬಾತಿಯಲ್ಲಿರುವ ತಪೋವನ ಆರ್ಯುವೇದ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಪ್ರಕೃತಿ ಮಡಿಲಿನಲ್ಲಿ ಆರ್ಯುವೇದ ಪದ್ಧತಿಯಡಿ, ಪ್ರಕೃತಿ ಚಿಕಿತ್ಸೆ ಜೊತೆಗೆ ದೈಹಿಕ, ಮಾನಸಿಕ ಬಲಕ್ಕೆ ಅವಶ್ಯಕವಾದ ಯೋಗದ ಮೂಲಕ ಸಕ್ಕರೆ ಕಾಯಿಲೆ, ಪಾರ್ಶ್ವವಾಯು, ಮೂಳೆ ಸವೆತ, ಸಂಧಿವಾತ, ಕಿಡ್ನಿ ತೊಂದರೆ, ಅಲ್ಸರ್, ಕ್ಯಾನ್ಸರ್, ಥೈರಾಯ್ಡ್, ಸೌಂದರ್ಯ ವರ್ಧನೆ ಚಿಕಿತ್ಸೆ, ಸೊಂಟ ನೋವು, ಕಣ್ಣಿನ ತೊಂದರೆ, ಪೈಲ್ಸ್, ಮಕ್ಕಳಲ್ಲಿ ಕಂಡು ಬರುವ ಸಾಮಾನ್ಯ ಕಾಯಿಲೆಗಳು, ಪ್ರಸೂತಿ ಮತ್ತು ಸ್ತಿçà ರೋಗ ಸಮಸ್ಯೆಗಳು ಸೇರಿದಂತೆ ನಾನಾ ಕಾಯಿಲೆಗಳನ್ನು ಔಷಧ ರಹಿತವಾಗಿ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸುವಲ್ಲಿ ಹೆಸರುವಾಸಿಯಾಗಿದೆ. ಆಯುಷ್ ಚಿಕಿತ್ಸೆಯಲ್ಲಿ ದೊಡ್ಡಬಾತಿ ತಪೋವನ ಆರ್ಯುವೇದ ಪ್ರಕೃತಿ ಚಿಕಿತ್ಸೆ ಕಾಲೇಜು ಹಾಗೂ ಆಸ್ಪತ್ರೆಯು ರಾಜ್ಯದಲ್ಲೆ ಗುರುತಿಸಿಕೊಂಡಿದೆ.
ತಪೋವನ ಆಯುರ್ವೇದಿಕ್ ವೈದ್ಯಕೀಯ ಕಾಲೇಜು ದಾವಣಗೆರೆ ಕರ್ನಾಟಕದ ಪ್ರತಿಷ್ಠಿತ ಖಾಸಗಿ ಆಯುರ್ವೇದ ಕಾಲೇಜುಗಳಲ್ಲಿ ಒಂದಾಗಿದೆ. ಕಾಲೇಜನ್ನು ತಪೋವನ ಆಯುರ್ವೇದಿಕ್ ಕಾಲೇಜು ದಾವಣಗೆರೆ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ ಮತ್ತು ಇದನ್ನು ೨೦೦೨ ರಲ್ಲಿ ಸ್ಥಾಪಿಸಲಾಯಿತು. ಅತ್ಯುತ್ತಮ ಆಯುರ್ವೇದ ಆರೈಕೆಯೊಂದಿಗೆ ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸಲು ಪ್ರಾರಂಭಿಸಲಾಯಿತು. ಇದು ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್‌ನೊಂದಿಗೆ ಸಂಯೋಜಿತವಾಗಿದೆ ಮತ್ತು ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ಸ್ನಿಂದ ಅನುಮೋದಿಸಲಾಗಿದೆ.
ತಪೋವನ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ಉತ್ತಮವಾಗಿ ಸ್ಥಾಪಿತವಾದ ಶ್ರೀ ಶಕ್ತಿ ಅಸೋಸಿಯೇಷನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ಗೆ ಇತ್ತೀಚಿಗೆ ಸೇರ್ಪಡೆಯಾಗಿದೆ. ಕಾಲೇಜು ಗುಣಮಟ್ಟದ ತರಬೇತಿಯ ಮೂಲಕ ಆಯುರ್ವೇದದ ಅರಿವು ಮತ್ತು ಅನಿಸಿಕೆಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಉನ್ನತ ಅಧ್ಯಯನದ ನಂತರದ ಹಂತದಲ್ಲಿ ವೃತ್ತಿಪರ ಕೋರ್ಸ್ಗಳ ಆಕಾಂಕ್ಷಿಗಳಲ್ಲಿ ಸಕಾರಾತ್ಮಕ ಅಭಿವ್ಯಕ್ತಿಗಳನ್ನು ರೂಪಿಸುತ್ತದೆ.
ತಪೋವನದ ವಿಶೇಷತೆ : ಡೀಲಕ್ಸ್ ಕೊಠಡಿಗಳು, ಮಸಾಜ್ ಚಿಕಿತ್ಸೆ, ಮಣ್ಣಿನ ಚಿಕಿತ್ಸೆ, ಜಲಚಿಕಿತ್ಸೆ, ಆಕ್ಯುಪಂಕ್ಚರ್, ಫಿಸಿಯೊಥೆರಪಿ, ಆಹಾರ ಚಿಕಿತ್ಸೆ, ಯೋಗ ಚಿಕಿತ್ಸೆ, ಕರುಳು ಶುದ್ಧೀಕರಣ, ಆಕ್ಯುಪ್ರೆಶರ್, ಪಂಚಕರ್ಮ ಚಿಕಿತ್ಸೆ ನೀಡಲಾಗುತ್ತಿದ್ದು, ಇದರಿಂದ ರಾಜ್ಯದಲ್ಲೆ ಪ್ರಸಿದ್ಧಿ ಪಡೆದಿದೆ.
ಹಚ್ಚಹಸಿರ ಸೊಬಗು: ತಪೋವನದಲ್ಲಿ ಪ್ರಕೃತಿ ಮಡಿಲಲ್ಲಿ ಆರ್ಯುವೇದ ಚಿಕಿತ್ಸೆ ಮೂಲಕ ದೈಹಿಕ ಬಲದ ಜೊತೆಗೆ ಅಲ್ಲಿನ ಸುತ್ತಮುತ್ತಲಿನ ವಾತಾವರಣವು ಗುಡ್ಡಗಳ ತಪ್ಪಲು, ಹಚ್ಚ ಹಸಿರು ಹೊದ್ದ ಸುಂದರ ಪ್ರಕೃತಿಯುಳ್ಳ ಈ ಕ್ಯಾಂಪಸ್ ಪ್ರವೇಶಿದರೆ ಮಾನಸಿಕ ಶಕ್ತಿಯನ್ನು ಸಹ ತುಂಬುವುದು.
ವಿಶೇಷ ಚಿಕಿತ್ಸೆಗಳು : ಅತ್ಯಾಧುನಿಕ ಚಿಕಿತ್ಸಾ ಪದ್ಧತಿಯಲ್ಲಿ ಒಂದಾದ ಹೈಡ್ರೋ ಡೀಲಕ್ಸ್ ಮಸಾಜ್ ನೀರಿನ ಕಂಪನಗಳ ಚಿಕಿತ್ಸೆ ಇಲ್ಲಿ ಇದೆ. ಅಲ್ಲದೇ ಸೂರ್ಯ ಚಿಕಿತ್ಸೆಯ ಒಂದು ಭಾಗವಾಗಿದ್ದು, ಕ್ರೊಮೊಧರ್ಮೋಲಿಯಮ್ ಸಾಧನ ಬಳಸಿ ದೇಹದ ತೊಂದರೆಗಳಿಗೆ ಅನುಗುಣವಾಗಿ ಆಯಾ ಬಣ್ಣದ ಮೂಲಕ ಕಿರಣಗಳನ್ನು ದೇಹದ ಅವಶ್ಯಕ ಭಾಗಕ್ಕೆ ನೀಡುವ ವರ್ಣ ಚಿಕಿತ್ಸೆಯನ್ನು ನೀಡಲಾಗುತ್ತದೆ. ಚರ್ಮದ ತೊಂದರೆಗಳಿಗೆ ಬಾಳೆಎಲೆ ಬಳಸಿ ದೇಹದ ಬೆವರು ಗ್ರಂಥಿಗಳನ್ನ ಪ್ರಚೋದಿಸಿ ಕಲ್ಮಶವನ್ನು ಹೊರಹಾಕುವ ಅತಪಸ್ನಾನ ಚಿಕಿತ್ಸೆ ಸಹ ಇಲ್ಲಿ ನೀಡಲಾಗುತ್ತದೆ. ಮಸಾಜ್ ಥೆರಪಿ ದೇಹದ ಕಾರ್ಯಗಳನ್ನು ಪ್ರಚೋದಿಸುತ್ತದೆ. ರಕ್ತಸಂಚಾರ ಹಾಗೂ ನರಗಳನ್ನು ಪ್ರಚೋದಿಸುವುದರಿಂದ ದೇಹಕ್ಕೆ ಚೈತನ್ಯ ತುಂಬುವAತಹ ಅಂಗವರ್ಧನ ಚಿಕಿತ್ಸೆಯು ಇಲ್ಲಿ ಸಿಗಲಿದೆ.
ಬಾಕ್ಸ್ .........................
ಪದವಿ ಪಡೆದ ವಿದ್ಯಾರ್ಥಿಗಳು ಮೊದಲಿಗರಾಗಲಿ :
ಇದೇ ಮೊದಲ ಬಾರಿಗೆ ತಪೋವನದಲ್ಲಿ ಘಟಿಕೋತ್ಸವ ಸಮಾರಂಭ ನಡೆಯುತ್ತಿರುವುದು ಸಂತಸ ಮೂಡಿಸಿದೆ. ಕಳೆದ ವರ್ಷವೇ ಘಟಿಕೋತ್ಸವ ಸಮಾರಂಭ ನಡೆಸಬೇಕೆಂಬ ಆಶಯವಿತ್ತು. ಆದರೆ ಕೋವಿಡ್ ಕಾರಣ ಅದು ಸಾಧ್ಯವಾಗಿರಲಿಲ್ಲ. ನಮ್ಮ ಕಾಲೇಜಿನಲ್ಲಿ ಉತ್ತಮ ವಿದ್ಯಾಭ್ಯಾಸ ಪಡೆದು ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸುವುದು ಅವರ ಸಾಧನೆಗೆ ನೀಡುವ ಗೌರವವಾಗಿದೆ. ಈ ಘಟಿಕೋತ್ಸವದಲ್ಲಿ ೧೦೪ ವಿದ್ಯಾರ್ಥಿಗಳು ಪದವಿ ಸ್ವೀಕರಿಸುತ್ತಿದ್ದು, ಈ ಪೈಕಿ ಓರ್ವ ವಿದ್ಯಾರ್ಥಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ರಾಜ್ಯಕ್ಕೆ ಪ್ರಥಮರಾಗಿ ಚಿನ್ನದ ಪದಕ ಪಡೆದಿದ್ದಾರೆ. ೧೮ ವಿದ್ಯಾರ್ಥಿಗಳು ರಾಜ್ಯ ಶ್ರೇಣಿಯಲ್ಲಿ ರ‍್ಯಾಂಕ್ ಪಡೆದಿದ್ದಾರೆ. ಈ ವಿದ್ಯಾರ್ಥಿಗಳು ಮುಂದಿನ ಭವಿಷ್ಯದಲ್ಲಿ ಮತ್ತಷ್ಟು ಸಾಧನೆ ಮಾಡಿ ತಮ್ಮ ಜ್ಞಾನ ಮತ್ತು ಸಾಮರ್ಥ್ಯದ ಮುಖೇನ ಜನರ ಆರೋಗ್ಯ ಕಾಪಾಡುವಲ್ಲಿ ಮೊದಲಿಗರಾಗಲಿ ಎಂದು ಡಾ. ವಿ.ಎಂ. ಶಶಿಕುಮಾರ್ ಶುಭಹಾರೈಸಿದರು.

Post a Comment

0 Comments