ಪೌರಕಾರ್ಮಿಕರಿಗೊಂದು ಸಲಾಂ.!!

ಜಾತ್ರೆಯ ಸ್ವಚ್ಛತೆಗೆ ಶ್ರಮಿಸಿದವರು. 
ಈ ಬಾರಿಯ ಮಾರಿಜಾತ್ರೆಗೆ ದಿನವೂ ಲಕ್ಷಾಂತರ ಜನ ಭೇಟಿನೀಡಿದ್ದಕ್ಕೆ ನಮ್ಮೂರು ಸಾಕ್ಷಿಯಾಗಿದೆ. ದಿನವೂ ದೇವಿಯ ದರ್ಶನಕ್ಕೆ, ಮನೋರಂಜನಾ ಆಟಗಳಿಗೆ, ಜಾತ್ರೆ ಪೇಟೆಯ ಆಹಾರ ಸವಿಯಲು ಮತ್ತು ವಸ್ತುಪ್ರದರ್ಶನದಲ್ಲಿ ಸಾಮಗ್ರಿಕೊಳ್ಳಲು ಸಾವಿರಾರು ಜನ ಮುಗಿಬೀಳುತ್ತಿದ್ದುದ್ದು ಸರ್ವೇ ಸಾಮಾನ್ಯ. 
ಇದೆಲ್ಲ ಕಾರಣಗಳಿಂದ  ಜಾತ್ರೆಯಲ್ಲಿ ಒಂದು ದಿನಕ್ಕೆ ಸರಿ ಸುಮಾರು 30-34 ಟನ್ ಕಸ ಉತ್ಪತ್ತಿಯಾಗುತ್ತದೆ. ಅದರ ಸಂಗ್ರಹಣೆ ಮತ್ತು ವಿಲೇವಾರಿಯನ್ನು ಮಾಡುವುದು ನಮ್ಮೂರಿನ ಪೌರಕಾರ್ಮಿಕರು. ಅವರ ಶ್ರಮವನ್ನು ಗೌರವಿಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

ಪೌರಕಾರ್ಮಿಕರು ಜಾತ್ರೆಯ ಸಮಯಕ್ಕೆ ಪ್ರತಿ ದಿನ ಮುಂಜಾನೆ ೩ಕ್ಕೆ ಜಾತ್ರೆ ಪೇಟೆಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ತೊಡಗುತ್ತಾರೆ. ಮೊದಲು ಮಾರಿಕಾಂಬಾ ದೇವಿಯ ಮುಂಭಾಗದಲ್ಲಿರುವ ಮಂಟಪ ಸ್ವಚ್ಛಗೊಳಿಸಲು ತೊಡಗುತ್ತಿದ್ದ ಕಾರ್ಮಿಕರಿಗೆ ಅಲ್ಲಿ ಸುಮಾರು 2 ಗಂಟೆ ಸಮಯ ಹಿಡಿಯುತ್ತಿತ್ತು. ನಂತರ ಜಾತ್ರೆ ಪೇಟೆ ಶುಚಗೊಳಿಸುವ ಕಾರ್ಯ ಆರಂಭ 
ಸಾಗರದ ಎಲ್ಲಾ ವಾರ್ಡ್ ನ ಕಾರ್ಮಿಕರು ಮತ್ತು ಕೆಲ ಹೆಚ್ಚುವರಿ ಪೌರಕಾರ್ಮಿಕರನ್ನು ಸೇರಿ ಒಟ್ಟು 142 ಜನರನ್ನು ಈ ಕಾರ್ಯ ಬಳಸಿಕೊಳ್ಳಲಾಗುತ್ತಿತ್ತು. ದಿನಂಪ್ರತಿ ಬೆಳಿಗ್ಗೆ 6ಕ್ಕೆ ಕೆಲಸಕ್ಕೆ ಹಾಜರಾಗುವ ಪೌರಕಾರ್ಮಿಕರು, ಜಾತ್ರೆಗಾಗಿ ಮುಂಜಾನೆ 3ಕ್ಕೆ ಸ್ವಚ್ಛತಾ ಕಾರ್ಯಕ್ಕೆ ಅಣಿಯಾಗುತ್ತಿದ್ದರು. ಅವರವರ ವಾರ್ಡ್ ನ ಸ್ವಚ್ಛತೆಯನ್ನು ಕಾಪಾಡುವ ಜೊತೆಗೆ ಹೆಚ್ಚುವರಿಯಾಗಿ ಜಾತ್ರೆಯ ಪೇಟೆ ಶುಚಿಗೊಳಿಸುತ್ತಿದ್ದರು. ಅವರೊಂದಿಗೆ ನಗರಸಭಾ ಅಧಿಕಾರಿಗಳು ಮೇಲುಸ್ತುವಾರಿಗಾಗಿ ಉಪಸ್ಥಿತರಾಗಿರುತ್ತಿದ್ದರು. 
ಜಾತ್ರೆಯ ಸ್ವಚ್ಛತೆಯನ್ನು ನಿರ್ವಹಿಸಿ ಅಂದವನ್ನು ಕಾಪಾಡುವ ಈ ತಂಡಕ್ಕೆ ಸಾಗರಿಕರ ಮತ್ತು ನಮ್ಮ ಬಳಗದ ಪರವಾಗಿ ತುಂಬು ಹೃದಯದ ಕೃತಜ್ಞತೆಗಳು.

Post a Comment

0 Comments