ನಾಲ್ಕು ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಾನ್ಸಟೆಬಲ್.!?

ಮಂದಾರ ನ್ಯೂಸ್ : ರಾಣೆಬೇನ್ನೂರ : ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯ ಮೇಲೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದ ವಿಷಯಕ್ಕೆ ಲಂಚ್ ಪಡೆಯುತ್ತಿದ್ದ ಪೋಲಿಸ್ ಪೇದೆಯೊಬ್ಬರ ಲೋಕಾಯುಕ್ತ ಪೋಲಿಸರ ಬಲೆಗೆ ಬಿದ್ದ ಘಟನೆ ರಾಣೆಬೇನ್ನೂರ ನಗರದಲ್ಲಿ ಬುಧವಾರ ನಡೆದಿದೆ.

ನಗರದಲ್ಲಿರುವ ಗ್ರಾಮೀಣ ಪೋಲಿಸ್ ಠಾಣೆಯ ಪೇದೆಯಾದ ಮಂಜುನಾಥ ಬಾಳಿಕಾಯಿ ಅವರು ನಾಲ್ಕು ಸಾವಿರ ಲಂಚ್ ದ ಹಣ ಪಡೆಯುವಾಗ ಟ್ರ್ಯಾಪ್ ಮೂಲಕ ಸಿಕ್ಕಿಬಿದ್ದಾರೆ.
ಪ್ರಕರಣದ ಹಿನ್ನೆಲೆ... ರಾಣೆಬೇನ್ನೂರ ತಾಲೂಕಿನ ಹೀಲದಹಳ್ಳಿ ಗ್ರಾಮದ ಜಗದೀಶ ಕಲ್ಲಪ್ಪ ಮಲಬೇರ ಎಂಬ ವ್ಯಕ್ತಿಯ ವಿರುದ್ಧ ರಾಣೆಬೇನ್ನೂರ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿರುತ್ತದೆ. ಈ ಸಮಯದಲ್ಲಿ ಪೋಲಿಸ್ ಪೇದೆಯಾದ ಮಂಜುನಾಥ ಬಾಳಿಕಾಯಿ ಪ್ರಕರಣ ದಾಖಲಾದ ವ್ಯಕ್ತಿ ಜಗದೀಶ ಅವರಿಗೆ ಬಂಧನ ಮಾಡದೆ ನಿಮಗೆ ನೋಟಿಸ್ ಮೇಲೆ  ಬಿಡುಗಡೆ ಮಾಡುವೆ ಎಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಸಮಯದಲ್ಲಿ ಪ್ರಕರಣ ದಾಖಲಾಗಿರುವ ಆರೋಪಿ ಜಗದೀಶ ನಗರದ ಗ್ರಾಮೀಣ ಪೋಲಿಸ್ ಠಾಣೆಯು ಮುಂಭಾಗದಲ್ಲಿ ನಾಲ್ಕು ಸಾವಿರ ಲಂಚ್ ನೀಡುವಾಗ ಲೋಕಾಯುಕ್ತ ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ

Post a Comment

0 Comments