Budget 2023: ಮಧ್ಯಮ ವರ್ಗಕ್ಕೆ ಬಿಗ್ ರಿಲೀಫ್, 5ರಿಂದ 7 ಲಕ್ಷದವರೆಗೆ ಟ್ಯಾಕ್ಸ್ ಇಲ್ಲ..!


ಪಾರ್ಲಿಮೆಂಟ್ನಲ್ಲಿ 2023-24 ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸುತ್ತಿದ್ದಾರೆ. ಇದು ಅವರ ಐದನೇ ಮತ್ತು ಈ ಸರ್ಕಾರದ ಅವಧಿಯ ಕೊನೆಯ ಪೂರ್ಣ ಬಜೆಟ್* *ಆಗಿದೆ.ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನವೇ, ಈ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಮೂಲಕ ಸರ್ಕಾರವು ಜನರ* *ನಿರೀಕ್ಷೆ ತಲುಪಲು ಹೊಸ ಯೋಜನೆಗಳನ್ನು ಆರಂಭಿಸುತ್ತಿದೆ. ಇದರ ಜೊತೆಗೆ ಮಧ್ಯಮ ವರ್ಗಕ್ಕೆ ಬಂಪರ್ ನ್ಯೂಸ್  ನೀಡಿದೆ. 5 ರಿಂದ 7 ಲಕ್ಷದವರೆಗೆ ಯಾವುದೇ ಟ್ಯಾಕ್ಸ್ ಇಲ್ಲ ಎಂದು ಬಜೆಟ್ನಲ್ಲಿ* *ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.*

*5-7 ಲಕ್ಷಕ್ಕೆ ಟ್ಯಾಕ್ಸ್ ಇಲ್ಲ..!*
*7 ಲಕ್ಷ ರೂ ಆದಾಯದರೆಗೂ ತೆರಿಗೆ ವಿನಾಯಿತಿಯನ್ನು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ನಿರೀಕ್ಷೆಯಂತೆ ಮಧ್ಯಮ ವರ್ಗದರವಿಗೆ ಹೆಚ್ಚಿನ ತೆರಿಗೆ ಘೋಷಿಸಿದ ನಿರಾಳವಾಗುವಂತೆ ಮಾಡಿದೆ. ಹೊಸ ಆದಾಯ ತೆರಿಗೆ ಪದ್ಧತಿಯಡಿ 7 ಲಕ್ಷ ಆದಾಯದವರೆಗೂ ತೆರಿಗೆ ಕಟ್ಟುವ ಅಗತ್ಯವಿರೋಲ್ಲ.*

*ವರ್ಷಕ್ಕೆ ₹ 3 ಲಕ್ಷದವರೆಗೆ ಯಾವುದೇ ತೆರಿಗೆ ಇರುವುದಿಲ್ಲ. ₹ 6ರಿಂದ 9 ಲಕ್ಷದವರೆಗೆ ಶೇ 10. ₹ 12ರಿಂದ 15 ಲಕ್ಷಕ್ಕೆ ಶೇ 15. ₹ 15 ಲಕ್ಷಕ್ಕೂ ಹೆಚ್ಚು ಇದ್ದರೆ ಶೇ 30ರಷ್ಟು ತೆರಿಗೆ ವಿಧಿಸಲಾಗುವುದು ಎಂದು* *ಸಚಿವರು ಸ್ಪಷ್ಟಪಡಿಸಿದರು. 15 ಲಕ್ಷ ರೂ. ಆದಾಯಕ್ಕಿಂತೆ ಹೆಚ್ಚಿಗೆ ಇರೋರಿಗೆ ಹೊಸ ತೆರಿಗೆ ಪದ್ಧತಿಯಂತೆ ಶೇ.15ರಷ್ಟು ತೆರಿಗೆ ಕಟ್ಟಬೇಕಾಗಿದ್ದು, 3 ಲಕ್ಷ ರೂಪಾಯಿ ಆದಾಯ ಇರೋರು ತೆರಿಗೆ ಕಟ್ಟುವ ಅಗತ್ಯವಿಲ್ಲ.*

*7 ಲಕ್ಷದವರೆಗೂ ತೆರಿಗೆ ಮಿತಿ ಇದೆ.*
*₹ 0-3 ಲಕ್ಷ ಯಾವುದೇ ತೆರಿಗೆ ಇಲ್ಲ*
*₹ 3-6 ಲಕ್ಷ 5 %*
*₹ 6-9 ಲಕ್ಷ 10 %*
*₹ 9-12 ಲಕ್ಷ 15 %*
*₹ 12-15 ಲಕ್ಷ 20 %*
*₹ 15 ಲಕ್ಷಕ್ಕಿಂತ ಹೆಚ್ಚು 30 %*

*ಆದಾಯ ತೆರಿಗೆಗೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 5 ಮಹತ್ವದ ಕ್ರಮಗಳನ್ನು ಘೋಷಿಸಿದ್ದಾರೆ.*

*1) ₹ 7 ಲಕ್ಷದವರೆಗೆ ಆದಾಯ ತೆರಿಗೆ ವಿನಾಯ್ತಿ.
2) ಹೊಸ ತೆರಿಗೆ ಪದ್ಧತಿಯಲ್ಲಿ ಟ್ಯಾಕ್ಸ್ ಸ್ಲ್ಯಾಬ್ಗಳನ್ನು (ತೆರಿಗೆ ಹಂತಗಳು) 5ಕ್ಕೆ ಮಿತಗೊಳಿಸಲಾಗಿದೆ.*
*3) ₹ 15.5 ಲಕ್ಷ ಅಥವಾ ಅದಕ್ಕೂ ಹೆಚ್ಚಿನ ಆದಾಯವನ್ನು ವೇತನದಿಂದ ಪಡೆಯುವವರಿಗೆ ₹ 52,500 ಸ್ಟಾಂಡರ್ಡ್ ಡಿಡಕ್ಷನ್ ಸೌಲಭ್ಯ ಸಿಗಲಿದೆ.*
*4) ಈವರೆಗೆ ಗರಿಷ್ಠ ತೆರಿಗೆಯ ಮೇಲೆ ಶೇ 37ರಷ್ಟು ಸರ್ಚಾರ್ಜ್ ವಿಧಿಸಲಾಗುತ್ತಿತ್ತು. ಈ ಪ್ರಮಾಣವನ್ನು ಹೊಸ ತೆರಿಗೆ ನೀತಿಯಡಿ ಶೇ 25ಕ್ಕೆ ಇಳಿಸಲಾಗಿದೆ*
*5) ನಿವೃತ್ತರಾದಾಗ ಸಿಗುವ ರಜೆ ನಗದೀಕರಣ ಸೌಲಭ್ಯದ ಮೇಲೆ ಈವರೆಗೆ ₹ 3 ಲಕ್ಷಕ್ಕೆ ಮಾತ್ರ ತೆರಿಗೆ ವಿನಾಯ್ತಿ ಇತ್ತು. ಈ ಮೊತ್ತವನ್ನು ₹ 25 ಲಕ್ಷಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.*

*ಚಪ್ಪಾಳೆ ತಟ್ಟಿ ಸಂಭ್ರಮಿಸಿದ ಸಂಸದರು!*

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಬಜೆಟ್‌ ನಲ್ಲಿ ವಿನಾಯಿತಿ ಘೋಷಣೆ ಮಾಡುತ್ತಿದ್ದಂತೆ ಸರ್ಕಾರದ ಪರ ಸಚಿವರು, ಸಂಸದರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಮೊದಲು 5 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ಸಿಕ್ಕಿತ್ತು.

Post a Comment

0 Comments