ರಾಘಣ್ಣ ಇನ್ನು ನೆನಪು ಮಾತ್ರ.....


ಹರಿಹರ: ತುಂಗಭದ್ರೆಯ ಒಡಲನ್ನು ಸ್ವಚ್ಛಗೊಳಿಸುವ ಪರಿಕಲ್ಪನೆಯೊಂದಿಗೆ ಹರಿಹರ ತಾಲೂಕಿನ ಅತ್ಯಂತ ನಿಷ್ಕಲ್ಮಶವಾದ ಮನಸ್ಸಿನೊಂದಿಗೆ ಜನರ ಭಾವನೆಗಳ ಜೊತೆ ಬೆರತ್ತು ಹೋದ ತಾಲೂಕಿನ ಹೃದಯ ಶ್ರೀಮಂತಿಕೆಯ ಕ್ರಿಯಾಶೀಲ ವ್ಯಕ್ತಿ ರಾಘಣ್ಣ ಇನ್ನು ನೆನಪು ಮಾತ್ರ....

"ನಮ್ಮ ಊರು ನಮ್ಮ ಹೊಣೆ" ರಾಘಣ್ಣ ನಿಮ್ಮ ಸಾವಿನ ಅಗಲಿಕೆಯ ನೋವಿನ ಹೊರೆಯನ್ನ ನಮ್ಮಿಂದ ಹೊರಲು ಸಾಧ್ಯವಾಗುತ್ತಿಲ್ಲ, ಮನಸ್ಸುಗಳು ಬಾರವಾಗುತ್ತಿವೆ, ನಿಮ್ಮ ಸಾವು ನಂಬಲು ಸಾಧ್ಯವಾಗುತ್ತಿಲ್ಲ. 

ಒಬ್ಬ ಪತ್ರಕರ್ತನಾಗಿ ,ಜನಸಾಮಾನ್ಯರ ಧ್ವನಿಯಾಗಿ ,ಸಮಾಜಮುಖಿ ಸುದ್ದಿಗಳನ್ನು ಬಿತ್ತರಿಸುತ್ತಾ, ತಾಲೂಕಿನ ಲಕ್ಷಾಂತರ ಬಡ ಹಾಗೂ ಮಧ್ಯಮ ವರ್ಗದ ಜನರ ಧ್ವನಿಯಾಗಿ ಮುನ್ನಡೆಸಿಕೊಂಡು ಹೋದ ದಿನಗಳನ್ನು ಮರೆಯಲು ಸಾಧ್ಯವಾಗುತ್ತಿಲ್ಲ.

ಹರಿಹರ ನಗರಸಭೆಯಲ್ಲಿ ನಿಮ್ಮ ತಾಯಿಯವರು ಚುನಾಯಿತ ಸದಸ್ಯರಾದರು ನೀವು ನಗರ ಅಭಿವೃದ್ಧಿಗೆ ಸಂಬಂಧಿಸಿದಂತೆ ಇತರ ಚುನಾಯಿತ ಸದಸ್ಯರೊಂದಿಗೆ ಒಬ್ಬ ಹರಿಹರದ ಜವಾಬ್ದಾರಿಯುತ ಚಿಂತಕನಾಗಿ, ತನ್ನ ಮತ ಕ್ಷೇತ್ರದ ಜನರ ಒಳಿತಿಗಾಗಿ, ಅಧಿಕಾರಿಗಳೊಂದಿಗೆ ಚರ್ಚಿಸಿದ ದಿನಗಳನ್ನು ಮರೆಯಲು ಸಾಧ್ಯವಿಲ್ಲ ರಾಘಣ್ಣ.
ಒಬ್ಬ ತಾಲೂಕಿನ ಉದ್ಯಮಿಯಾಗಿ ಕಳೆದ ಎರಡು ತಿಂಗಳ ಹಿಂದೆ ನಗರದ ಹೃದಯ ಭಾಗದಲ್ಲಿ ನಿಮ್ಮ ಸ್ನೇಹಿತರೊಟ್ಟಿಗೆ ಸೇರಿ ಕುಟುಂಬ ಸಮೇತ ಬಂದು ಊಟದ ಸವಿಯನ್ನ ಸವಿಯಲಿ ಎಂಬ ಸದುದ್ದೇಶದಿಂದ "ರಾಯಲ್ ಇನ್ ರಾಕ್"ಹೋಟೆಲ್ ಅನ್ನು ರಾಘಣ್ಣನವರು ಆರಂಭಿಸಿದ ದಿನಗಳನ್ನು ಮರೆಯಲು ಸಾಧ್ಯವಾಗುತ್ತಿಲ್ಲ.

ಒಬ್ಬ ಪತ್ರಕರ್ತನಾಗಿ, ನಗರದ ಅಭಿವೃದ್ಧಿಯ ಚಿಂತಕನಾಗಿ, ಉದ್ಯಮಿಯಾಗಿ, ಎಲ್ಲೋರೊಟ್ಟಿಗೂ ಆತ್ಮೀಯವಾಗಿ ನಗು-ನಗುತ ಬೆರೆಯುತ್ತಿದ್ದ ರಾಘಣ್ಣನವರು ಇಂದು ನಮ್ಮನ್ನೆಲ್ಲ ಅಗಲಿದ್ದಾರೆ. ಅವರ ದೇಹ ಮಾತ್ರ ನಮ್ಮಿಂದ ದೂರವಾಗುತ್ತಿದೆ. ಆದರೆ ಅವರ ಆತ್ಮ ನಮ್ಮೆಲ್ಲರೊಟ್ಟಿಗೆ ಕಣ್ಣಿಗೆ ಕಾಣದೆ ನಗರ ಅಭಿವೃದ್ಧಿಗಾಗಿ ಚಿಂತಿಸುತ್ತಿದೆ, ಚಂಚರಿಸುತ್ತಿದೆ.

ರಾಘಣ್ಣನವರು ಪಕ್ಷಾತೀತವಾಗಿ, ಜಾತ್ಯತೀತವಾಗಿ, ಸರ್ವಧರ್ಮಿಯರ ಮನೆ ಮಗನಾಗಿ ಎಲ್ಲರ ಪ್ರೀತಿ ,ವಿಶ್ವಾಸ ,ಸ್ನೇಹಕ್ಕೆ ಭಾಜರರಾದ .ನಿಷ್ಕಲ್ಮಶವಾದ ,ಹಾಲಿನಂತ ಹೃದಯದ ವ್ಯಕ್ತಿಯಾಗಿದ್ದರು ರಾಘಣ್ಣನವರು.... 

ದೇವರು ಒಳ್ಳೆಯವರನ್ನು ಈ ಭೂಮಿಯ ಮೇಲೆ ಹೆಚ್ಚು ದಿನ ಬದುಕಿ ಬಾಳಲು ಬಿಡುವುದಿಲ್ಲ ಎಂಬುದಕ್ಕೆ ರಾಘಣ್ಣನವರ ಸಾವಿನ ನೋವೇ ಮತ್ತೊಮ್ಮೆ ಉದಾರಣೆಯಾಗಿದೆ.

ನನ್ನ ಬರಹದ ಮಾರ್ಗದರ್ಶಕರಾದ ರಾಘಣ್ಣನವರ ನೆನಪಿಗಾಗಿ ಅವರೊಂದಿಗೆ ಕಳೆದ ದಿನಗಳನ್ನು ನೆನಪಿಸಿಕೊಳ್ಳುತ್ತಾ ಈ ಬರಹದ ಸುದ್ದಿಯನ್ನ ಬಿತ್ತರಿಸುವ ಮೂಲಕ ಅವರ ಆತ್ಮಕ್ಕೆ ಸಮರ್ಪಿಸುತ್ತಿದ್ದೇನೆ.

ರಾಘಣ್ಣ ಮತ್ತೆ ಹುಟ್ಟಿ ಬನ್ನಿ. 
🙏🙏🙏

Post a Comment

0 Comments