ರಾಣೆಬೆನ್ನೂರು: ಯಾವ ಸರ್ಕಾರದ ಹತ್ತಕ್ಷೇಪವಿಲ್ಲದೆ ನಿಷ್ಪಕ್ಷಪಾತವಾಗಿ, ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸಂಸ್ಥೆ ಚುನಾವಣಾ ಆಯೋಗ. ದೇಶದ ಪ್ರಜಾತಂತ್ರ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಜವಾಬ್ದಾರಿ ಚುನಾವಣಾ ಆಯೋಗ ಹೊಂದಿರುತ್ತದೆ. ಭವ್ಯ ಭಾರತದ ನಿರ್ಮಾಣದಲ್ಲಿ ಚುನಾವಣಾ ಆಯೋಗದ ಪಾತ್ರ ಅತ್ಯಮೂಲ್ಯ.
ಪ್ರಜಾತಂತ್ರ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಯಾವ ಪ್ರಭಾವಕ್ಕೂ ಒಳಗಾಗದೆ ಸ್ವತಂತ್ರವಾಗಿ ಕೆಲ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಮತದಾರರ ಮೇಲೆ ಪ್ರಭಾವ ಬೀರುವಂತಹ ಸರ್ಕಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಜವಾಬ್ದಾರಿಯು ಚುನಾವಣಾ ಆಯೋಗ ಚುನಾವಣಾ ಸಂದರ್ಭದಲ್ಲಿ ಹೊಂದಿರುತ್ತದೆ.
ಎರಡು ವರ್ಷಕ್ಕಿಂತ ಹೆಚ್ಚು ಒಂದೇ ಕಡೆ ಸೇವೆ ಸಲ್ಲಿಸಿದಂತ ಸರ್ಕಾರಿ ನೌಕರರನ್ನು ಬೇರೆಡೆ ವರ್ಗಾವಣೆ ಮಾಡುವುದು ಚುನಾವಣೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಬೆಳವಣಿಗೆ ಆಗಿರುತ್ತದೆ. ಇದು ಆದೇಶದ ರೂಪದಲ್ಲಿಯೂ ಸಹ ಕಡ್ಡಾಯವಾಗಿರುತ್ತದೆ.
ರಾಜ್ಯ ಚುನಾವಣಾ ಆಯೋಗ ಚುನಾವಣಾ ತಯಾರಿಯ ಸಂದರ್ಭದಲ್ಲಿ ಎಲ್ಲಾ ಸಿದ್ಧತೆಗಳನ್ನು ಮತ್ತು ಮಾಹಿತಿಗಳನ್ನು ಒಂದು ವರ್ಷದ ಮುಂಚಿತವಾಗಿ ಸಂಗ್ರಹಿಟ್ಟಿಕೊಂಡಿರುತ್ತದೆ. ಆ ನಿಟ್ಟಿನಲ್ಲಿ ಯಾವ್ಯಾವ ವಿಧಾನಸಭಾ ಕ್ಷೇತ್ರದಲ್ಲಿ ಯಾವ್ಯಾವ ಸರ್ಕಾರಿ ನೌಕರರು ಎರಡು ವರ್ಷಕ್ಕಿಂತ ಹೆಚ್ಚು ಮತ್ತು ಅದೇ ಜಿಲ್ಲೆಯವರೇ ಆಗಿದ್ದಾರೆ ಎಂಬ ಮಾಹಿತಿಯನ್ನ ಪಡೆಯಬೇಕು ಮತ್ತು ಪಡೆದುಕೊಂಡಿರಬೇಕು. ಚುನಾವಣಾ ದಿನಾಂಕ ಘೋಷಣೆಯ ಮುಂಚಿತವಾಗಿ ಅಂತಹ ಸರ್ಕಾರಿ ನೌಕರರನ್ನು ಮತ್ತೊಂದು ಜಿಲ್ಲೆಗೆ ವರ್ಗಾವಣೆಯ ಪ್ರಕ್ರಿಯೆಗೆ ಕೈ ಹಾಕಬೇಕಾಗುತ್ತದೆ. ಆದರೆ ರಾಜ್ಯ ಚುನಾವಣಾ ಆಯೋಗ ಚುನಾವಣೆಯ ಸಂದರ್ಭದಲ್ಲಿ ಒಂದೇ ಕಡೆ ಎರಡು ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡುವ ವಿಚಾರದಲ್ಲಿ ನಿರ್ಲಕ್ಷ ಧೋರಣೆ ತೋರುತ್ತಿದೆ,ಇದರ ಪರಿಣಾಮ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರುತ್ತದೆ ಈ ಮೂಲಕ ಪ್ರಜಾತಂತ್ರ ವ್ಯವಸ್ಥೆ ಬುಡಮೇಲಾಗುವ ಸಾಧ್ಯತೆ ಇದೆ.
ಮುಖ್ಯಮಂತ್ರಿಗಳ ತವರು ಜಿಲ್ಲೆಯ ಅವರ ಅಚ್ಚುಮೆಚ್ಚಿನ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 18 ವರ್ಷ (2005) ರಿಂದ ನಗರಸಭೆಯ ಪರಿಸರ ಅಭಿಯಂತರಾಗಿ, ಸಹಾಯಕ ಕಾರ್ಯಪಾಲಕ ಅಭಿಯಂತರಾಗಿ ಮುಂಬಡ್ತಿ ಪಡೆದ ನೌಕರರಾಗಿ "ಮಂಜುಳಾ ದೇವಿ.ಸಿ "ಇವರು ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕಳೆದ ಏಳು ವರ್ಷಗಳ ಹಿಂದೆ ಬ್ಯಾಡಗಿ ತಾಲೂಕಿಗೆ ವರ್ಗಾವಣೆಯಾಗಿದ್ದರು.ಅದು ಕೇವಲ ನಾಲ್ಕು ತಿಂಗಳಿಗೆ ಮಾತ್ರ ಮತ್ತೆ ರಾಣೇಬೆನ್ನೂರು ನಗರಸಭೆಗೆ ವರ್ಗಾವಣೆ ಮಾಡಿಸಿಕೊಂಡು ಬಂದರು.
"ಮಂಜುಳಾ ದೇವಿ" ಇವರಿಗೆ ರಾಣೆಬೆನ್ನೂರು ನಗರಸಭೆ ಬಿಟ್ಟು ಹೋಗುವ ಮನಸ್ಸು ಬರುತ್ತಿಲ್ಲ. ಇವರಿಗೆ ಸರ್ಕಾರದ ಆದೇಶ -ಕಾನೂನುಗಳು ಅನ್ವಯಿಸುವುದಿಲ್ಲ. ಏಕೆಂದರೆ ಸರ್ಕಾರವನ್ನೇ ಕೊಂಡುಕೊಳ್ಳುವ ಮಟ್ಟಕ್ಕೆ ಇವರು ಬೆಳೆದಿದ್ದಾರೆ. ಅದಕ್ಕೆ ಅಲ್ಲವೇ 18 ವರ್ಷದಿಂದ ಒಂದೇ ಕಡೆ ಸೇವೆ ಸಲ್ಲಿಸಿ ಪ್ರಮೋಷನ್ ಪಡೆದರು ವರ್ಗಾವಣೆಯಾಗದಿರುವುದು.
ಸರ್ಕಾರದ ಆದೇಶ-ಕಾನೂನಂತೆ ಪ್ರತಿ ಮೂರು, ಇಲ್ಲ ಐದು ವರ್ಷಕ್ಕೊಮ್ಮೆ ಆಡಳಿತಾತ್ಮಕ ದೃಷ್ಟಿಯಿಂದ ವರ್ಗಾವಣೆ ಮಾಡಬೇಕು ಎಂಬ ನಿಯಮವಿದೆ. ಆದರೆ ಈ ನಿಯಮಗಳು ಹಣಬಲ ಹಾಗೂ ರಾಜಕೀಯ ಪ್ರಭಾವ ಇದ್ದಾಗ ಇಂಥ ಅಧಿಕಾರಿಗಳ ವರ್ಗಾವಣೆ ಅಸಾಧ್ಯದ ಮಾತು. ಕಾನೂನು, ಕಟ್ಟಲೆಗಳು ಕೇವಲ ಜನಸಾಮಾನ್ಯರಿಗೆ ಮಾತ್ರ.
"ಮಂಜುಳಾ ದೇವಿ.ಸಿ" ಇವರು ರಾಣೇಬೆನ್ನೂರು ನಗರಸಭೆಯಲ್ಲಿ 2005 ಸೇವೆಗೆ ನಿಯುಕ್ತಿಗೊಂಡ ದಿನಾಂಕದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಈ ಅವಧಿಯಲ್ಲಿ ವಿವಿಧ ಪಕ್ಷದ ಅನೇಕರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ "ಮಂಜುಳಾ ದೇವಿ.ಸಿ" ಇವರನ್ನು ವರ್ಗಾವಣೆ ಮಾಡುವ ವಿಚಾರಕ್ಕೆ ಮಾತ್ರ ಕೈ ಹಾಕುತ್ತಿಲ್ಲ. ಇವರಿಗೆ ರಾಜಕೀಯ ಮಾಡಲು ಇಂತಹ ಸರ್ಕಾರಿ ನೌಕರರ ಅವಶ್ಯಕತೆ ತುಂಬಾ ಇರುತ್ತದೆ. ವಿರೋಧ ಪಕ್ಷದವರು "ಮಂಜುಳಾ ದೇವಿ.ಸಿ"ವರ್ಗಾವಣೆಗೆ ಸಂಬಂಧಿಸಿದಂತೆ ಧ್ವನಿ ಎತ್ತದೆ ಇರುವುದು ಅತ್ಯಂತ ದುರಾದೃಷ್ಟಕರ. ರಾಣೆಬೆನ್ನೂರು ನಗರ ಅಭಿವೃದ್ಧಿಯ ದೃಷ್ಟಿಯಿಂದಲಾದರೂ ಈ "ದೇವಿ" ವರ್ಗಾವಣೆಯಾಗಬೇಕಿತ್ತು. ಆದರೆ ಅದು ಸಾಧ್ಯವಾಗುತ್ತಿಲ್ಲ. ಚುನಾವಣಾ ಆಯೋಗ ಈ ವಿಚಾರದಲ್ಲಿ ಗಮನಹರಿಸಬೇಕಿತ್ತು. ಚುನಾವಣೆಯ ಸಂದರ್ಭದಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನ ಉಳಿಸಿಕೊಳ್ಳುವ ನಿಟ್ಟಿನಲ್ಲಾದರೂ "ಮಂಜುಳಾ ದೇವಿ.ಸಿ" ಇವರನ್ನು ಬೇರೆಡೆ ವರ್ಗಾವಣೆ ಮಾಡಬೇಕಿತ್ತು.
ಗಾಢ ನಿದ್ದೆಯಲ್ಲಿರುವ ಚುನಾವಣಾ ಆಯೋಗ ಇಂತಹ ವಿಚಾರಗಳನ್ನು ಗಮನಿಸಿದಂತೆ ಕಾಣುತ್ತಿಲ್ಲ. ಇನ್ನು ಮುಂದಾದರೂ ಕೇಂದ್ರ ಚುನಾವಣಾ ಆಯೋಗ ರಾಜ್ಯ ಚುನಾವಣಾ ಆಯೋಗದ ನಿರ್ಲಕ್ಷದ ಬಗ್ಗೆ ಮಾಹಿತಿಯನ್ನು ಪಡೆದು 2005 ಸೇವೆಗೆ ನಿಯುಕ್ತಿ ಗೊಂಡ ದಿನಾಂಕದಿಂದ ರಾಣೆಬೆನ್ನೂರು ನಗರ ಸಭೆಯ ಪರಿಸರ ಅಭಿಯಂತರಾಗಿ ಕರ್ತವ್ಯ ನಿರ್ವಹಿಸಿ, ಸಹಾಯಕ ಕಾರ್ಯಪಾಲಕ ಅಭಿಯಂತರಾಗಿ(ಪರಿಸರ) ಪದನ್ನೋತ್ತಿ ಹೊಂದಿದರು ಬೇರೆಡೆ ವರ್ಗಾವಣೆಯಾಗದೆ ಒಂದೇ ಕಡೆ ಸೇವೆ ಸಲ್ಲಿಸುತ್ತಿರುವ" ಮಂಜುಳಾ ದೇವಿ.ಸಿ" ಇವರನ್ನ ವರ್ಗಾವಣೆ ಮಾಡುವ ನಿಟ್ಟಿನಲ್ಲಿ ಮುಂದಾಗುತ್ತಾ ಕಾದು ನೋಡಬೇಕು.
ಯಾವುದೇ ಇಲಾಖೆಯ ಯಾವುದೇ ನೌಕರರಾಗಿದ್ದರು ಅವರನ್ನು ಕನಿಷ್ಠ ಮೂರು ವರ್ಷಕ್ಕೊಮ್ಮೆ ವರ್ಗಾವಣೆ ಮಾಡಿದರೆ ಭ್ರಷ್ಟಾಚಾರವನ್ನು ಸಾಧ್ಯವಾದಷ್ಟು ಮಟ್ಟಿಗೆ ನಿಯಂತ್ರಿಸಲು ಸಾಧ್ಯವಾಗುತ್ತದೆ. ಲೋಕಾಯುಕ್ತ ಇಂತಹ ಸೂಕ್ಷ್ಮ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಇಂಥ ನೌಕರರ ಬಗ್ಗೆ ಸಮಗ್ರ ಮಾಹಿತಿಯನ್ನ ಸಂಗ್ರಹಿಸಿ ನೌಕರರ ಅರಿವಿಗೆ ಬಾರದ ರೀತಿಯಲ್ಲಿ ದಾಳಿ ಮಾಡಿದರೆ ಭ್ರಷ್ಟಾಚಾರದ ಹಣದಲ್ಲಿ ಬೇನಾಮಿ ಆಸ್ತಿ ಸಂಗ್ರಹಿಸಿದ ಹಗರಣವನ್ನು ಬಯಲು ಎಳೆಯಲು ಸಾಧ್ಯವಾಗುತ್ತದೆ. ಹಾವೇರಿ ಲೋಕಾಯುಕ್ತರು ರಾಣೇಬೆನ್ನೂರು ನಗರಸಭೆಯಲ್ಲಿ ಕಳೆದ 18 ವರ್ಷಕ್ಕೂ ಹೆಚ್ಚು ವರ್ಷದಿಂದ ಒಂದೇ ಕಡೆ ಸೇವೆ ಸಲ್ಲಿಸುತ್ತಿರುವ "ಮಂಜುಳಾ ದೇವಿ.ಸಿ" ಸಹಾಯಕ ಕಾರ್ಯಪಾಲಕ ಅಭಿಯಂತರು(ಪರಿಸರ) ಎಂಬ ನೌಕರರ ವಿಚಾರದಲ್ಲಿ ಒಂದು ಹದ್ದಿನ ಕಣ್ಣು ಇಟ್ಟರೆ ನಿಮ್ಮ ಬಲೆಗೆ ಬಹುದೊಡ್ಡ ತಿಮಿಂಗಳ ಬಿಡುವುದರಲ್ಲಿ ಅನುಮಾನವಿಲ್ಲ.
ರಾಜ್ಯ ಚುನಾವಣಾ ಆಯೋಗ, ಲೋಕಾಯುಕ್ತ ಗಾಢ ನಿದ್ದೆಯಿಂದ ಎದ್ದು "ಮಂಜುಳಾ ದೇವಿ" ವಿಚಾರದಲ್ಲಿ ಗಟ್ಟಿ ನಿರ್ಧಾರವನ್ನ ತೆಗೆದುಕೊಂಡು ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವ ಮೂಲಕ ಭವ್ಯ ಭಾರತದ ನಿರ್ಮಾಣಕ್ಕೆ ನಿಮ್ಮ ಅಲ್ಪ ಕೊಡುಗೆಯನ್ನ ನೀಡಿ ಎಂಬುವುದೇ ನಮ್ಮ ಮಾಧ್ಯಮದ ಆಶಯ.
0 Comments