ಗೋಪಾಲ ಕೃಷ್ಣ ಬೇಳೂರು ಹಾದಿ ಸುಗಮ, ಚುನಾವಣೆ ಸ್ಪರ್ಧೆಯಿಂದ ಹಿಂದೆ ಸೆರೆದ ಕಾಗೋಡು ತಿಮ್ಮಪ್ಪ.!?


ಸಾಗರ: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಇಲ್ಲ ಕಾಗೋಡು ತಿಮ್ಮಪ್ಪ.

ಮುಂದೆ ಬರುವಂತ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಸಾಗರ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವರು ಹಾಗೂ ಸಭಾಪತಿಗಳಾದ ಕಾಗೋಡು ತಿಮ್ಮಪ್ಪನವರು ಇಂದು ಮಾಧ್ಯಮದ ಮುಂದೆ ಸ್ಪಷ್ಟನೆ ನೀಡಿದ್ದಾರೆ.

ರಿಪ್ಪಿಂಗ್ ಪೇಟೆ ಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಮಾಧ್ಯಮದವರ ಚುನಾವಣೆ ಸ್ಪರ್ಧೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು ಈ ಬಾರಿ ನಾನು ಯಾವುದೇ ಕಾರಣಕ್ಕೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ಸ್ಪಷ್ಟನೆ ನೀಡಿದರು.

ಕಳೆದ ಕೆಲವು ದಿನಗಳಿಂದ ಸಾಗರ- ಹೊಸನಗರ ವಿಧಾನಸಭಾ ಕ್ಷೇತ್ರಕ್ಕೆ ಈ ಬಾರಿ ಪುನಃ ಕಾಗೋಡು ತಿಮ್ಮಪ್ಪನವರು ಸ್ಪರ್ಧೆ ಮಾಡುತ್ತಾರೆ.? ಟಿಕೆಟ್ ಅವರಿಗೆ ನೀಡಿದ್ದಾರೆ? ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ನಾಯಕರು ಸಾಗರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿಯ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಅಂತಿಮಗೊಳಿಸಿದ್ದಾರೆ.? ಎಂಬ ಸಾರ್ವಜನಿಕರ ವಲಯ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಇಂದು ಕಾಗೋಡು ತಿಮ್ಮಪ್ಪನವರ ನನ್ನ ಸ್ಪರ್ಧೆ ಇಲ್ಲ ಎಂದು ಹೇಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಕಾಗೋಡು ತಿಮ್ಮಪ್ಪನವರು ಇಂದು ನೀಡಿರುವ ಈ ಹೇಳಿಕೆಯಿಂದ ಬೇಳೂರು ಗೋಪಾಲಕೃಷ್ಣ ಅವರ ಸ್ಪರ್ಧೆಗೆ ಇರುವಂತ ಅಡೆತಡೆಗಳು ನಿವಾರಣೆಯಾದಂತಾಗಿದೆ. ಆ ಮೂಲಕ ಬೇಲೂರು ಅವರ ಹಾದಿ ಸುಗಮವಾಗಿದೆ ಎಂದೇ ಹೇಳಲಾಗುತ್ತಿದೆ. 

ಈಗಾಗಲೇ ಸಾಗರ ವಿಧಾನಸಭಾ ಕ್ಷೇತ್ರದಿಂದ ಬೇಳೂರು ಗೋಪಾಲಕೃಷ್ಣ ಸ್ಪರ್ಧೆಗೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ನಾಯಕರು ಒಲವು ಹೊಂದಿದ್ದು ಅವರಿಗೆ ಟಿಕೆಟ್ ಅಂತಿಮ ಎಂದು ಹೇಳಲಾಗುತ್ತಿದೆ.
ಮುಂದೆ ಬರುವಂತ ವಿಧಾನಸಭಾ ಚುನಾವಣೆಯಲ್ಲಿ ಬಂಗಾರಪ್ಪನವರ ಶಿಷ್ಯರ ನಡುವೆ ಬಾರಿ ಜಿದ್ದಾ-ಜಿದ್ದಿನ ಚುನಾವಣಾ ಕಾಲಗ ನಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

Post a Comment

0 Comments