ಮಂದಾರ ನ್ಯೂಸ್,ಹರಿಹರ: ಕರ್ನಾಟಕ ರಾಜ್ಯ ಸಾರ್ವತ್ರಿಕ ಚುನಾವಣೆ 10 ಮೇ 2023 ರಂದು ನಡೆಯಲಿದೆ. ಈಗಾಗಲೇ ನಾಮಪತ್ರದ ಪರಿಶೀಲನೆ, ನಾಮಪತ್ರ ಹಿಂದೆ ಪಡೆಯುವ ಪ್ರಕ್ರಿಯೆಗಳು ಮುಕ್ತಾಯವಾಗಿದ್ದು, ಪಕ್ಷೇತರ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ನೀಡಲಾಗಿದೆ. ಅದೇ ರೀತಿ ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳ ಕ್ರಮ ಸಂಖ್ಯೆಯನ್ನು ಈಗಾಗಲೇ ಚುನಾವಣಾ ಆಯೋಗ ಘೋಷಣೆ ಮಾಡಿದೆ.
ಹರಿಹರ ವಿಧಾನಸಭಾ ಕ್ಷೇತ್ರದಿಂದ 11 ಜನ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, ಪಕ್ಷೇತರ ಅಭ್ಯರ್ಥಿಗಳಿಗೆ ಚಿಹ್ನೆಯನ್ನು ಸಹ ನೀಡಲಾಗಿದೆ .ಅದೇ ರೀತಿ ರಾಷ್ಟ್ರೀಯ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳಿಗೆ ಚಿನ್ನೆ ಹಾಗೂ ಕ್ರಮ ಸಂಖ್ಯೆಗಳನ್ನು ಅನುಗುಣವಾಗಿ ಪ್ರಕಟಣೆ ಮಾಡಲಾಗಿದೆ.
ಹರಿಹರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹೆಚ್. ಎಸ್ ಶಿವಶಂಕರ್ ಅವರ "ಕ್ರಮ ಸಂಖ್ಯೆ 2, ಹೊರೆ ಹೊತ್ತ ಮಹಿಳೆ ,ಜೆಡಿಎಸ್ ಪಕ್ಷದ ಚಿಹ್ನೆ" ಹರಿಹರ ವಿಧಾನಸಭಾ ಕ್ಷೇತ್ರದ ಮತದಾರರು ಕ್ರಮ ಸಂಖ್ಯೆ 2 ನೆನಪಿಟ್ಟುಕೊಂಡು ಪಕ್ಷದ ಚಿಹ್ನೆಗೆ ಮತ ನೀಡಬೇಕು ಎಂದು ಹರಿಹರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹೆಚ್.ಎಸ್ ಶಿವಶಂಕರ್ ಅವರು ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
0 Comments