ಮಂದಾರ ನ್ಯೂಸ್,ಹರಿಹರ:ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಹರಿಹರ ತಾಲ್ಲೂಕ ದಂಡಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ಇಂದು 23.04.23 ರ ಭಾನುವಾರ ಬೆಳಗ್ಗೆ 10:30ಕ್ಕೆ ತಹಸಿಲ್ದಾರ ಕಚೇರಿಯ ಸಭಾಂಗಣದಲ್ಲಿ ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಪೃಥ್ವಿ ಸಾನಿಕಂ ತಹಸೀಲ್ದಾರ್ ಹರಿಹರ, ಹರಿಹರ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾದ ಡಿಜೆ ಶಿವಾನಂದಪ್ಪ ಹಾಗೂ ಎಕ್ಕೆಗುಂದಿ ರುದ್ರಗೌಡ ರವರು ಅಖಿಲ ಭಾರತ ವೀರಶೈವ ಮಹಾಸಭಾ ಸದಸ್ಯರಾದ ಕೆ ಸಿ ಪಟೇಲ್ ಚುನಾವಣಾಧಿಕಾರಿ ಉದಯ ಕುಂಬಾರ, ನಗರಸಭೆ ಆಯುಕ್ತ ಬಸವರಾಜ್ ಐಗೂರು, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು , ಹಾಗೂ ಇನ್ನಿತರ ಅಖಿಲ ಭಾರತ ವೀರಶೈವ ಮಹಾಸಭಾ ದ ಮುಖಂಡರುಗಳು ಭಾಗವಹಿಸಿದ್ದರು.
0 Comments