ದಾವಣಗೆರೆ: ಪರಿಶಿಷ್ಟ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಘಟನೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ತಿಪ್ಪೇಶನಿಗೆ ದಾವಣಗೆರೆಯ ಮಕ್ಕಳ ಸ್ನೇಹಿ ಮತ್ತು ಎಫ್.ಟಿ.ಎಸ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಶ್ರೀಪಾದ.ಎನ್.ಅವರು ಆರೋಪಿಗೆ ೩೦ವರ್ಷ ಶಿಕ್ಷೆ ಹಾಗೂ ೭೦,೦೦೦ ದಂಡ ವಿಧಿಸಿದ್ದಾರೆ. ಅಲ್ಲದೇ ಸಂತ್ರಸ್ಥೆಗೆ ರೂ ೬.೫೦.೦೦೦ ಪರಿಹಾರ ನೀಡಲು ಆದೇಶಿಸಿದ್ದಾರೆ.
ಹಿನ್ನೆಲೆ: ಆರೋಪಿ ಹರಿಹರದಲ್ಲಿ ಹೊಸದಾಗಿ ಕಟ್ಟಿಸುತ್ತಿರುವ ಮನೆ ಹತ್ತಿರ ಸಂತ್ರಸ್ಥೆಗೆ ಕರೆದು ಚಾಕಲೇಟ್, ಕಬ್ಬಿನ ಹಾಲು, ಐಸ್ ಕ್ರೀಂ ನೀಡುತ್ತಿದ್ದ ಎಂದು ಹೇಳಲಾಗಿದೆ. ಹಾಗೇ ಪರಿಚಯ ಮಾಡಿಕೊಂಡು ೧೯-೦೪-೨೦೧೯ರ ಸಂಜೆ ೫-೩೦ರ ಸುಮಾರಿಗೆ ತಾನು ಕಟ್ಟುತ್ತಿರುವ ಮನೆಯೊಳಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸೆಗಿದ್ದಾನೆಂದು ಆರೋಪಿಸಲಾಗಿತ್ತು. ಅವಳು ಘಟನೆಯ ನಂತರ ಅಳುತ್ತಿದ್ದು ಆರೋಪಿ ಸಂತ್ರಸ್ಥೆಯನ್ನು ಹೆದರಿಸಿ ಕಳಿಸಿದನೆಂದು ಆರೋಪಿಸಲಾಗಿತ್ತು. ಸಂತ್ರಸ್ಥೆ ಕುಟುಂಬದವರು ನೀಡಿದ ದೂರಿನ ಮೇಲೆ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆಗಿನ ತನಿಖಾಧಿಕಾರಿಗಳಾದ ಎಂ.ಕೆ.ಗಂಗಲ್ ಡಿವೈಎಸ್ಪಿ ಅವರು ಪ್ರಕರಣದ ತನಿಖೆ ಮಾಡಿ ಆರೋಪಿತನ ವಿರುದ್ಧ ದೋಷ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿದ ದಾವಣಗೆರೆಯ ಮಕ್ಕಳ ಸ್ನೇಹಿ ಮತ್ತು ಎಫ್.ಟಿ.ಎಸ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಶ್ರೀಪಾದ.ಎನ್.ಅವರು ಆರೋಪಿಗೆ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.
ಸರ್ಕಾರಿ ಅಭಿಯೋಜಕರಾದ ಶ್ರೀ ಜಯಪ್ಪ.ಕೆ.ಜಿ,ಯವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿಲಾಗಿದೆ.
0 Comments