ಸಾವಿನ ಬಗ್ಗೆ ಸುಳ್ಳು ಸುದ್ದಿ ,ಅಪಪ್ರಚಾರ: ಸ್ಪಷ್ಟನೆ ನೀಡಿದ ನಟ ದ್ವಾರಕೇಶ್.

ಮಂದಾರ ನ್ಯೂಸ್ :ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನರಾಗಿದ್ದಾರೆಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡಲಾಗಿದ್ದು, “ಆರಾಮವಾಗಿದ್ದೇನೆ, ನಗುನಗುತ್ತಾ ಇದ್ದೇನೆ” ಎಂದು ದ್ವಾರಕೀಶ್‌ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ವಿಡಿಯೊ ಹಂಚಿಕೊಂಡಿರುವ ಅವರು, “ನಾನು ದ್ವಾರಕೀಶ್, ನೀವು ಸಾಕಿದ ದ್ವಾರಕೀಶ್‌, ನೀವು ಬೆಳೆಸಿದ ದ್ವಾರಕೀಶ್, ಚೆನ್ನಾಗಿದ್ದೇನೆ, ನಿಮ್ಮೆಲ್ಲರ ಆಶೀರ್ವಾದ ನನಗೆ ಬೇಕು. ಗಟ್ಟಿಮುಟ್ಟಾಗಿದ್ದೀನಿ, ಯಾವುದೇ ಚಿಂತೆ ಇಲ್ಲ. ಗಟ್ಟಿಮುಟ್ಟಾಗಿದ್ದೇನೆ. ನಗುನಗುತ್ತಾ ಇದ್ದೇನೆ. ನಿಮ್ಮ ವಿಶ್ವಾಸ, ಪ್ರೀತಿ, ಆಶೀರ್ವಾದ ಇರುವವರೆಗೂ ನನಗೆ ಏನೂ ಆಗಲ್ಲ” ಎಂದು ತಿಳಿಸಿದ್ದಾರೆ.

ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಸಿನಿಮಾ ನಿರ್ದೇಶಕಿ ಸುಮನಾ ಕಿತ್ತೂರು, “ದ್ವಾರಕೀಶ್ ಅಂಕಲ್ ಅವರಿಗೆ ಫೋನ್ ಮಾಡಿದೆ. ‘ಆರಾಮಾಗಿದ್ದೀನಿ ಪುಟ್ಟ, ಗಾಬರಿಯಾಗಬೇಡ ದ್ವಾರಕೀಶ್ ಜಿಂದಾ ಹೈ’ ಎಂದು ತಮ್ಮಎಂದಿನ ರೀತಿ ನಗಿಸಿ ನಕ್ಕರು. ಜತೆಗೆ ಈ ವಿಡಿಯೋ ಕೂಡ ಕಳಿಸಿದರು. ವ್ಯಕ್ತಿ ಇರುವಾಗಲೇ ಹೀಗೆ ಸುಳ್ಳು ಸುದ್ದಿ ಹಬ್ಬಿಸುವುದು ತರವೇ?” ಎಂದಿದ್ದಾರೆ.

ಮುಂಜಾನೆಯಿಂದಲೂ ಫೇಸ್‌ಬುಕ್‌, ವಾಟ್ಸ್‌ಅಪ್‌ಗಳಲ್ಲಿ ಸಾವಿನ ಸುಳ್ಳು ಸುದ್ದಿ ಹರಿದಾಡುತ್ತಿದೆ. ಸುದ್ದಿಯನ್ನು ಪರಿಶೀಲಿಸದೆ ಅನೇಕರು ಪ್ರತಿಕ್ರಿಯಿಸುತ್ತಿದ್ದಾರೆ.

Post a Comment

0 Comments