"ನಮ್ಮ ನಡೆ ಮತಗಟ್ಟೆ ಕಡೆ" ಹರಿಹರ ನಗರಸಭೆ ಕಾರ್ಯಾಲಯ ವತಿಯಿಂದ ಮತದಾನ ಜಾಗೃತಿ ಜಾಥಾ.!



ಮಂದಾರ ನ್ಯೂಸ್,ಹರಿಹರ : ಮತದಾರರು ಮತಗಟ್ಟೆ ಕಡೆ ಬಂದು ಮತದಾನ ಮಾಡುವಂತೆ ಅವರಲ್ಲಿ ಅರಿವು ಮೂಡಿಸುವಂಥ ಕಾರ್ಯಕ್ರಮವನ್ನು ಹರಿಹರ ನಗರಸಭೆ ಕಾರ್ಯಾಲಯ ವತಿಯಿಂದ ಇಂದು ಬೆಳಗ್ಗೆ ನಗರದ ಪ್ರಮುಖ ವೃತ್ತಗಳಲ್ಲಿ "ನಮ್ಮ ನಡೆ ಮತಗಟ್ಟೆ ಕಡೆ "ಇದು ಪ್ರಜಾಪ್ರಭುತ್ವದ ಹಬ್ಬ. ಎಲ್ಲರೂ ಮತಗಟ್ಟೆ ಕಡೆ ಬಂದು ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸುವಂತೆ ನಗರದ ಜನರಲ್ಲಿ ಅರಿವು ಕಾರ್ಯಕ್ರಮವನ್ನು ನಡೆಸಿದರು.
10 ಮೇ 2023 ರಂದು ಕರ್ನಾಟಕ ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಜಿಲ್ಲಾಡಳಿತ. ಜಿಲ್ಲಾ ಪಂಚಾಯತ್. ದಾವಣಗೆರೆ. ತಾಲೂಕ್ ಆಡಳಿತ ನಗರಸಭೆ ಕಾರ್ಯಾಲಯ ತಾಲೂಕು ಪಂಚಾಯತ್ ಹರಿಹರ ಇವರ ಸಂಯೋಗದಲ್ಲಿ "ನಮ್ಮ ನಡೆ ಮತಗಟ್ಟೆ ಕಡೆ" ಪ್ರಜಾಪ್ರಭುತ್ವದ ಹಬ್ಬದಲ್ಲಿ ಎಲ್ಲರೂ ಪಾಲ್ಗೊಳ್ಳಿ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಸದೃಢ ಪ್ರಜಾತಂತ್ರ ವ್ಯವಸ್ಥೆಯನ್ನು ಗಟ್ಟಿಗೊಳಿಸಿ. ನಮ್ಮ ಹಕ್ಕುಗಳನ್ನ ಚಲಾಯಿಸುವನ ಭವ್ಯ ಕರ್ನಾಟಕದ ನಿರ್ಮಾಣಕ್ಕೆ ಕೈಜೋಡಿಸೋಣ. ಮತದಾನ ಪವಿತ್ರವಾಗಿದ್ದು ಪ್ರಜಾತಂತ್ರ ವ್ಯವಸ್ಥೆಯಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕರು ತಮ್ಮ ಮತವನ್ನು ಕಡ್ಡಾಯವಾಗಿ ಚಲಾಯಿಸೋಣ ಎಂದು ಹರಿಹರ ನಗರ ಸಭೆಯ ಆಯುಕ್ತರಾದ ಬಸವರಾಜ್ ಐಗೂರ್ ಅವರು ನಗರ ಪ್ರದೇಶ ಹಾಗೂ ತಾಲೂಕಿನ ಜನರಲ್ಲಿ ನಮ್ಮ ಮಾಧ್ಯಮದ ಮೂಲಕ ಮನವಿ ಮಾಡಿಕೊಂಡರು.
ಇಂದು ಬೆಳಗ್ಗೆ ಮತದಾನ ಜಾಗೃತಿ ಕಾರ್ಯಕ್ರಮ ಹಾಗೂ ಧ್ವಜಾರೋಹಣವನ್ನು ನೆರವೇರಿಸಿ ನಗರದ ಪ್ರಮುಖ ವೃತ್ತದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ಹರಿಹರ ನಗರಸಭೆ ಕಾರ್ಯಾಲಯದಲ್ಲಿ, ಕರ್ತವ್ಯ ನಿರ್ವಹಿಸುವ ಎಲ್ಲಾ ವಿಭಾಗದ ನೌಕರರು, ಸಿಬ್ಬಂದಿಗಳು, ಪೌರಕಾರ್ಮಿಕರು ಮತ ಜಾಗೃತಿ ಜಾಥಾ ಕಾರ್ಯಕ್ರಮದ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Post a Comment

0 Comments