ಮಂದಾರ ನ್ಯೂಸ್, ಹರಿಹರ: ದಲಿತ ಚಳುವಳಿಯ ಸಂಸ್ಥಾಪಕರು ಕರ್ನಾಟಕದ ಅಂಬೇಡ್ಕರ್ ಎಂದೇ ಪ್ರಖ್ಯಾತಿ ಪಡೆದಿರುವ ಪ್ರೊಫೆಸರ್ ಬಿ ಕೃಷ್ಣಪ್ಪನವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕ ಹರಿಹರದ ವತಿಯಿಂದ ನಗರದ ಹೊರವಲಯದ ಬೈಪಾಸ್ ಹತ್ತಿರವಿರುವ ಮೈತ್ರಿ ಭವನದಲ್ಲಿ ಸರಳವಾಗಿ ಆಚರಣೆ ಮಾಡಲಾಯಿತು.
ಈ ಪುಣ್ಯ ಸ್ಮರಣೆ ಕಾರ್ಯಕ್ರಮದ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷರಾದ ಮಂಜುನಾಥ್ ಎಂ ,ತಾಲೂಕ್ ಸಂಚಾಲಕ ಮಂಜುನಾಥ ಜಿಎಂ ರಾಜನಹಳ್ಳಿ, ಸಂಘಟನಾ ಸಂಚಾಲಕ ವಿಶ್ವನಾಥ್ ಬಿ.ಕೆ, ಹರೀಶ್ ಎನ್ ರಾಜನಹಳ್ಳಿ, ಭಾಸ್ಕರ್ ಬಿ ಎಂ, ಕಿರಣ್ ಎಚ್ ಮತ್ತು ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
0 Comments